9ik

ಇಸ್ರೇಲ್‌ನ ಮೊಸ್ಸಾದ್ ಮತ್ತೆ ಸಣಪನ ನಾಯಿಗ

ಕುಬೆಲಿ ಕುದ್ದ ಕುರೆ‌ಗ, ಚಾಳೆ ಅವರಪ್ಪಂದರ್‌ ನೆಟ್ಟ್‌ಸಿದಿ‌ತೇಳ್ವಾಂಗೆ ನಮ್ಮ ಚಾಳೆ ಹಿತ್ಲ್‌ಗೆ ಬುಡಾದೆ ಬಂದ್ ದಿನಾ ಹೊಡಿತೆಗೆತಿದ್ದೊ‌.

ಈ ಅಮ್ಮ ಕೊತ್ತೊಳಿಕೆನ ಬೆಡಿನಾಂಗೆ ಹಿಡ್ದರು,ನಮ್ಮ ಕಾಳ ಬೊಳ್ಳುನು ಬುಡಲಿ ಕುದ್ದ್‌ರ್ಸಿ ಎಷ್ಟ್‌ಬೊಗಳ್ಸಿರೆನು ಗುಮ್ಮನ‌ ತೆಗೆದೇಲೇ ಈ ಕುರೆಗ.

ಹಿಂಗಾಗಿ ಮೊನ್ನೊಮ್ಮೆ ರಜೆದಿನ ಬೆಡಿ ಹೆಗಲ್‌ಗಿಸಿಕಂಡ್ ಪಾರಕೆ ನಾನೆ ಹೋಕಾಗಿ ಬಾತ್‌.

ಹಾಂಗಿರಿಕಾಕನ ಹೋವದಾರಿಲಿ ತೋಟದಕರೆಲಿ  ಮೋನ ಸಣಪ ಹೊತ್ತೇರ್ವ ಹೊತ್ತ್‌ಲೆ ಅಡ್ಡ ಸಿಕ್ಕಿದೋ. ಮನೆನ ಎಲೆಡ್ಕಂದ ದಾರಿಕರೆಲಿ ತಿಂದದ್ಕೆ ಒದ್ಗ್‌ ಜಾಸ್ತಿತೇಳಿ ಸಣಪ ಚೀಲಕೆ ಕಣ್ಣಾಕಿದೆ.

ಇಬ್ಬೊರು ಕುದ್ದ್‌ಕಂಡ್ ಪುರ್ಸೋತ್‌‌ಲಿ  ಪಟ್ಟಾಂಗ ಹೊಡೆತಿದ್ದ. ಇದೆಲ್ಲ ವಿಸೇಸ ಏನಲ್ಲ ಬುಡಿ ಏಕೆತೇಳಿರೆ ನಮ್ಮ ಕುಡಕಲ್ಲ್‌ಲೆಲ್ಲ ಪಟ್ಟಾಂಗಕೆ ನಾಮಸಿಲ್ಲೆ ತೋಟದ ಕರೆಲೊ ಗದ್ದೆ ಪುಣಿಲೊ  ಅಲ್ಲೋ ಪಾರೆಕಟ್ಟ್‌ ಹಕ್ಕಲೆ 

ಇದ್ದೇ ಇದ್ದದೆ ...

ನಾವ್ಗೆಲ್ಲ ಕುದ್ರಿಕೆ ಸೆರಿಗಟ್ಟ್‌ ಜಾಗೆ ಬೇಕುತಿಲ್ಲೆ ಬಾಯಿ ಅಡ್ಪ ವಿಸಯ ಇದ್ದರೆ ಸಾಕ್‌...

ಹೀಂಗೆ ಹಾಳ್ ಮೂಳು ಮಾತಾಡಿಕಂಡಿರಿಕಾಕನ ಸಣಪನ ಐದ್‌ ನಾಯಿಗ ಚೋಡಿನ ನೀರ್‌ಲಿ ಪಳ್ಳ ಹೊಡ್ಕಂಡ್ ಕಂಬಳದ ಕೋಣಗಳಾಂಗೆ ಉದಾಕೆ ಆಚೆಕರೆವರೆಗೆ ಓಡಿ,ಅಲ್ಲಿಂದ ತಿರ್ಗ ನಮ್ಮಕ್ಕಲೆ ಓಡಿಬಂದ್ ನೆಲಲಿ ಕಂಕಣಿ ಬೀಳ್ತಿದ್ದೊ.ಬಿಸ್ಲ್ ಅಲ, ನೀರ್‌ಕಂಡಲೆಲ್ಲ ನಾಯಿಗಳಿಗೆ ಕಾಲಿಸದರೆ ಸಮಾಧಾನ ಇಲ್ಲೆಕಂಡದೆ.

ಇದರೆಡೆಲಿ ನಾಯಿಗಳ ಸೆರಿ ನೋಡ್ರೆ ಯಾಗೋಳು ಇರಕಾದ ಐದರ್ಲಿ ಒಂದರ ಪತ್ತೆಇಲ್ಲೆ.ಎಲ್ಲೊ ನೆಲ ಮೂಸಿಕಂಡ್‌ ಹೋಗಿರ್ದುತೇಳಿ...ನೆನ್ಸಿದೆ

ಇದೆಂತ ಸಣಪ ಹಬ್ಬಕೆ ಒಂದ್ ಬೊಗ್ಗನ ಹೊಡ್ದ್ ಗೈಪುಮಾಡ್ಯಳರಾ ಒಳ್ಳತ ಇತ್ತ್‌ಬುಡಿ ನೀವ್ಗೇನ್ ಮಾಂಸ ಇದ್ದರಾತಲ..ತೇಳಿ ನಾ ಸಣಪಂಗೆ ಮಾತ್‌ಲೆ ಜುಂಟಿಕೆ ನೋಡ್ದೆ.

"ಹಹ್ಹ...ಹಾಂಗೆಲ್ಲಯ.

ಆ ನಾಯಿ ಕಾಣೆನೊ ಅಲ್ಲ ಯಾವ ರಣ ಅದರ ಹಿಡ್ತೊ ಗೊತ್ಲೆ.ಅದ್‌ ಮಾತ್ರ ನಿನ್ನೆಂದ ಅದ್ ಕಾಣ್ತಿಲ್ಲೆಯ.

ನಿನ್ನೊಂದ್ ಸಂಗತಿ ಅಲ....

ವಿಸಯ ಕೇಳ್ಯನ,

ಯಾದೊಂದ್‌ ನಾಯಿ ಹಿಂಬೋತಾಕನ ಮನೆಬಾಗ್ಲ್‌ಗೆ ಬಂದಿತ್ತ್‌ಯಾ,ನಂಗೆ ಅದರ ಗಂಟ್ಲ್‌ಲಿದ್ದ ಚರ್ಮದ ಬೆಲ್ಟ್‌ ನೋಡಿ ಇದ್ ಎತ್ತಂದೋ ಬೂತಕಲ್ಲ್ ಕುಂಚಡ್ಕ ಗೂಡ್‌ಂದ ತೊಪ್ಪುಸಿ ಬಂದದ್‌ತ ಗೊತ್ತಾತ್‌.  

ಸುಮಾರ್‌ ಸರ್ತಿ ಬುಡಾದೆ  ಬೆರ್ಸಿದೆ.

ಸುಟ್ಟೋಕೆ,ಈ ದಾರಿ ತಪ್ಪಿಬಂದ ನಾಯಿ ಸೀದಾ ತಿರ್ಗ ನೆಲ ಮೂಸೆಂಡ್ ಮನೆಗೋದು ಬುಟ್ಟು ನಮ್ಮ ನಾಯ್ಗಳ ಗೂಡು ಈ ಹುಲಿಮಾಳಕೆ ತಲೆಹಾಕಿ ಉಪದ್ರ ಕೊಡುವ ಕಾರ್ಬಾರ ಮಾಡಿಕೆ ನೋಡ್ತ್.

ಹಿಂಬೋತುಂದ ಹತ್ತ್‌ ಹನ್ನೊಂದ್ ಗಂಟೆವರೆಗೆ ವೇ...ರ್‌ವೇ.....ರಾಗ ಕೇಳಿನಂಗೆ ಬಿಡ್ದೋಗಿ , ಅದರ ಬೆರ್ಸಿ ಬೆರ್ಸಿ ಸಾಕಾತ್‌‌. ಇನ್ನ್‌ ಸುಟ್ಟೆ ಹೋಗಲಿತೇಳಿ ಗೂಡುನ ಪೊಡಿ‌ತೆಗ್ದ್‌ ನಮ್ಮೊವ್ಗಳ ಹಿಡಿಕೂಡ್ಸಿ ಬುಟ್ಟೆ.

ಲೋಕನೆ ನಮ್ಮದ್‌ತೇಳಿ ಆರ್ಬಾಯ್‌ ಕೊಟ್ಟ್‌ಕಂಡ್‌ ಬೆರ್ಸಿಕಂಡ್ ಹೋದೊ ಮಾರಾಯ...

ಮತ್ತೆ ಎತ್ತ‌ಹೋದತ ಗೊತ್ತಾತ್ಲೆ....

