Feel my love %281%29

ಇಷ್ಟ - ಕಷ್ಟ

ನಿನ್ನ ಆ ನೋಟ ಇಷ್ಟವಾಯಿತು

ನಿನ್ನನ್ನು ನೋಡಲು ಕಷ್ಟವಾಯಿತು

            ನಿನ್ನ ಮಾತನಾಡುವ ಶೈಲಿ ಇಷ್ಟವಾಯಿತು

​​​​​​            ನಿನ್ನಲ್ಲಿ ಮಾತಾನಾಡಲು ಕಷ್ಟವಾಯಿತು

ನಿನ್ನ ಮಾರ್ಜಾಲ ನಡೆ ಇಷ್ಟವಾಯಿತು

ನಿನ್ನ ಜೊತೆ ನಡೆಯಲು ಕಷ್ಟವಾಯಿತು

              ನಿನ್ನ ಮುದ್ದಾದ ನಗು ಇಷ್ಟವಾಯಿತು

              ನಿನ್ನ ನಗಿಸಲು ಕಷ್ಟವಾಯಿತು

ಎಲ್ಲರನ್ನು ಪ್ರೀತಿಸುವ ಗುಣ ಇಷ್ಟವಾಯಿತು

ಆದರೆ ನಿನ್ನೇ ಪ್ರೀತಿಸಲು ಕಷ್ಟವಾಯಿತು

             ಇಷ್ಟದಿಂದ ಕಾಯುವೆ ಅದು ಎಷ್ಟೇ ಕಷ್ಟವಾದರೂ..

Comments

Male
Ajeera B Prabhakara
7 months ago

Other articles

Palegara

Palegars of Somwarpet Choudlu Kalegowda

01 Jul 2017

Palegars of Somwarpet Choudlu Kalegowda. Choudlu family owned most part of Somwarpet town & thousands acres of garden,/plantation. 

 

 

Have a look at Dress, Odikatti, peechekatti, Chattri, chamara etc. These were not copy right of any perticular group. It was applicable to all noble men and women attending palace of Haleri kings, including people from Sullia, Puttur.

 

Proclamation from Veeraraja vodeya grant of Jamma land.

 

Choudlu Kalegowda with his family

Read More
1488438927 rupee note 517  getty

ಚಿಲ್ಲರೆ ಪ್ರಸಂಗ!!!

09 Aug 2017

   ಆಟಿ ತಿಂಗಳ ಜಿಟಿಜಿಟಿ ಮಳೆ. ಬೊಳ್ಪುನ ಚಳಿಗೆ ಬೆಚ್ಚನೆ ಗುಡಿ ಹೊದ್ದ್ ಮಲ್ಗಿದ್ದರೂ ನನ್ನ ಹೆಣ್ಣ್ ನ ಪರ್ರ್ಂಚಟಕ್ಕೆ ವೊಲ್ಲಿ ಒಳಗೇ ಬೆಗ್ರಿಕೆ ಸುರಾತ್. ಮತ್ತೇನಿಲ್ಲೆ.. "8 ಘಂಟೆ ಬಸ್ಸ್ ಲಿ ಸುಳ್ಯಕೆ ಎತ್ತೊಕು... ಎದ್ರಿಯಾ... ಶಾಲೆ ಮಕ್ಕಳಾಂಗೆ ಎಷ್ಟೂಂತ ಮಲ್ಗಿರೆ!!!" ನಾ ವೊಲ್ಲಿ ಎಳ್ದ್ ಮೋರೆ ಮುಚ್ಚಿಕಂಡರೂ ಅದರ ಎಳ್ದ್, ನೂಕಿ, ಮಂಚಂದ ಹೊಣ್ಕ್ ಸಿ ಎದ್ರಿಸಿ ನೀರಡಿ ಕೊಟೆಗೆಗೆ ಬೆರ್ಸಿತ್. ( ಒಂದರ್ಥಲಿ ನೋಡ್ರೆ ಅದ್ ಬೆರ್ಸಿದಲ್ಲ... ನನ್ನ ಬಿಸಾಡ್ತ್!! ತಿರ್ಗಿ ಹೇಳುವಾಂಗೆ ಉಟ್ಟಾ!!??) ವಿಷಯ ಸಿಂಪಲ್... ಕೃಷ್ಣ ಸ್ಟೋರ್ ಲಿ ಸಾರಿ ಮೇಳ!! ಲೇಟಾದರೆ ಒಳ್ಳ ಒಳ್ಳ ಸೀರೆ ಮುಗ್ದದೆ. ಹೊತ್ತಾದರೆ ಜನಗಳ ನೋಡೊಕಷ್ಟೆ. ಯಾಪೆಗೆ ಹತ್ತಿದ ಉಬರ್ ಮೀನ್ ಗಳಾಂಗೆ ಮಿಜಿ ಮಿಜಿ ಹೇಳ್ತಿದ್ದವೆ!!! ನೆರೆಕರೆ ದೋಸ್ತಿಗಳೊಟ್ಟಿಗೆ ಇದ್ ಒಂದ್ ತಿಂಗಳ್ಂದ ಹೇಳ್ತುಟ್ಟು... 'ನಂಗೆ ಇವು ಈ ಸರ್ತಿ ಸೀರೆ ಮೇಳಲಿ 10 ಸೀರೆ ತೆಗ್ದ್ ಕೊಟ್ಟವೆಗಡ!!' ಈ ಡಯಲಾಗ್ ಗೆ ನಾ ಖುಶಿ ಪಡೊಕೋ ತಲೆಬಿಸಿಮಾಡಿಕಣೊಕೋ ಗೊತ್ತಾಗದೆ, ಗಡಿಬಿಡಿಲಿ ಹೊಯ್ದ ಓಡಿಟ್ಟ್ ನಾಂಗಿರುವ ಬೊಡ್ರೊಟ್ಟಿ ತಿಂದ್ ಓಡಿಕಂಡೇ ಬಂದ್ ಬಸ್ಟಾಂಡ್ ಗೆ ಎತ್ತಿದೊ.

