ಅದೆಷ್ಟೋ ಸ್ವಾತಂತ್ರ್ಯ ದಿನಾಚರಣೆಗ ಬಂದ್ ಹೋದರೂ ಈ ಒಂದ್ ದಿನ ನನ್ನ ಮನ್ಸ್ಂದ ಮರ್ತ್ ಹೋಕೆ ಸಾಧ್ಯನೇ ಇಲ್ಲೆ. ನಾ ಆಗ ಸುಳ್ಯ ಚರ್ಚ್ ಶಾಲೆಲಿ ನಾಕ್ ನೇ ಕ್ಲಾಸ್. ನಾವ್ಗೆಲ್ಲಾ ಆ ಸಮಯಲಿ ಸ್ವಾತಂತ್ರ್ಯ ದಿನಾಚರಣೆ ಬಾತ್ ತೇಃಳ್ರೆ ಏನೋ ಖುಸಿ. ಏಕೇಂತೇಳ್ರೆ ರಜೆ ಕಳ್ದ್ ಶಾಲೆ ಸುರು ಆದ ಮೇಲೆ, ಶಾಲೆಲಿ ಎಲ್ಲವು ಸೇರಿ ಮಾಡುವ ಸುರೂನ ಹಬ್ಬ!! ಅದರ ಗೌಜಿ, ತಯಾರಿ ಎಲ್ಲ ಹದ್ನೈದ್ ದಿನಕ್ಕೆ ಮುಂಚೆಂದಲೇ ಸುರು ಆದೆ. ವಲ್ಸ ಟೀಚರ್, ಸಿಸಿಲ್ಯಾ ಟೀಚರ್, ಆಲಿಸ್ ಟೀಚರ್ ಡ್ಯಾನ್ಸ್ ಕಲ್ಸಿರೆ... ಜಾರ್ಜ್ ಮಾಷ್ಟ್ರ್ ಬ್ಯಾಂಡ್ ಬಾರ್ಸಿಕೆ ಕಲ್ಸುದು... ವಿನ್ಸೆಂಟ್ ಮಾಷ್ಟ್ರ್ ಪೆರೇಡ್ ಕಲ್ಸಿಕೆ ಸುರು ಮಾಡ್ರೆ ಹೆಡ್ ಸಿಸ್ಟ್ರ್ ಪದ್ಯ ಹಾಡ್ಸಿಕೆ... ಅದೇ ವಂದೇ ಮಾತರಂ, ಪತಾಕೆ ಎತ್ತರ ಏರಲಿ ನಮ್ಮಯ... (ರಾಷ್ಟ್ರ ಗೀತೆ ಯಾಗೋಳು ಹೇಳುವ ಕಾರಣ ಅವ್ಕೆ ಕಲ್ಸುವ ಭಂಗ ಇಲ್ಲೆ!!) ಒಟ್ಟಾಗಿ ಇಡೀ ಶಾಲೆಗೇ ಒಂದು ಹಬ್ಬ... ಇನ್ನ್ ಯಾವ್ದರ್ಲೂ ಇಲ್ಲದ ಹೈದಂಗಳಿಗೆ ಕಾಯಿಚೊಪ್ಪು, ಸುಣ್ಣ ತಕಂಡ್ ಧ್ವಜಸ್ತಂಭ ಉಜ್ಜುವ ಕೆಲ್ಸ!! ಆಟಿ ತಿಂಗ ಬೇರೆ... ಪಾಮಾಜಿ ಹಿಡ್ದ್ ಧ್ವಜಾರೋಹಣ ಮಾಡಿಕೆ ಬಂದ ಅತಿಥಿಗಳೇ ಅವರೋಹಣ ಆಕೆ ಬೊತ್ತಾಲ್ಲಾ??!! (ಆಗಷ್ಟ್ 14ಕ್ಕೆ ಒಮ್ಮೆ ಧ್ವಜಾರೋಹಣ ಮಾಡಿಕೆ ಉಟ್ಟು.. ಟ್ರಯಲ್... ಮಾರ್ನೆ ದಿನ ಧ್ವಜ ಉಲ್ಟಾ ಹಾರಿಕೆ ಬೊತ್ತೂತ "ಮುನ್ನೆಚ್ಚರಿಕೆ ಕ್ರಮ"). ನಡುಲಿ ಚೂರು ಚರ್ಚೆ.. ನಾಳೆ ಲಾಡು ಕೊಟ್ಟವೆ... ಇಲ್ಲೆ ಮೈಸೂರ್ ಪಾಕ್ ಗಡ!!