ಅದರ ಕಚ್ಚಿ  ಸೆಜ್ಜಿ ಮಾಡಿರ್ವೋ ಇಲ್ಲರೆ ಇವು  ಮನೆಗೆ ಇರ್ಲೇ ಬಂದಿರಿಕಿತ್ಲೆ ....ಹುಹ್.ನನ್ನ ನಾಯಿಗ ಉಟ್ಟಲೆ, ಹಿಡಿ‌ಕೂಡ್ಸಿ ಬುಟ್ಟರೆ  ಆನೆನನೂ ಮೊಗ್ಚುವೋ...

ಹಾಂಗೆ ಹೋದರ್ಲಿ ಹೋದ  ಆ ದಪ್ಪಬೀಲದವ ಪಕ್ರುನಾಯಿ ತಿರ್ಗಿ ಬಾತ್ಲೆ....

ಬಾದೋತ ಕಂಡದೆ....ನೋಡ

ಹಹ್ಹ ಹಹಹ...ಸಣಪ,

ನಂಗೆ ನಿಮ್ಮ ನಾಯಿಗಳ ಕಾರ್ಬಾರ ನೋಡಿರೆ ಯಾಗೋ ಓದಿದ್ದ ಈ ಇಸ್ರೇಲ್ ಆರ್ಮಿ ನೆಂಪಾತುಟ್ಟು."ಜುಂಟಿರೆ ಕೈ‌ನನೇ ತಿನಕು‌ತೇಳ್ವ"ಗಾದೆನಾಂಗೆ ಏನೇಳ್ರೆ....?

ಅದೆಂತಯ ಇಸ್ರೇಲ್‌ಗೂ ನನ್ನ ನಾಯ್ಗಳ ನೊಡುಲಿ ಹಾಂಗೊಂದ್ ಸಂಬಂಧ" ಅಂತೇಳಿ ಸಣಪ ಪಟ್ಟಾಂಗ ದೊಡ್ಡದಾಕೆ ಬಾಗ್ಲ್‌ ತೆಗ್ದೊ.

ನೀವು ಕೇಳ್ಯರಿ ತೇಳಿರೆ ಹೇಳ್ನೆತೇಳ್ದೆ..

ಸಣಪ "ಹೊತ್ತುಟ್ಟು ಬುಡು,

ಹೆಣ್ಣ್ ಹೊತ್ತೇನ್‌ತ ಕೇಳಿರೆ ಕುರೆಗ ಬಂದಿ‌ದ್ದೊ ಓಡ್ಸಿಕೆ ಹೊತ್ತಾತ್‌ತೇಳ್ನೇ...ಹೆಹ್ಹೆಹೆ ಆಕಿಲೆನ.."ತೇಳ್ದೊ

ಅಲ್ಲಿಗೆ ನಂಗೆ ನಮ್ಮ ಎರ್ಡ್‌ಕಾಲ್‌ನ ಹುಲಿನ ಬೆಟ್ರಿ‌ ಗೊತ್ತಾತ್.

****

ಸಣಪ ಈ ಇಸ್ರೇಲ್‌ತೇಳ್ದು ಒಳದೆಲ್ಲಿತೇಳಿರೆ ಪಶ್ಚಿಮ ಏಶ್ಯಾ ಮತ್ತೆ ಆಫ್ರಿಕಾ ಸೇರ್ವಲ್ಲಿ ...

ಬಾರೀ ಸಣ್ಣ ದೇಸ, ಅಬ್ಬಬ್ಬಾತೇಳಿರೆ ಕೊಡ್ಗ್‌ನು ಕನ್ನಡ ಜಿಲ್ಲೆನ ಸೇರ್ಸಿದಷ್ಟ್ ಇರ್ದು. ಸಣ್ಣದ್‌ ಸಂಗತಿ ಆದುಲೆ ಇಲ್ಲಿ , ಏಕೆತೇಳಿರೆ ಅವರ ನೆರೆಕರೆನ ಎಂಟತ್ತ್ ದೇಸಂಗ ಸಿರಿಯಾ ಇರಾಕ್ ಈಜಿಪ್ಟ್ ಮತ್ತೆ ಹನಿ ದೇಸಗ ಯಾಗೋಳು  ಕಡ್ಪೊತ್ತಿ ಹಿಡ್ಕಂಡ್  ಎದೆಮೇಲೆ ಬಾಕನ,ಬಂದವ್ಕೆ ಪೂರ ಕುಂಡೆಗೆ ಚೂನ ಹೊಡ್ದ್‌ ಕಳ್ಸಿದ  ಈ ಇಸ್ರೇಲ್‌ನ ಜನಂಗ ಅರ್ಥಾತ್ ಎಲ್ಲವೂ ಆ ದೇಸದ ಸೈನಿಕರ್‌ಗ...

ಇನ್ನ್ ಚಂಯ್ ಪಂಯ್ ತೇಳ್ವ ಸಣ್ಣ ಉಮ್ಮುಣಿಗ ಕಚ್ಚಿನೆ ಕಚ್ಚಿನೆ ತೇಳಿ  ಕೆಬಿ ಹಕ್ಕಲೆ ಹಾರ್ಕನ  ಸುಮ್ಮನೆ ಬುಡ್‌ವೊನ ನೀವೇ ಹೇಳಿ ಈ ಇಸ್ರೇಲ್‌ನವು.

ಹಾಂಗೆ ಬಂದ ದೇಶ ದೇಶಂಗಳನೇ ಬುಡಮೇಲೆ ಮಾಡ್ದವರ ಎದುರ ಕೆಲ ಜನ ಒಂಟಿ ಶಿಕಾರಿಗೆ  ಎದೆಒಡ್ಡುಸಿ "ನಿಮ್ಮ ನಾ ಮೊಡ್ಗುದುಲೇ"ಅಂತೇಳ್ದವು ಇದ್ದಗಡ ಅಂತ ಸಾವಿರಲಿ ಒಬ್ಬ  ಈ ಯಹ್ಯಾ ಅಲ್ ಮಶ್ಹಾದ್...!ತೇಳಂವ ಇತ್ತ್‌ಗಡ ಸಣಪ.

ಯಹ್ಯಾ‌ ಅಲ್‌ ಮಶ್ಹಾದ್.. ಇಂವ

ಈಜಿಪ್ಟ್‌ನ ಬೆಹ್ನಾ ತೇಳ್ವ ಊರುಲಿ 1932ರ್ಲಿ ಹುಟ್ಟಿದ ಕೂಸು ಯಾಹ್ಯಾ ಅಲ್ ಮಶ್ಹಾದ್, ಸುರುಗೆ ಅಲ್ಲಿನ ಅಲೆಕ್ಸಾಂಡ್ರಿಯಾ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಎಂಜನೀಯರಿಂಗ್ ಓದಿತ್.

ಅದಾಗಿ ಅದೆ ವಿಸಯಲಿ ಹೆಚ್ಚಿಗೆ ಓದಿ ಬೆನ್ನ್‌‌ತಟ್ಟ್‌ಸಿಕಂಡ್‌ ಅಲ್ಲಿಂದ ಲಂಡನ್‌ಗೆ ಮತ್ತಲ್ಲಿಂದ ಮಾಸ್ಕೋಗೆ ಹಾರಿ ಲಾಯ್ಕ್‌ಲಿ ಬರಕಲ್ತ್‌ ಡಾಕ್ಟರೇಟ್ ಕೂಡ ತಕಂಡ್‌ಬುಟ್ಟತ್‌ ಅದಾಗಿ ಅದೇ  ಕಾಲೇಜ್ ಅಲೆಕ್ಸಾಂಡ್ರಿಯಾ ಯೂನಿವರ್ಸಿಟಿಲಿನೇ ಆ ಕಾಲಕೆ ಹೆಗ್ಗೆ‌ತೇಳ್ವಾಂಗೆ ಸುಮಾರ್‌ ಗಟಾನುಗಟಿ ನ್ಯೂಕ್ಲಿಯರ್ ಎಂಜನೀಯರ್‌ಗಳ ಪಟ್ಟಿಲಿ ಇವನ ಹೆಸರೂ ಸೇರಿಬುಟ್ಟತ್.

ಸಣಪಂಗೆ ನ್ಯೂಕ್ಲಿಯರ್ ನೂಕೊಲುತ ಕೇಳ್ತ್‌ಕಂಡದೆ.ಹನಿ ಕಣ್ಣ್‌ ಸಣ್ಣದ್ ಮಾಡ್ದೊ...

"ಸಣಪ ಈ ನ್ಯೂಕ್ಲಿಯರ್ ಕೆಲ್ಸ ಅಂತಿಂತ ಕೆಲ್ಸ ಅಲ್ಲ ಕಣ್ಣ್‌ಗೆ ಕಾಣದ ಅಣು‌ಗಳ  ಬೆರ್ಕೆ ಮಾಡಿ ಹೊಸ ಪಾಕ ಬರ್ಸಿ ಅದಂರ್ದ ಒಳ್ಳದ್ಕಾದರೆ ಕರೆಂಟೊ...ಊರ್‌ ಹಾಳ್ ಮಾಡಕ್‌ತೇಳಿರೆ ಬಾಂಬ್ ತಯಾರ್‌ ಮಾಡಕ್.