                     ಬಚ್ಚಾವ್!! ಬಸ್ ಹೋತ್ಲೆ. ಬುಲ್ಲೆಟ್ ನಾಂಗೆ ಬುಡ್ತಿದ್ದ ಶ್ವಾಸ ಮೆಲ್ಲ ಮೆಲ್ಲ ಬುಲ್ಡೋಝರ್ ಹದಕ್ಕೆ ಬಾತ್. ಅದೇ ಸ್ಪೀಡ್ ಲಿ ಬಸ್ಸ್ ಕೂಡ!!! ಬಸ್ಸ್ ಲಿ ಕುದ್ರಿಕೆ ಜಾಗೆ ಇಲ್ಲೆ. ಎಲ್ಲವೂ ಪೇಟೆಗೆ ಹೊರ್ಟವೇ!! ಹಂಗೂ ಹಿಂಗೂ ಜನರ ಎಡೆಲಿ ನುಗ್ಗಿ ಒಂದ್ ರಾಡ್ ಗೆ ಒರ್ಗಿ ನಿತ್ತೆ.(ನನ್ನ 'ದೊಡ್ಡಾ' ಜೀವ ನೋಡಿ ಹೆದ್ರಿಯೋ ಏನೋ.. ಅಲ್ಲಿಗೆ ಎತ್ತಿಕೆ ಸೆರೆ ಮಾಡಿ ಕೊಟ್ಟವ್ಕೆಲ್ಲಾ ಒಂದ್ ದೊಡ್ಡ ನೊಮ್ಸ್ಕಾರ!!) ಹಂಞ ಹೊತ್ತ ಕಳ್ಡ್ ನೋಡ್ರೆ ಇನ್ನೊಂದ್ ರಾಡ್ ಗೆ ಒರ್ಗಿ ನಿತ್ತ ಗೂಡೆ ನನ್ನ ನೋಡಿ ಮೋರೆ ಕರೇಲಿ ನೆಗಾಡ್ತುಟ್ಟು. ಯಾರೋ ಹೊಸ ಗೂಡೆ!! ಯಾರೂಂತ ಗೊತ್ತಾತ್ಲೆ. ಬೊಟ್ಟ್, ಕೆಬಿದ್, ಕೈದ್, ತುಟಿದ್, ಬಟ್ಟೆ ಎಲ್ಲಾ ಮ್ಯಾಚಿಂಗ್ ಮ್ಯಾಚಿಂಗ್... ಪಿಂಕ್!!! ಎಲ್ಲಿ ನನ್ನ ಯಜಮಾಂತಿ ನೋಡ್ದೆನಾಂತ ನೋಡ್ರೆ ಅದ್ ಸಿಕ್ಕಿದ ಹೆಮ್ಮಕ್ಕಳೊಟ್ಟಿಗೆ ಬಿಝೀ!! ಏನಪ್ಪಾ... ಲಡ್ಡು ಬಂದು ಬಾಯಿಗೆ ಬಿತ್ತಾ!! ಅಂತ ಖುಶಿಲಿ ನಾನೂ ತಿರ್ಗಿ ನೆಗಾಡ್ಡೆ. ಆದರೂ ಗೂಡೆ ಯಾರೂಂತ ನಂಗೆ ಗೊತ್ತಾತ್ಲೆ. ಅಂತೂ ಬಸ್ಸ್ ನಿಲ್ಸಿದಲ್ಲೆಲ್ಲಾ ಗೂಡೆ ನನ್ನ ನೋಡಿ ನೆಗಾಡ್ದು, ನಾ ತಿರ್ಗಿ ಸ್ಮೈಲ್ ಕೊಡ್ದು ಮುಂದುವರ್ತ್.(ಒಟ್ಟ್ 11 ಸರ್ತಿ) ಸುಳ್ಯಕ್ಕೆ ಎತ್ತಿದೇ ಗೊತ್ಲೆ. ಯಾರೋ ಒಬ್ಬ ರಶ್ ಲಿ ಕಾಲ್ ಗೆ ಮೆಟ್ಟ್ ಕಾಕನೇ ಗೊತ್ತು.. ಬಸ್ಸ್ ಬಸ್ಟಾಂಡ್ ಲಿ ನಿತ್ತುಟ್ಟೂಂತ!!