ಇದಿಷ್ಟೂ ಪ್ರತಿವರ್ಷದ ದಿನಚರಿನಾಂಗೆ ಆದರೆ ಆ ವರ್ಷ ಒಂದ್ ವಿಶೇಷ ರೀತಿಲಿ ಬದಲಾವಣೆ ಮಾಡ್ದುಂತ ನಮ್ಮ ಹೆಡ್ ಸಿಸ್ಟ್ರ್ ಹೇಳ್ದೊ. ಧ್ವಜಸ್ತಂಭದ ಪಕ್ಕ, ಒಂದ್ ಸಾಲ್ ಲಿ ಕೆಲವು ಮಕ್ಕ ಸ್ವಾತಂತ್ರ್ಯ ಹೋರಾಟಗಾರರ ವೇಷ ಹಾಕಿ ನಿಲ್ಲುದೂಂತ. ಎಲ್ಲವ್ಕೂ ಖುಸಿಯೋ ಖುಸಿ.. ನಂಗೊಂದು ವೇಷ ಸಿಕ್ಕೆದೇಂತ!! ಎಲ್ಲರ ನಡುಲಿ ಎದ್ದ್ ಕಂಡರೆ ರೈಸಕ್ ಅಲ್ಲಾ??!! ನಮ್ಮ ಹೆಡ್ ಸಿಸ್ಟ್ರ್ ಕನ್ನಡ್ಕದ ಎಡೇಲಿ ನೋಡಿ.. "ಬಾರಾ.. ನೀನು ಗಾಂಧಿ ವೇಷಕ್ಕೆ ಬೆಶ್ಟ್!!" ಅಂತ ಓರ್ಡರ್ ಕೂಡ ಆತ್.. ನಾ ಆಗ ಇದ್ದದೂ ಹಾಂಗೆ.. ಚೊಯ್ಯ್ಂಗ್ ಲೆ ಮೋರೆ!! ಒಣ್ಕಟೆ ಬಾಡಿ!! ಹೊಟ್ಟೆ ಅಂತೂ ಹೊಳ್ಕೆ ಹೊಟ್ಟೆ!! ಅಲ್ಲಿಂದಲೂ 'ಗಾಂಧೀಜಿ ವೇಷ ಸುಲ್ಭಯಾ.. ಹಂಞ ಬಟ್ಟೆ ಸಾಕ್'ತ ಗೂಡೆಗಳ ಸಿಫಾರಸ್ ಬೇರೆ. ಆದರೆ ನನ್ನ ತಲೆ ಬಿಸಿ "ಗಾಂಧಿ ಕನ್ನಡ್ಕ" ಎಲ್ಲಿಂದ ರೆಡಿ ಮಾಡ್ದೂಂತ. ಮನೆಗೆ ಹೋಗಿ ಪೊಪ್ಪನೊಟ್ಟಿಗೆ ಅವರ್ದರ ಕೇಳ್ದೆ. ಪವರ್ ದರ ಹಾಕಿ ಕಣ್ಣ್ ಹೊಟ್ಟಿ ಹೋದು ಬೇಡಾಂತ ಕಟ್ಟೆ ಫ್ಯಾನ್ಸಿಗೆ ಎಳ್ಕಂಡ್ ಹೋದೊ.. ಪ್ಲಾಸ್ಟಿಕ್ ದ್ ಒಂದ್ ಸಿಕ್ಕಿತ್.. ಬಚ್ಚಾವು!! ಬೊಳ್ಪುಗೆ ನಮ್ಮ ರಿಕ್ಷಲಿ ಯಾಗೋಳು ಕರ್ಕಂಡೋವ "ದಾಮು ಮಾವ" ನೊಟ್ಟಿಗೆ ಮೂರ್ ಮೂರ್ ಸರ್ತಿ ಹೇಳ್ದೆ "ನನ್ನ ಗಾಂಧಿ ಪಾರ್ಟ್ ನೋಡಿಕೆ ಬಂದೇ ಬರೊಕು". ಕತ್ತಲೆಗೂ ಸರಿ ನಿದ್ದೆ ಇಲ್ಲೆ.. ಧ್ವಜಾರೋಹಣದೇ ಕನ್ಸ್. ಅಮ್ಮ ಬೊಳ್ಪುಗೆ ತಲೆಗೆ ಬೊಟ್ಟಿದರ್ಂದಲೇ ಗೊತ್ತು... ನಾ ನಿದ್ದೆಲೂ ಜನಗಣಮನ ಹೇಳ್ತಿದ್ದೇಂತ!!.