ಬಾಂಬತೇಳಿರೆ ನಮ್ಮ ಬೊಜ್ಜದ ಮನೆನ ಗರ್ನಾಲ್‌ನಂಗೆ ಡೀಂ....ಮ್ ತ ಒಮ್ಮೆ ಸಬ್ದ ಮಾಡಿ ಸುಮ್ಮನಾವಂತದಲ್ಲ. ನಿಮ್ಮ ನೆಸೆ ಕರ್ಡಿಗೆನಷ್ಟಿರ್ವ ಬಾಂಬ್‌ಸಾಕ್ ಒಂದ್ ದೇಸನ ಗುಡ್ಸಿ ಗುಂಡಾಂತರ ಮಾಡಿಕೆ.

ಗೊತ್ತಾತಲ ನ್ಯೂಕ್ಲಿಯರ್ ವಿದ್ಯೆನ ಬೊರ್ಕತ್ ಹಲ್ಕಟ್‌ಗ...

ಅದ್‌ಬುಡಿ

ಇಂವ ಇಂತಾ ದೊಡ್ಡ ಯುನಿವರ್ಸಿಟಿ ಅಲೆಕ್ಸಾಂಡ್ರಿಯಾಲಿ ಓದಿರೆನೂ ಸಹ ‘ಅತೀ ಬುದ್ದಿವಂತರ್‌ಗೆ ಪ್ರಪಂಚ ಜ್ಞಾನ ಕಡ್ಮೆ’ತೇಳ್ವ  ಮಾತನ ಮತ್ತೊಮ್ಮೆ ಸಾಬೀತ್ ಮಾಡಿಕೆ ಇಂವ “ಈಜಿಪ್ಟಿಯನ್ ಆಟೋಮಿಕ್ ಎನರ್ಜಿ ಅಥೋರಿಟಿ”ತೇಳ್ವ ದೊಡ್ಡ ಕಂಪೆನಿಗೆ ಕೆಲ್ಸಕ್ಕೆ ಸೇರ್ತ್,

 ಆದರೆ ಇಲ್ಲಿ ಸೇರ್ದ್‌ ಅವಂನ ತಪ್ಪು ನಿರ್ಧಾರ ಆಗಿತ್ಲೆ ಆದರೆ  ಮುಂದೆ 1980 ರ್ಲಿ  ನಡ್ದ  “ಇರಾಕ್ಸ್ ನ್ಯೂಕ್ಲಿಯರ್ ಕೋ ಅಗ್ರಿಮೆಂಟ್ ವಿತ್ ಫ್ರಾನ್ಸ್”ತೇಳ್ವ  ಒಪ್ಪಂದ ಒಂದಕೆ ದಸ್ಕತ್ ಹಾಕಿ ಈ ಅಣು ವಿಜ್ಞಾನಿ ಇರಾಕ್‌ಗೆ ಹೊರ್ಟತಲಾ ! ಅದ್ ಮಾತ್ರ ಹೊಟ್ಟೆಗೆ ಹುಗ್ಗೆ‌ತಿಂಬ ಕೆಲ್ಸ ಅಂದ್‌ನ ಕಾಲಕೆ  ಮಾತ್ರ ಅಲ್ಲಾಗಿತ್ತ್. 

ಏಕೆತೇಳ್ರೆ  ಸಣಪ ಈ ನ್ಯೂಕ್ಲಿಯಾರ್ ತಯಾರ್‌ಮಾಡ್ವ ಒಪ್ಪಂದದ ಮೂಲ ಉದ್ದೇಸ ಇವರ ಲೆಕ್ಕದ ಕೋಮಣ‌ತುಂಡುನಾಂಗಿರ್ವ ಇಸ್ರೇಲ್ ‌ತೇಳ್ವ ದೇಸಕೆ ಬಾಂಬ್‌ಹಾಕಿ ಮೊಡಿಮಾಡಿ ಅವ್ಕೆ ಗುರ್ಜಿ‌ಕಟ್ಟುದಾಗಿತ್ತ್‌.

ಹಹ್ಹಹಹ.....

ಸಣಪ ಹೇಳ್ದೋ

"ಅಯ್ಯೋ ಅಪ್ಪಿಯ  ನಾವುಕಲ್ತ‌‌ ವಿದ್ಯೆ‌ಲಿ ಕಡೆಕೊಡಿನೋಡಿಕಾಗದ್ ದುಡ್ಡುಕೊಟ್ಟವ್ಕೆ ಕೆಲ್ಸ‌ಮಾಡೊಕು ,ಬೇಕಾದಂಗೆ ಇರಕ್ ಅದರ್ಲೆಂತ... ಕಡೆಕೊಡಿ ಸ್ಹೀಂ-,,ಕೈಂಯಿ ನೋಡಿಕಿಲ್ಲೆ" 

ಏನೇಳ್ಯ.....

ಹೌದು ನೀವೇಳ್ದೂ ಸೆರಿನೆ, ನಿಮ್ಮಾಂಗೆ ಹೇಳೊವು ನಮ್ಮೊಳೊಗೆ ಎಷ್ಟೊ ಜನಗ ಇದ್ದವೆ ‌.ಅಲ್ಲದೆ ಈ ಸತ್ಯಸಂಗತಿ ಎಲ್ಲ ಕೆಲ್ಸಕೂ ಒಂಬಿದೆ.

ಇಲ್ಲಿ ಹಾಂಗೇಳ್ದವರ್ಲಿ ಈ ಮಶಾದ್‌ ಒಬ್ಬ.ನಾ ಕಲ್ತ ವಿದ್ಯೆ,ಕೆಲ್ಸನ ದುಡ್ಡು ಕೊಟ್ಟ ಯಾರಿಗೆ‌ಬೇಕಾರ್ ಮಾಡಿಕೊಟ್ಟನೇ ತ ಹೇಳ್ದ್  ಅವನ ಕಾಟಕೆ ಕತ್ರಿಕೊಳ್ಳಿ ಅವನೆ ಪಣೆಲಿ ಕಡ್ದಿಸಿದಂಗಾತ್.

ಆದರ್ನೂ,  ಸಣಪ

ಮಾಟ-ಚಿದ್ರತೇಳುವಂತದ್‌ ಮಾಡಿರೆ,

ಮಾಡ್ಸಿದವ ಮತ್ತೆ ಮಾಟಕೆ ಬಿದ್ದವ ಹಾಳಾದಲ್ಲದೆ ಮಾಟಮಾಡ್ದವಂಗೆ ಯಾವ ದೋಸ ಇಲ್ಲೆತೇಳ್ದು ಕಣ್ಣ್‌ಗೆ ಕಾಂಬ ಸತ್ಯ.ಆದರೆ ಈ ನ್ಯೂಕ್ಲಿಯಾರ್ ತೇಳುವ ಕಣ್ಣ್‌ಗೆ ಕಾಣದ ಕೆಲ್ಸ ಒಪ್ಪಿಕಂಬಕೆ ಮುಂದೆ,ಯಾವ ದೇಸಕೆ ಯಾರ ಬುಡಕೆ ಮೊದ್ದು ಅರೆತೊಳದ್‌. ಇಂತದರೆಲ್ಲ ತಿಳ್ಕಂಡೆ ಪಾಕ‌ಮಾಡಿ ಹೊರ್ಡಕು.

ಅದಲ್ಲದೆ ಆಗ‌ನ ದಿನಗಳ್ಲಿ ಇಸ್ರೇಲ್‌ನ ಗಡಿಲಿ ಕಫ ಅಣ್ಣಾ‌ತೇಳಿ ಕೆಮ್ಮಿದವನನೂ ಗುಂಡ್‌ಹೊಡ್ದ್‌‌ ಗಡಿನ ಬೇಲಿಗೆ ಕಂಕಣಿ ಕಟ್ಟಿ ನಮ್ಮ ಎದ್‌ರ  ಯಾರೂ ಉಸ್ಕ್‌ಡಮ್ಮು ತೆಗೆಕೆ‌ಬೊತ್ತುತ ಪ್ರಪಂಚದ ಎಲ್ಲಾ‌ದೇಸಕೆ "ಕೇಳಿಕಲಿ‌ ನೋಡಿ ಕಲಿ " ತ ಕಾರ್ಯಕ್ರಮ ಮಾಡತಿದ್ದ ದೇಸ ಇಸ್ರೇಲ್ ಮಾತ್ರ.

ಇಲ್ಲಿ ಸಣಪ,

 ಈ  ಬೆಚ್ಚ ರಕ್ತದ ಅಲ್ ಮಶ್ಹಾದ್‌ನ ಯೋಚನೆ ಏನ್‌‌ತೇಳಿರೆ ಇಸ್ರೇಲ್‌ತೇಳ್ವ ಒಂದ್‌ ಹಿಡಿಮುಷ್ಟ್‌ ಇರ್‌ವ ದೇಶ ನನ್ನೇನ್ ಮಾಡಿಕಾಕಿಲೆ‌ತೇಳಿ,ಅಲ್ಲದೆ ನನ್ನ ಬೆನ್ನಿಂದೆ ಇರುವ ದೇಶ ಇಸ್ರೇಲ್‌ಂದ ಹತ್ತ್‌ಪಾಲ್‌ಗಟ್ಟಿತ ನೆನ್ಸಿತ್. ಇಲ್ಲಿ ಅವ ಮರ್ತದ್ ಎಂತರತೇಳಿರೆ,  ಇಸ್ರೇಲ್‌‌ತೇಳ್ವ ಮೊಸಳೆಗೆ ಕಟ್ಟಿದ ಗಾಳಕೆ ನೊಕ್ಕುಳು ನಾನೇ ತೇಳ್ದರ ಗೊತ್ತಿತ್ಲೆ. ಮೊಸಳೆ ಗಾಳನ ಕಚ್ಚಿ ತಂಗೀಸ್ ತುಂಡುಮಾಡಿರೂ ಆ ನೊಕ್ಕುಳುನ ತಿನದೇ ಇರ್ದೊ.

ಸಣಪಂಗೆ ನಮ್ಮ ಪಟ್ಟಾಂಗದ ವಿಚಾರಕೆ ತೂಕ ಸಿಕ್ಕಿತ್‌ಕಂಡದೆ.ಮೆಲ್ಲ ಹಿಂದೆನ ಕಕ್ಟಟ್‌ಗೆ ಹಾರಿ ಕುದ್ದ್‌ಕಂಡೊ...

ಎರ್ಡ್‌ನೆ ಸರ್ತಿ ಎಲೆಡ್ಕೆ ತೊಟ್ಟೆಗೆ ಕೈಹಾಕಿದೊ ಕಂಡದೆ.

ಉಂ ಇರ್ಲಿ....

ಇತ್ತ ಕಡೆ ಇಸ್ರೇಲ್ಗೆ ಇಂತಾ ಕಾರ ಆಂಬರದ ಸುದ್ದಿ ತಿಳ್ದದೇ ತಡ ಇಸ್ರೇಲ್ನ ಬೇಹುಗಾರಿಕಾ ತಂಡ "ಮೊಸ್ಸಾದ್" ಚುರ್ಕಾಗಿ ಬುಟ್ಟತ್!

ಸುರೂಗೆ ಅವಂಗೊಂದ್ “ಈ ಅಣುಬಾಂಬುನ ತಯಾರ್ಕೆಂದ ದೂರ ಹೋದರೆ ನಿನ್ನ ಜೀವಕೆ ಒಳ್ಳದ್‌ ಇರುವಸ್ಟ್‌ದಿನ ತೆಳಿಗೆಂಜಿ ಉಂಡಾರ್‌ ನೀ ಬೊದ್ಕಕ್‌ ಅಂತ ” ಹೇಳಿ ಕಳ್ಸಿದೊ !

ಆಗ ಆ ವಿಜ್ಞಾನಿ ಹ್ಹ ಹ್ಹ ಹ್ಹತೇಳಿ ನೆಗಾಡಿ ಅವರ ಮಾತ್‌ನ ಹೂಂಸುಲೆಕ್ಕಮಾಡಿ ಬುಟ್ಟತ್! 

"ಎಂತೆಂತ...ಯಾರದ್ ಅವಂಗೆ ಬುದ್ದಿವಾದ ಹೇಳಿಕೋದ್..." 

ಸಣಪಂಗೆ ಮೊಸ್ಸಾದ್‌ ಹೆಸರ್‌ ಎಂತತ ಗೊತ್ತಾತ್ಲೆ.

ಇಂದನಿ ಸಣಪ ಈ ಮೊಸ್ಸಾದ್‌‌ತೇಳ್ವ ಇಸ್ರೇಲ್‌ನ ಸೈನಿಕಂಗ ನಿಮ್ಮ ಹುಲಿನನೂ ಹಿಡಿವ ನಾಯ್ಗಳಾಂಗೆ.

ನೀವು ಚೂ...ಕ್ ತೇಳಿರೆ ಅವು ಹೇಂಗೆ ಬೆರ್ಸ್‌ವೆನೋ ಹಾಂಗೆ ಈ ಮೊಸ್ಸಾದ್‌ ತಂಡದವು.ಸರ್ಯಾಗಿ ಅವು ಪ್ರಪಂಚದ ಯಾವ ಮೂಲೆಲಿ ಯಾರ ನಡುಲಿ ಯಾವ ಕೆಲ್ಸಲಿದ್ದವೆತ ಗೊತ್ತಾಕಿಲೆ.

ಆದರೂ ಇಸ್ರೇಲ್ ಸರ್ಕಾರ ಚೂಕ್ ತೇಳಿ ತಿರ್ಗಿಕೆ ಮುಂದೆ ಅತ್ತ ಹೋಕಾದ ಜೀವ ಬೇಕಾದಾಂಗೆ ಸತ್ತ್‌ ಬಿದ್ದಿದ್ದದೆ.

ಇಂತವು ಸಣಪ ಮೊಸ್ಸಾದ್ ಹುಲಿಗ.

ಸಣಪ ಇಲ್ಲಿಕೇಳಿ

ಈ ಇಸ್ರೇಲ್‌ನವು ಕುಂಡೆಗೆ ಕಬ್ಬಿಣ ಕಾಸಿಸಿ ಬಾಣ ನೋಡುವಾಂಗೆ ಹಿಡ್ಕಂಡ್ ಬೊಟ್ಟುವೆತ  ಈ ಅಣು ವಿಜ್ಞಾನಿ ನೆನ್ಸ್ಯೇ ಇತ್ಲೆನೋ ಅಲ್ಲೋ ಬೇಕುತೇಳಿ ತಲೆಕೊಟ್ಟದಾಗೊತ್ಲೆ.

ಅಸಲ್‌ಗೆ, ಇಸ್ರೇಲ್‌ನವ್ಕೆ ಈ ಇರಾಕ್‌ನ ಅಣುಸ್ಥಾವರನ ಇರ್ವ ಜಾಗೆಲೆ ಡೀಂ....ತೇಳಿ ಒಡ್ಸುದು ದೊಡ್ಡ ಕೆಲ್ಸ ಏನಾಗಿತ್ಲೆ. 

ಆದರೆ.....

ಈ ಕುಲಗೆಟ್ಟ ನ್ಯೂಕ್ಲಿಯರ್ ಕಸುಬು ಇಸ್ರೇಲ್ನ ವಿರುದ್ಧ ಒಳದ್ ಅಂತೇಳ್ದು ಗೊತ್ತ್‌ಗೊತ್ತಿದ್ದ್ ಈ ಅಣು ವಿಜ್ಞಾನಿ   ಯಾಹ್ಯಾ ಅಲ್ ಮಶ್ಹಾದ್ ಬಾಂಬ್  ಮಾಡಿಕೊಟ್ಟನೆತ ಹೊರ್ಟದ್ ಮಾತ್ರ ಅವನ ಎದೆನ ಸೆಳ್ಳಿ‌ನ ತಾಕತ್ತ್‌ತೇಳಕ್‌....

ಅದೇನೆ ಇರ್ಲಿ  ಇಸ್ರೇಲ್ ಮಾತ್ರ ಇಂತದ್ಕೆ ಸುಮ್ಮನಿರವಲ್ಲ !

ಎದುರು ಬಂದವರ ಕತೆನ ಪ್ರಪಂಚಕೆ ತೋರ್ಸಿಕೆ ಸಿಕ್ಕಿದ ಮತ್ತೊಂದ್ ಉದಾಹರಣೆತ ನೆನ್ಸಿ ಬೇಕಾದ ತಯಾರಿ ಮಾಡ್ತ್‌.

ಸಣಪ ಚೂ..ಕ್ ಚೂಕ್

ಚಕಚಕನೆ  ಕೆಲ್ಸಕಿಳ್ತ್ ಮೊಸ್ಸಾದ್‌,

 ಏಜೆಂಟ್‌ಗ‌ ಈ ಅಣು ವಿಜ್ಞಾನಿ ಯಾಹ್ಯಾ ಅಲ್ ಮಶ್ಹಾದ್ ನ ಹೆಜ್ಜೆ ನೆರ್ಳ್‌ನ ಹಿಂದೆ ಬಿದ್ದೊ !ನೊ...?

 ಇಲ್ಲೆಸಣಪ ಇವು ಹೆಜ್ಜೆ ನೆರ್ಳ್ ‌ ಇದರೆಲ್ಲ ಬೆನ್ನಿಂದೇ ಹೋಗಿ ಕಂಡಿಡಿದು ಮೊಸ್ಸಾದ್‌ನ  ಕಾರ್ಯಶೈಲಿ ಅಲ್ಲನೆ ಅಲ್ಲ.ಬೇಟೆ ಹೋವದಾರಿನ ಹುಲ್ಲಾಗಿ ಅವು ಎಂದೊ ಬೆಳ್ದ್‌ ಕಾದ್‌ಕುದ್ದಿದ್ದವೆ.

ಅದಾಗಲೆ ಬೆಡಿಕಟ್ಟಿ ಆಗಿದ್ದದೆ, ಹಂದಿ ದಾಟಿಕೆ  ಮಾತ್ರ ಕಾದ್ಕಂದ್ದವೆ.

ಅವರ್ದ್‌ ಒಂತರಾ ವಿಚಿತ್ರ ಕಾರ್ಯಶೈಲಿ .ಏಕೆತೇಳಿರೆ ಅವು ಇಸಿದ ಗುರಿನ ಯಾವೊಬ್ಬನೂ ಮುಂದೆಗೆ ಪ್ರಪಂಚದ ಮೇಲೆ ಜೀವಂತಲಿ ಸಿಕ್ಕುದುಲೆ.

ಹಾಂಗೂ 1948 ರಿಂದ ಇಂದ್‌ನವರೆಗೂ ನಡ್ದ ನೂರಾರು ಆಪರೇಸನ್ನುಗಳ್ಲಿ ಯಾರಿಗೂ 

ಮೊಸ್ಸಾದ್ ಫಾಲೋ ಮಾಡ್ತುಟ್ಟುತೇಳುವ  ಅನ್ಮಾನ ಬಾತ್ಲೆಗಡ.ಬಂದವನೂ ಬೊದ್ಕಿದಿಲ್ಲೆ. ಮೊಸ್ಸಾದ್ ಫಾಲೋ ಮಾಡ್ತ್‌‌ತೇಳಿರೆ ಸಾಕ್ಷಾತ್ತ್ ‘ಯಮಮಾಮ’ನೇ ಕೋಣಲಿ ಕುದ್ದ್‌ಬಂದಾಗೆ ಸೊರ್ಗ ನರ್ಕದ ಬಾಗ್ಲ್‌ಗೆ ಟಿಕೇಟ್ ಸಿಕ್ಕಿದಾಂಗೆನೆ !

ಇತ್ತ 

ಮಶ್ಶಾದ್ ಪರ್ಪಂಚ ಸುತ್ತೆಂಡ್ ಬಾರಿ ಸೂಕ್ಷ್ಮಲಿ ಸುತ್ತಾಕೆಂಡ್‌ ಕೆಲವು ವಿಜ್ಞಾನಿಗಳ ಮಾತಾಡ್ಸಿಕಂಡ್‌ ಬೇಕಾದ ಮೊದ್ದರಿವ ಕೆಲ್ಸ ಮಾಡಿಕಂಡ್‌ ತಿರ್ಗತಿತ್ತ್‌,

ಈ ಅಣು ವಿಜ್ಞಾನಿಗೆ  ಬುಡಾದೆ ನಲವತ್ತ್ ದಿನಂದ ಕಾದಿದ್ದ ಮೊಸ್ಸಾದ್ ಅಕೇರಿಗೆ ಒಳ್ಳ ಮುಹೂರ್ತ ಒಂದರ  ಪ್ಯಾರಿಸ್ಸ್‌ನ “ಲೀ’ಮೆರಿಡಿಯನ್ “ ಅಂತೇಳ್ವ ಹೊಟೆಲ್ಲಿ ಇಸಿದ್ ಕಾದಿತ್ತ್.

ಸಣಪ ಅದ್ 1980 ರ ಜೂನ್ 14 ನೆ ದಿನ,

ಈ ಅಣು ವಿಜ್ಞಾನಿ “ಯಾಹ್ಯಾ ಅಲ್ ಮಶ್ಹಾದ್” ಪ್ರಪಂಚದ ಅತ್ಯುನ್ನತ ರಕ್ಷಣಾ ವ್ಯವಸ್ಥೆ ಇದ್ದ ಪ್ಯಾರಿಸ್ ಪೇಟೆನ ಹೊಟ್ಲ್‌ ರೂಮುಲಿ ಕೊಲೆಆಗಿ ಹೋತ್!

ಕೊಲೆ ಆದ್‌ಸರಿ ,

ಸತ್ತವನ ಹೆಣ ಮೊನ್ಸರ  ಹೆಣದಾಂಗೆ  ಇತ್ಲೆಂತ  ಅಂದ್ ಪೋಸ್ಟ್‌ಮಾಟಂ ಮಾಡ್ದ ಡಾಕ್ಟರ್‌ಗ ರಿಪೋರ್ಟ್ ಗೀಚಿದ್ದಗಡ.

ನೋಡ್ದವನ ಎದೆ ಒಡಿವಂಗೆ,ಹೆಣದ ಎಲ್ಲ ಎಲುಗಳ ಗುದ್ದಿ ಹೊಡಿತೆಗ್ದಿದ್ದಗಡ.ಕೊಂದ ಭೀಕರತೆ ಬಯಂಕರತೆ ಹಾಂಗಿತ್ತ್.

ಇಲ್ಲಿ ಆಗ ಕೆಲ್ಸ ಮಾಡ್ದ ಟೀಮ್‌ ಹೆಸರ್‌ನ ಕಿಡೋನ್‌ ಅಂತ ಕರ್ದಿದ್ದೊ.ಆ ಟೀಮ್‌ ಕೊಂದ ಬೇಟೆ ಬಾರಿ ಸೋಕುನ ಪಕ್ಕಾ ಪ್ರೊಫೆಶನಲ್ಲಾಗಿತ್ತ್! 

ಎಲ್ಲಾರ್‌ ಈ ಯಾಹ್ಯಾ ಅಲ್ ಮಶ್ಹಾದ್ ಬೊದ್ಕಿರೆ ಇಸ್ರೇಲ್‌ನ ಮರ್ಯಾದೆ ಹೋದುತೇಳಿ ಮೊಸ್ಸಾದ್ ನ ಪರಮಕಟುಕ ಸೈನಿಕಂಗ ತಾಯ್ನೆಲದ ಪ್ರೀತಿನ ಎದೆಂದ ರಟ್ಟೆಗಿಳ್ಸಿಕಂಡ್ ಚೂರಿ ಬೀಸಿದರ್ಲಿ ಅವನ ಗಂಟ್ಲ್  ಹರ್ದ್ ಹಿಂದೆಗೆ ಮಾಲಿತ್ತ್‌  ಅಷ್ಟ್ ಸಾಕಾಗದೆ ಕೈಂದ ಅರ್ದ ಎದೆನ ವರೆಗೆ ಕೊಡ್ಪಿ ಮುರ್ದ್ ಸೊರೆ ಕಾಂಬಾಂಗೆ ಮೀಂಡಿ ಅಡ್ಡಡ್ಡಕ್ಕೆ ಅರ್ಧ ಅಡಿ ಅಗಲಕೆ ಸಿಗ್ದ್ ರಕ್ತ ಕಕ್ಕಿಸಿಬುಟ್ಟಿದ್ದೊ ! 

ನಮ್ಮ ಬಾಸೆಲೆ ಹೇಳಕಾರೆ ಸಣಪ ಅವನ ಅವು ಪೊರ್ಲುಲಿ ಬೊಡ್ಚಿದ್ದೊ......

ಇಸ್ರೇಲ್ ತೇಳ್ವ ರಣಹುಚ್ಚರ್  ವಿರುದ್ಧ ಬಿದ್ದ ಒಂಟಿಂಙಗಳ ಕತೆ  ಏನಾದುತೇಳ್ದದ್ಕೆ 

ಪ್ರಪಂಚದ ಅತಿ ಬಲಿಷ್ಟ  ಸೆಕ್ಯೂರಿಟಿ ಇದ್ದ ಪ್ಯಾರಿಸ್ಸ್‌ನ ಕೋಟೆನ ಒಳಗೆ ಹುಕ್ಕ್ ಮೊಸ್ಸಾದ್  ಹೊಸ ಪಾಠನ ಎಲ್ಲವ್ಕೆ ಹೇಳಿಬಂದಿತ್ತ್.

ಅದಾಗಿ ಕಟ್ಟಿದ್ದ ಅಣುಸ್ಥಾವರನ ಬರೊಬ್ಬರಿ ಹದ್ನಾಲ್ಕ್ ಟನ್ ಬಾಂಬು ಹಾಕಿ ಚೂಟುಮೊಣ್ಣು ಮಾಡಿ ಸುಮ್ಮನೆ ಕುದ್ದಿತ್ತ್  ಈ ಇಸ್ರೇಲ್.

ಹಾಂಗೆ ಸಣಪ ಇಸ್ರೇಲ್‌ನ ವೈವಾಟ್.

ಹೇಂಗೆ ಸಣಪ ....ಅಲನೋ

ಓ ಸಣಪ.....

ಸಣಪತೇಳಿ ನಾ ತಿರ್ಗಿನೋಡಕಾರೆ

ಎಡೆಡೆಲಿ ಹ್ಹೂಂಕುಟ್ಟತಿದ್ದ ನಮ್ಮ ಸಣಪ ಮೇಲೆ ಬರೆಲಿ ಇದ್ದ ಮೋಟೆಲಿ ಜೇನ್ನೆಳ ಹಾರ್ತುಟ್ಟುತೇಳಿ ಕಕ್ಕಟ್‌ಲೆ ನಿತ್ತ್‌ ಗೆಬ್ಬಾಳ್ಸಿಕಂಡ್ ನೋಡ್ತಿದ್ದೊ.....

ಇನ್ನ್ ಈ ಜನ ನನ್ನ ಮಾತ್‌ಗೆ ಕೆಬಿಕೊಡಿಕಿಲೆತ ಗೊತ್ತಾತ್

ನಾ ಎದ್ದ್ ನಡ್ದೆ. ದೂರಂದ ಕರ್ದೇಳ್ದೆ

"ಸಣಪ ಈ ಜೇನ್ನೆಳಗಳು ಇಸ್ರೇಲ್‌ನಾಂಗೆ ಹನಿ ನೋಡಿಕಂಡ್ ಕೈಹಾಕಿ...ಬೆರ್ಸಿಕಂಡ್ ಜಾಲೊರೆಗೆ ಬಾವೋ....ಹಹ್ಹಹಹ......" ತೇಳಿ ನಡ್ಕಂಡ್ ಮನೆಕಡೆ ಹೊರ್ಟೆ.