ಡ್ರೆಸ್ ಮಾಡ್ಸಿಕೆ ಎಲ್ಲಾ ನಮ್ಮಂದ ದೊಡ್ಡವೇ. ನನ್ನ ಅಕ್ಕ ಅಂತೂ ಪಂಚೆನ ಮೂರ್ ಮೂರ್ ಸರ್ತಿ ಮೊಡ್ಚಿ ಉಡ್ಸಿತ್. ಬರೇ ಉಡ್ಸಿರೆ ಸಾಕಾ?? ಜಾರಿಕೆ ಬೊತ್ತಾಲ್ಲಾ... ಎಳ್ದ್ ಗಂಟ್ ಹಾಕಿ " ಫುಲ್ ಟೈಟ್"!! ಆಚೆ ನೋಡ್ರೆ ಲಾಲ್ ಬಹದ್ದೂರ್ ಶಾಸ್ತ್ರಿ... ಅವನ ಚಾನ್ಸ್.. ಕಚ್ಚೆ ಪಂಚೆ ಮೇಲೆ ಬೆಲ್ಟ್ ಕಟ್ಟಿ ಜುಬ್ಬ ಹಾಕಿ ಆರಾಮಲಿ ನಿತ್ತುಟು!! ನಂಗೋ ಹೊಟ್ಟೆ ಗಟ್ಟಿ ಆಕೆ ಸುರಾಗ್ತುಟ್ಟು... ಈ ವೇಷ ಬಿಚ್ಚ್ ಕನಮುಟ್ಟ "ಒಂದಕ್ಕೆ" ಹೋಕೂ ಇಲ್ಲೆ!! ಅದೇ ಹೊತ್ತ್ ಗೆ ಆಚೆಂದ ಪಟಕ್ ಸದ್ದ್ ಕೇಳ್ದೆ. ನೋಡ್ರೆ ಯಾರೋ ಧಡಿಯ ನನ್ನ "ಗಾಂಧಿ ಕನ್ನಡ್ಕ"ದ ಮೇಲೇನೇ ಕುದ್ದುಟು. ಗಾಂಧೀಜಿ ವೇಷದ ಬಹು ಮುಖ್ಯ ಅಂಗನೇ ಹೋತಲ್ಲಾ. ನಾ ಮರ್ಡಿಕೆ ಒಂದೇ ಬಾಕಿ. ಇನ್ನ್ ಎಂತ ಮಾಡ್ಡು?? ಅಷ್ಟೊತ್ತಿಗೆ ನಮ್ಮೆಲ್ಲರ ಉಸ್ತುವಾರಿ ಸಿಸಿಲ್ಯಾ ಟೀಚರ್ ಬಂದೊ. ನನ್ನ ಚಪ್ಪೆ ಮೋರೆ ನೋಡಿ.. ಅವರ್ದೇ ಕನ್ನಡ್ಕ ತೆಗ್ದ್ ನಂಗೆ ಇಸಿದೊ.. ಅದ್ ನೋಡ್ರೆ ಪವರ್. ನಂಗೆ ಕಾಂಬೊದು ಎಲ್ಲಾ ಬರೇ ಮಯ ಮಯ ಅಲ್ಲ..ಅಯೋಮಯ!! ಅಂತೂ ಮೆಲ್ಲ ನಡ್ಕಂಡ್ ಹೋಗಿ ಧ್ವಜ ಸ್ತಂಭದ ಕರೇಲಿ ನಿತ್ತೊ. ನನ್ನ ಅಜ್ಜಿ ಪುಣ್ಯನೋ ಏನೋ ಮಳೆ ಇಲ್ಲೆ. (ಎಷ್ಟೋ ವರ್ಷ ಕೊಡೆ ಹಿಡ್ಕಂದ್ ಧ್ವಜ ಹಾರ್ಸ್ಯೊಳೊ!!) ನಂಗೋ ನಿತ್ತಲ್ಲಿಂದಲೇ ಸಂಕಟ ಆಕೆ ಸುರು.. ಖಾಲಿ ಮೈ .. ಚಳಿ.. ಕನ್ನಡ್ಕಲಿ ನೋಡ್ರೆ ತಲೆ ತಿರ್ಗಿದೆ. ಹೊಟ್ಟೆ ಇಸುದೂಂತ ಅಮ್ಮ ಬೇರೆ ಸಮಾ ತಿನ್ಸಿ ಕಳ್ಸ್ಯೊಳೊ.. ನಿಲ್ಲಿಕೆ ತ್ರಾಣ ಇರ್ಲೀಂತ.. ಇತ್ತ ನೋಡ್ರೆ ಅಕ್ಕ ಎಳ್ದ್ ಕಟ್ಟಿದ ಪಂಚೆ ಗಂಟ್ ಗಟ್ಟಿಯಾಗಿ ಉಚ್ಚೆ ಅಂಡಿಕೆ ಬೇರೆ ಸುರಾಗ್ತುಟ್ಟು..(ಮಹಾತ್ಮ ಗಾಂಧೀಜಿನೂ ಉಪವಾಸ ಕುದ್ದಿರ್ಕಾಕನ ಆ ನಮೂನೆ ಸಂಕಟ ಅನುಭವ್ಸಿರ್ಕಿಲೆ!!) ಒಮ್ಮೆ ಜನಗಣಮನ ಹಾಡಲಿ ದೇವ್ರೇಂತ ಮನ್ಸ್ ಗೆ ಬಂದ ದೇವ್ರ್ ಗಳೆಲ್ಲಾ ನೆನ್ಸಿಕಂಡೆ. ಅಂತೂ ರಾಷ್ಟ್ರ ಗೀತೆ ಮುಗ್ತ್. ತಿರ್ಗಿ ವಾಪಸ್ ನೆಟ್ಟಂಗೆ ಹೋಕೆನಾರ್ ಕಂಡದೆನಾ ಆ ಪವರ್ ಕನ್ನಡ್ಕಲಿ? ಕನ್ನಡ್ಕ ತೆಗ್ದರೆ ಮೊರ್ಯಾದೆ ಪ್ರಶ್ನೆ.. ಅದೇ ದೃಷ್ಟಿಲಿ ವಾರೆ ವಾರೆ ಹೋಗ್ತೊಳೆ..ನನ್ನ ಕರೆಲಿ ಒಂದ್ ಸಣ್ಣ ಗೂಡೆ ಕಿತ್ತೂರ ಚೆನ್ನಮ್ಮ... ಅದರ ಕತ್ತಿ ಅದರಷ್ಟೇ ಉದ್ದ ಇತ್ತ್... ಆ ಕತ್ತಿನ ಕೊಡಿ ಹಿಡ್ಕಂಡೇ ಡ್ರೆಸ್ಸಿಂಗ್ ರೂಮ್ ಮುಟ್ಟ ಹೋದೆ. ಹೋದವನೇ ಪಂಚೆನ ಚಡ್ಡಿ ತೆಗ್ದಾಂಗೆ ಜಾರ್ಸಿ , ಮೈಗೆ ಹೊದ್ದ ಬಟ್ಟೆನನೇ ಸುತ್ತಿಕಂಡ್ ಟ್ಯಾಂಕ್ ಖಾಲಿ ಮಾಡಿಕೆ ಒಡ್ದೆ!!! ಅದೇ ಕೊನೆ.. ಅಲ್ಲಿಂದ ಮೇಲೆ ಯಾವುದೇ ವೇಷ ಹಾಕಿಕೆ ಹೋತ್ಲೆ.. ಆ ದಿನದ ನನ್ನ ಎಲ್ಲಾ ಗುರುಗಳ ಮನಸ್ಪೂರ್ತಿಯಾಗಿ ನೆನ್ಸಿಕಣ್ತೊಳೆ... ಅವರ್ಂದಾಗಿಯೇ ನಾ ಇಷ್ಟ್ ಬರಿತೊಳದ್....
ಇತರೆ ಅರೆಭಾಷೆ ಬರಹಗಳಿಗೆ ಇಲ್ಲಿ ಹುಡ್ಕಿ - https://arebhasheminpuli.blogspot.in/
ಡಾ. ಪುನೀತ್ ರಾಘವೇಂದ್ರ ಕುಂಟುಕಾಡು
Comments