Comments

Other articles

Img 20170717 220534 %281%29

"JEEVANAVARTHANA" PRACTICES OF PUTTUR TULU GOWDAS

01 Aug 2017

  In Dakshina Kannada both the groups of Gowdas i.e 'Tulu' and 'Arebhashe' do not prepare meat or any non vegeterian food during marriage and gruhapravesha etc functions. 'Tulu' Gowdas of Puttur seeme invariably conduct Marriage and Gruha Pravesha etc. as per Vadhika Practice. Presence of Brahaman is a must! ( But, to what extent the Brahmin Poojari conducts the vedic rituals in right procedure is a debatable issue, as they look down Gowdas as not worthy of this practice). The Oora Gowda, as well, takes a Dheeksha and wears Yajnopaveetha (As confirmed by Balnadu Babu Gowda). At the time of Marriage, bridegroom's father offers Rs. 10 1/4 to the girls' parents out of this Rs.6 1/4  is to be sent to Gurumatha i.e Sringeri Matha through Oora gowda for Girls Mutheide thanakke (for seeking longer life for the couple. Oora Gowda thus collects such offering during the Marriages held under his jurisdiction and hands over the same to Maagane-Gowda and through him to Kattemane. Kattemane Gowda takes it over to Guru Matha (Sringeri Matha) once in a year and seeks blessings from Mathadhipathi on behalf of married couple.

  Oora Gowda occupies an important position in an "JEEVANAVARTHANA- PRACTICES Of Tulu Gowdas of Puttur region. In his absence Othu Gowda takes over his responsibility .Gowdas follow Patriarchial succession procedure. Eldest male member in the joint family is head of the family. Oora gowda of the village is nominated by Kattemae head.

  In all functions starting from "Veelya Shastra" up to marriage the oora gowda recites an invocation and declaration in loud voice which states as "Aramanethagledela, Gurumanethagaledala Path Kutumba Padinenmo Baritha Bandhu Bhandhaveradala Kattemanethagledala, Magane Manethagledala, Oora Gowderdala, Ithinchina Binneredla, Bathinanchina Binnerdla kenondu Bangera Baritha aanagla (Name of boy) Nandere baritha ponnagla (name of girl) Thali kattuba panpero".  At this moment the gathered relatives and public will declare their assent saying "Edde Karyo Panpero". This declaration is same as the recital in Sullia and Kodagu region which is in Kannada. Here the referece to Aramane and Gurumane is essentially to royalty of Ikkeri and Sringeri MMathadhipathies respectively.

  Hathu Kutumba Hadinentu Gothraada Gowdas strictly follow "Patriarchial" practice. Gothra and Bali and family name is derived from the father to the children. Female members of the family do not directly participate in any rituals. Even the cooking for performing rituals is prepared by men folk. Inheritance of property is always to the male children. In cas of husbands death the wife takes over the property as custodian of her minor children. Tilll recently they used to live in joint family structure. Many households used to contain forty to fifty family members thus enjoyed the collective security. Eldest son in the family becomes the Kartha (family head). Marriages anibg Sangothra (Bali) is forbidden as they considered as brother and sister or cousins. This is an approved practice as per scientific fraternity and produces healthy pregnency with better resistance to diseases. Generally there is no 'Dowry' systen among gowdas clan on the other hand boys father offers an kanya shulka to girls parents a sum of rupees 16 1/4.

( This chapter is taken from book Pursuit Of Our Roots by Puttur Anantharaja Gowda. Book contains whole history of Gowdas and their culture. To get a copy of this book by post contact: 8073913336. Price Rs.230-00)

Read More
Bangalore

ಬೆಂಗ್ಳೂರ್ ಲಿ ಅಂಗೈ ಅಗಲ ಜಾಗೇ ಇದ್ದಿದ್ದರೇ…

03 Jul 2017

ಬೆಂಗ್ಳೂರ್ ಲಿ ಅಂಗೈ ಅಗಲ ಜಾಗೇ ಇದ್ದಿದ್ದರೇ…??!! “ಸಣಪಾ.. ನಂಗೆ ಬೆಂಗ್ಳೂರ್ ಲಿ ಬೆರೀ ಅಂಗೈ ಅಗಲ ಜಾಗೇ ಇದ್ದಿದ್ದರೇ ..?” ತೇಳಿಕಂಡ್ ಕುಂಞಣ ಕೂಜಿನಾಂಗೆ ಕೂಕುಳು ಹಾಕಂಡ್ ನನ್ನಕ್ಕಲೆ ಬಂದ್ ಎಲಾಡ್ಕೆಗೆ ಕೈ ಒಡ್ಡಿ ನಿತ್ತತ್..! “

 

ಏನಾತ್ ನೇ… ಆರ್ಬಾಯಿ ಕೊಟ್ಟ್ ಕಂಡ್ ಈಗ ಬಂದಿಯ? ಸುಮಾರ್ ದಿನ ಆತ್ ನಿನ್ನ ಕಾಣದೆ..ಎತ್ತ ಹೋಗಿದ್ದನೆ..?”

“ಅಯ್ಯೋ ಸಣಪಾ.. ಬೆಂಗ್ಳೂರಿಗೆ ಹೋಗಿದ್ದೆ ಬಲರಿಯಾ.. ಬೆಂಗ್ಳೂರ್ ಗೆ..! ಹೆಣ್ಣ್ ನನ್ನ ಜೋಬಿಗೆ ಎರ್ಡ್ ಸಾವ್ರ ನೋಟ್ ನ ತುಂಬಿಸಿ ಮಗಳ ನೋಡಿಕಂಡ್ ಬನ್ನಿಂತ ಬೆಂಗ್ಳೂರ್ಗೆ ಕಳ್ಸಿತ್..! ನನ್ನಕ್ಕಲೆ ಇದ್ದ ಚಿಲ್ಲರೆನ ಬಸ್ಸ್ ಗೆ ಕೊಟ್ಟ್ ಕಿಡ್ಕೆ ಕರೇ ಸೀಟ್ ಲಿ ಸುಂರ್ಟಿ ಮಲ್ಗಿದವಂಗೆ “ಮೆಜೆಸ್ಟಿಕ್ ..ಮೆಜೆಸ್ಟಿಕ್ .”.ತ ಕರಿಯಕನನೇ ಎಚ್ಚಿರ್ಕೆ ಆದ್..! ತಬ್ಬುರ್ಸಿ ಚೀಲ ಕೋಸಿಕಂಡ್ ಇಳ್ದದ್ ಒಂದ್ ಗೊತ್ತುಟು..

ಉಚ್ಚೆ ಬಂದ್ ಅಂಡಿ ಹೋಗಿ ತಡೆಕೆ ಬೊತ್ತು…! ಉಚ್ಚೆ ಹೊಯಕೇಂತ ಟಾಯ್ಲೆಟ್ ಗೆ ಹೋದರೆ ಅಲ್ಲಿ ಸೊಸೈಟಿಲಿ ಸೀಮೆಣ್ಣೆ-ಸಕ್ಕರೆಗೆ ಕ್ಯೂ ನಿತ್ತಾಂಗೆ ನಿತ್ತಳೋ..! ಅಂತೂ ನಿತ್ತ್ ನಿತ್ತ್..ಹೇಂಗಾರ್ ಹೊಯ್ದ್ ಹೊರೆಗೆ ಬಂದರೆ ಎದ್ ರ್ ಒಬ್ಬ ಟೇಬುಲ್ ಕುರ್ಚಿ ಹಾಕಿ ಕಾಲ್ ಮೇಲೆ ಕಾಲಾಕಿ ಟಚ್ ಸ್ಕ್ರೀನ್ ಮೊಬೈಲ್ ಒತ್ತಿಕಂಡ್ ಮೂರು ರುಪಾಯಿ ಚಿಲ್ಲರೆ ಕೊಡಿಂತ ಕೇಳ್ತ್.. ನಾ ಎರ್ಡ್ ಸಾವ್ರದ ನೋಟ್ ತೆಗ್ದೆ..! ಅಂವ ನನ್ನ ಮುಸುಂಡುನನೇ ನೋಡಿ ಹೆದ್ರಿಸಿ “ಹೋಗು ಚೇಂಜ್ ತಕೊಂಡ್ ಬಾ..” ಅಂತ ಏಕವಚನಲಿ ಬೊಯ್ತ್ ಸಣಪಾ…!! ನನ್ನ ಪಿತ್ತ ಒಮ್ಮೆ ಕೆದರ್ತ್…ಅಂವ ಮೂರು ಕಾಸ್ ನ ವ ಊರುಲಿ ಮನಿ ಸಿಕ್ಕ ಕಾಯ್ತ್ …ಅವನ ಸಂತಾನ ಮುತ್ತಿ ಅಡ್ಸಿದ್ದೆ..!

ಏನ್ ಮಾಡ್ದು ಸುಟ್ಟೆ ಹೋಗಲಿಂತ ಮೂರ್ನಾಕ್ ಅಂಗ್ ಡಿಲಿ ಚಿಲ್ರೆ ಕೇಳ್ದೆ..! ಅಕೇರಿಗೆ ಮೂವತ್ರುಪಾಯಿಗೆ ಅರ್ಧ ಕುಪ್ಪಿ ನೀರ್ ತಕಂಡ್ ಉಚ್ಚೆ ಹೊಯ್ದದಕ್ಕೆ ಮೂರು ರುಪಾಯಿ ಚಿಲ್ಲರೆ ಕೊಟ್ಟ್ ಹೇಂಗಾರ್ ಹೊರೆಗೆ ಬಂದೆ..!

ನೀವೆ ಹೇಳಿ ಸಣಪಾ…ನಿಮ್ಮ ಮೂರೆಕ್ರೆ ಕಾಫಿ, ಐನೂರು ರಬ್ಬರ್, ಎರ್ಡ್ ಕಂಡಿ ಅಡ್ಕೆನೂ, ತಿಂಬಕ್ಕೆ ಬತ್ತನೂ ..ಇಷ್ಟೆಲ್ಲಾ …ಇದ್ದು… ನಿಮ್ಮಕ್ಕಲೆ ಒಂದ್ ಒಳ್ಳ ಅಪ್ಪಂಗುಟ್ಟಿದ ಮೊಬೈಲ್ ಉಟ್ಟಾ..? ಅದ್ಕೇ ಹೇಳ್ದ್ ..ನನ್ನಪ್ಪ ಇಲ್ಲಿ ಇಷ್ಟೇಲ್ಲಾ …ಜಾಗೆ ಜಮ್ಮ ಮಾಡುವಲ್ಲಿಂದ ಬೆಂಗ್ಳೂರ್ ಲಿ ಅಂಗೈ ಅಗಲ ಜಾಗೇ ಮಾಡಿಸಿದ್ದರೆ…?” “

ಅಯ್ಯೆನ ಬಂಡೆ ಪರಮಾತ್ಮಾ…ಬೆಂಗ್ಳೂರು … ಹಿಂಗಾಗುಟ್ಟನೇ,,,? ಒಂದ್ ಕುಪ್ಪಿ ನೀರ್ ಗೆ ಮೂವತ್ರುಪಾಯಿ. ಅದರ ಕುಡ್ದರೆ ಹೊಯ್ದ ಚಾರ್ಜ್ ಮೂರು ರುಪಾಯಿ..! ಆಕಿಲೆ ಬಲಾ…ಎಲ್ಲಾ ಕಲಿ ಮೈಮೆ ಮೀರಿ ಹೋತ್..! ನೀ ಒಂದ್ ಕೆಲ್ಸ್ ಮಾಡ್.. ನೀನೂ ಬೆಂಗ್ಳೂರ್ ಲಿ ಅಂಗ್ ಡಿ ಓಪನ್ ಮಾಡಿ ಒಂದು ಪುಡೆಲಿ ನೀರೂ ..ಇನ್ನೋಂದು ಪುಡೆಲಿ ಟಾಯ್ಲೆಟ್ ಗೂ ವ್ಯಾಪಾರ ಮಾಡ್.. ನಿಂಗೆ ಎರ್ಡೂ ಕಡೆಂದಳೂ..ದುಡ್ಡುಂತೇಳಿ” ನಾ ನೆಗಾಡಿಕಂಡ್ ಉಮ್ಮುಣ್ಣಿ ಕಚ್ಚಿಸಿಕಂಡ್ ಕೊಕ್ಕ ಕೊಯ್ಯಕ್ಕೆ ಹೋದೆ…!!.

-ಲೋಕೇಶ್ ಊರುಬೈಲು

Ganesha idols yediyur bangalore 201309

ಬೆಂಗಳೂರಲ್ಲಿ ಚೌತಿ !

16 Sep 2018

ಈ ಬಾರಿ ಚೌತಿ ಬೆಂಗಳೂರಲ್ಲಿ ಆಚರಿಸ ಬೇಕೆಂಬ ಬಯಕೆಯಿಂದ ಊರಿಗೆ ಹೋಗದೆ  ಬೆಂಗಳೂರಲ್ಲೆ ಉಳಿದುಕೊಂಡೆ. ಹಾಗೆ ಎಲ್ಲ ಗಣಪನ ಭೇಟಿ ಮಾಡೋ ಕಾರ್ಯಕ್ರಮ ಇಟ್ಟುಕೊಂಡೆ.ಒಂದೊಂದು ಗಣಪಂದು different ಭಂಗಿ.ಆದರೆ ಕೆಲವು ಗಣಪ ನೋಡಿದಾಗ ಅಯೊ್ಯ ಅನಿಸುತ್ತಿತ್ತು.ಕೆಲವು ಗಣೇಶ ಮೂರ್ತಿಯನ್ನು ಮೋರಿ ಪಕ್ಕ ಇಟ್ಟರೆ ಇನ್ನು ಕೆಲವು ಚಿಕನ್ ಶಾಪ್ ಪಕ್ಕ , 90% ಗಣೇಶ ರೋಡ್ ಗಳನ್ನು ಆಕ್ರಮಣ ಮಾಡಿವೆ. ಏನೇ ಇರಲಿ ಅದು ಅವರವರ ಭಕ್ತಿ.

ಇನ್ನು ನನ್ನ ರೂಮ್ ಪಕ್ಕ ಇಡೀ ರೋಡ್ ಬಂದ್ ಮಾಡಿ  ಅದ್ಧೂರಿಯಾಗಿ ಪ್ರತಿಷ್ಠಾಪಿಸಿದರು. ಪಕ್ಕದಲ್ಲಿ  ಬಾರ್ ಬೇರೆ.  ರಾತ್ರಿ  ಆದರಂತೂ 3ರೇ 3 ಪೆಗ್, ಕಾಲಿ ಕ್ವಾಟರ್, ಚುಟ್ ಚುಟ್, ಎಣ್ಣೆ ನಿಂಮ್ದು ಊಟ ನಂಮ್ದು ಹಾಡಗಳ DJ. ಕನ್ನಡ ಸಂಘಗಳ ಭಯಕ್ಕೇನೋ ಕನ್ನಡ ಹಾಡುಗಳು ಹೆಚ್ಚಾಗಿದ್ದವು. ಅದೊಂದು ನಮಗೆ ಹೆಮ್ಮೆ.

ಹೆಗೋ ಸ್ವಲ್ಪ time  ಮಾಡ್ಕೊಂಡು ಗಣೇಶ ನೋಡಲು ಹೋದರೆ  ಎಲ್ಲರೂ ಗಣೇಶ ಜೊತೆ Selfyಲಿ Busy. ಕಷ್ಟಪಟ್ಟು ಎದುರು ಹೋಗಿ ವಿಘ್ನ ವಿನಾಯಕನಿಗೆ ಕೈ ಮಗಿದು ಅಡ್ಡ ಬಿದ್ದೆ. ಅಷ್ಟರಲ್ಲಿ ಯಾವನೋ photo ತೆಗೋ ಭರದಲ್ಲಿ ಕೈ ಮೆಟ್ಟಿಕೊಂಡು ಹೋಗೆ  ಬಿಟ್ಟ.ಎಲ್ಲರಲ್ಲೂ Mobile ಭಕ್ತಿ ಜಾಸ್ತಿ ಇದ್ದಾಂಗಿತ್ತು. ಅಮೇಲೆ ಪ್ರಸಾದಕ್ಕೆ ಬಂದರೆ   ಅದೇನೋ ಕೊಟ್ಟರು.ಆ ಕಡೆ ತಿನ್ನಲು ಆಗದೆ ಈ ಕಡೆ ಉಗಿಯಲು ಆಗದ ಪರಿಸ್ಥಿತಿ.ನಮ್ಮೂರಿನ ಪಂಚಕಜ್ಜಾಯ, ಬಾಳೆಹಣ್ಣು ಕಾಣಲೇ ಇಲ್ಲ. ಗಣೇಶನ ಪೆಂಡಾಲ್ ಹಿಂದೆ fridricee ,Kabab ಗಾಡಿ. ಮೂಳೆ ತಿಂದು ಅಲ್ಲೇ ಎಸಿತ್ತಿದ್ರು.ಪಕ್ಕದ ಬಾರ್ ನಿಂದ ಬಂದು ಎಲ್ಲರದ್ದು ಏನೋ Dance. Day time ಅಂತೂ ಗಣೇಶನ ಕೇಳೋರೇ ಇಲ್ಲ. ಬೀದಿ ನಾಯಿಗಳೇ ಕಾವಲು ಇದ್ದಂಗಿತ್ತು.

ಗಣಪತಿ ಬಿಡೋ ಹೊತ್ತಲ್ಲಿ  ಬರೀ ಬೋರ್. ತಮಟೆ ಸದ್ದು ಅಷ್ಟೇ. ಕೇಸರಿ ದ್ವಜ, ಭಜನೆ, ನಾಸಿಕ್ ಬಾ್ಯಂಡ್ , ಆ ಸಾಲು ಮೆರವಣಿಗೆ, ಜೈ ಘೋಷ ಏನು ಇಲ್ಲ.ಏನೇ ಆದರೂ ನಮ್ಮೂರ ಚೌತಿ Soooper.

ಅಂತೂ ಕೂನೆಯದಾಗಿ Decide ಮಾಡಿದೆ. ದಸರಾ ಏನಿದ್ದರೂ ಮಂಗಳೂರಿಲಿನಲ್ಲಿ ಅಥವಾ ಮಡಿಕೇರಿಲಿ.

3418a655e5f5784cd2539a6d9a8dbc3a  pink dress the dress

ಮಳೆ ಮತ್ತು ಅವಳು

16 Aug 2017

 

ಜೋರಾಗಿ ಮಳೆ ಸುರಿಯುತಿರಲು 
ನನ್ನ ಮನಕ್ಕೆ ನಿನ್ನದೇ ಯೋಚನೆ||
ಗಾಢವಾಗಿ ನಾ ಮಲಗಿರಲು
ಕಾಟ ಕೊಡುವೆ ಹಾಗೆ ಸುಮ್ಮನೆ||


ಆ ಗುಡುಗಿನ ಭಯವಿರಲು
ಮಿಂಚಂತೆ ನಿನ್ನ ನಗು ಕಾಣುತ್ತಿದೆ||
ಜೋರಾಗಿ ಗಾಳಿ ಬೀಸುತಿರಲು 
ನೀನೆ ಬಳಿ ಬಂದಂತಿದೆ||


ಮೋಡವು ಭಾನನ್ನು ನುಂಗಿರಲು
ನಕ್ಷತ್ರದಂತೆ ನೀ ಕದ್ದು ಇಣುಕುತ್ತಿದ್ದೆ||
ಚಂದಮಾಮ  ಮಾಯವಾಗಿರಲು
ಕತ್ತಲಲ್ಲಿ ನಾ, ನಿನ್ನ ಹುಡುಕುತ್ತಿದ್ದೆ||


ನನಗೆ ನಿನ್ನ ಕಾಣುವ ಆತುರ||
ನೀ ಎದುರು ಬಂದಾಗ ಏಕೆ ಈ ಅಂತರ||

Fb img 1522252698965

ನೆನಪಿನಂಗಳದಲ್ಲಿ ಒಂದು ಕ್ಷಣ

28 Mar 2018

ಅಂದು ಮೈಸೂರಿನಿಂದ ಕೊಡಗಿನ ನನ್ನ ಮನೆಗೆ ಪ್ರಯಾಣಿಸುತ್ತಿದ್ದೆ. ದಿನವಿಡೀ ತನ್ನ ಪ್ರಖರತೆಯನ್ನು ಬೀರಿ, ನೇಸರನು ನಾಚಿಕೆಯಿಂದ ಅಂಬುಧಿಯ ಮಡಿಲನ್ನು ಸೇರಲು ಹವಣಿಸುತ್ತಿದ್ದನು. ಇದ್ದಕ್ಕಿದ್ದಂತೆ ಆಕಾಶವನ್ನು ಕರಿ ಮೋಡಗಳು ಆವರಿಸುತ್ತಿದ್ದವು.ಮಳೆಯ ಹನಿಗಳು ಬಾನಿನ ಭದ್ರಕೋಟೆಯನ್ನು ಸೀಳಿಕೊಂಡು ಧರೆಗೆ ಮುತ್ತಿಡಲು ಹಾತೊರೆಯುತ್ತಿದ್ದವು…….

ಒಂದುಕ್ಷಣ ಜಗತ್ತೇ ಭ್ರಮಾಲೋಕ ಅನಿಸುತ್ತದೆ ಅಲ್ಲವೇ…ಬಸ್ಸಿನ ಕಿಟಕಿಗೆ ಒರಗಿಕೊಳ್ಳುತ್ತಿದ್ದಂತೆ ಕೆಲವರ ಹಲವು ನೆನಪುಗಳು ಹೃದಯದ ದಡಕ್ಕೆ ಅಲೆಗಳಂತೆ ಅಪ್ಪಳಿಸಿದವು. ನೆನಪಿನ ಬುತ್ತಿಗಳು ತೆರೆಯಲಾರಂಭಿಸಿದವು.ಕೆಲವೇ ಕೆಲವು ಸಂವತ್ಸರಗಳು ನನ್ನ ಬದುಕಿನಲ್ಲಿ ಅದೆಷ್ಟು ಬದಲಾವಣೆಗಳನ್ನು ತಂದಿದ್ದವು.ನೋಡ ನೋಡುತ್ತಿದ್ದಂತೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಯಲು ಬಂದಿತ್ತು.ಈ ನಾಲ್ಕು ವರ್ಷಗಳಲ್ಲಿ “ಸ್ನೇಹಿತರು” ಎಂಬ ಶೀರ್ಷಿಕೆಯಲ್ಲಿ ಸಿಕ್ಕ ಹಲವರು “BFF” ಎಂಬ ಶೀರ್ಷಿಕೆಯಲ್ಲಿ ಸಿಕ್ಕ ಕೆಲವರು ಮನಸ್ಸಿನಲ್ಲಿ ಆಳವಾಗಿ ನೆಲೆಯೂರಿದ್ದರು. ಮನಸ್ಸೆಂಬ ಅಂಗಳದಲ್ಲಿ ಅಳಿಸಲಾಗದಂತ ಹೆಜ್ಜೆ ಗುರುತು ಮೂಡಿಸಿದ್ದರು. ಈ ಎಲ್ಲಾ ಸಿಹಿವೇದನೆಗಳ ನಡುವೆ ಕೆಲವು ಹೇಳಿಕೆಗಳು ಮನಸ್ಸಿಗೆ ಘಾಸಿ ಮಾಡಿದ್ದಂತೂ ಸತ್ಯ.ಇವೆಲ್ಲದರ ಹೊರತಾಗಿ, ಜೀವನದ ಜಂಜಾಟದಲ್ಲಿ, ಜವಾಬ್ದಾರಿಗಳ ಮಧ್ಯೆ ಹೃದಯ ಮುಟ್ಟಿದ ಸ್ನೇಹಿತರನ್ನು ಕಳೆದುಕೊಳ್ಳುವ ಭಯ ಕಾಡಲಾರಂಭಿಸಿದವು.ಕೆಲವರು “ಮೊದಲೇ ಸಿಗಬಾರದಿತ್ತೇ?” ಎನಿಸಿತು…”ಪ್ರಾಣ ಸ್ನೇಹಿತ”ರ ಜೊತೆಗೆ ಕಳೆದ ನೆನಪುಗಳ ನೆನೆದಾಗ…, ಕೊಡಗಿನ ಜಡಿಮಳೆಗೆ ಕೆರೆ ಕಟ್ಟೆಗಳು ತುಂಬುವಂತೆ ಹೃದಯ ತುಂಬಿ ಬಂತು.., ಕಣ್ಣಂಚಿನಲ್ಲಿ ಹನಿಹನಿಯಾಗಿ ಮೂಡಿದ್ದ ಒಂದೆರಡು ತೊಟ್ಟು ಕಣ್ಣೀರು ಕೆನ್ನೆಯನ್ನು ಸವರುತ್ತಾ ಮರೆಯಾದವು……

ಹೀಗೆ ಲೋಕದ ಪರಿವೆಯೇ ಇಲ್ಲದೆ ಕಲ್ಪನಾಲೋಕದಲ್ಲಿ ಮುಳುಗಿ ಹೋಗಿದ್ದ ನನಗೆ ಸಿಡಿಲಿನ ಆರ್ಭಟದ ಮುಂದೆ ಜಯಿಸಲಾಗಲಿಲ್ಲ.ಎಲ್ಲಾ ನೆನಪುಗಳು ಮಿಂಚಿನಂತೆ ಮರೆಯಾದವು. ಮತ್ತದೇ ಕಹಿ ವಾಸ್ತವಕ್ಕೆ ಮರಳಲು ಮನಸು ಒಪ್ಪದಿದ್ದರೂ, ಅನಿವಾರ್ಯವಾಗಿತ್ತು. ಆದರೂ ನೆನಪುಗಳು ಅದೆಷ್ಟು ಸುಂದರ ಅಲ್ಲವೇ…ಬೇಡವೆಂದರೂ ಬೆಂಬಿಡದೆ ಬೇತಾಳದಂತೆ ಬೆನ್ನು ಹತ್ತಿ ಬರುತ್ತವೆ….

ಹಿಂದೊಮ್ಮೆಓದಿದ ಸಾಲು ನೆನಪಾಯಿತು…..”ಬದುಕು ಎಂದರೆ ಕೊನೆ ಅರಿಯದ ಪಯಣ..,ಯಾವುದೂ ಶಾಶ್ವತವಲ್ಲ…ಕೊನೆಯಲ್ಲಿ ಉಳಿಯುವುದು ಒಂದೇ.., ಹೃದಯ ತಟ್ಟಿದ ನೆನಪುಗಳು ಮಾತ್ರ...!" ಎಷ್ಟುಅರ್ಥಗರ್ಭಿತ ಅಲ್ಲವೇ..??

                                                              ಉಜ್ವಲ್ ಬೈಚನ