                    ಬಸ್ಸ್ ಇಳಿಯಕಾಕನೊಮ್ಮೆ ಲಾಸ್ಟ್ ಸರ್ತಿ ಅದರ ನೆಂಪು ಮಾಡಿಕಣೊನೋಂತ ಕಣ್ಣ್ ಲೇ ಹುಡ್ಕಿ ನೋಡಿ ನೆಗಾಡ್ದೆ. ಅದುನೂ ಪೊರ್ಲುಲಿ ನೆಗಾಡ್ತ್. ಓಟ್ಟಿಗೆ ನನ್ನ ಹೆಣ್ಣ್ ಕೂಡ ಅದರ ನೋಡೊಕೋ!! ನೋಡ್ರೆ ಅದರ ಕಣ್ಣ್ , ಮೋರೆ ಪಿಂಕ್ ಹೋಗಿ ಕೆಂಪಾಗುಟು!! ಅಂಗಡಿ ಹೆಂಗೂ ಇಲ್ಲಿಯೇ ಹಕ್ಕಲೆ ಉಟ್ಟಲ್ಲಾಂತ  ಬಸ್ಸ್ ಇಳ್ದ್ ನಡ್ಕಂಡ್ ಹೊರ್ಟೊ. ಆ ಗೂಡೆ ಮಾತ್ರ ನನ್ನ ತಲೆಂದ ಹೋತೇಲೆ. ಯಾರಾಗಿರ್ದು ಅದ್??!! ನನ್ನ ಕ್ಲಾಸ್ ಮೇಟ್ ಅಂತೂ ಅಲ್ಲ. ಯಾರಾರ್ ನನ್ನ ಕ್ಲಾಸ್ ಮೇಟ್ ನ ತಂಗೆನಾ? ಅಲ್ಲ..ಮೊನ್ನೆ ಬೆಂಗ್ಳೂರ್ಂದ ಬಾಕನ ಬಸ್ಸ್ ಲಿ ಸಿಕ್ಕಿದ ಗೂಡೆ ದೀಪಿಕಾನ? ಅದೂ ಅಲ್ಲ... ನನ್ನಪ್ಪನ ಸ್ಟೂಡೆಂಟ್ ಗಳ ಪೈಕಿ ಯಾರಾರ್ ಆಗಿರ್ದೋ ಹೆಂಗೆ? ಅಂತೂ ನನ್ನ ತಲೆಗೆ ಹೊಳ್ತ್ ಲೆ. ಅಷ್ಟೊತ್ತಿಗೆ ಒಟ್ಟಿಗೆ ನಡ್ಕಂಡ್ ಬರ್ತಿದ್ದ ನನ್ನ ಹೆಣ್ಣ್ ಕುತ್ತಿ ಕುತ್ತಿ ಕೇಳಿಕೆ ಸುರು ಮಾಡ್ತ್. 'ಯಾರ್ ಯಾ ಆ ಗೂಡೆ. ಭಾರೀ ಲಾಯ್ಕ್ ಲಿ ನೆಗಾಡ್ತೊಳರಿ!' 'ನಂಗೆ ಗೊತ್ಲೇ ಮಾರಾಯ್ತಿ' ಹೇಳ್ದಕ್ಕೆ  ಅವ್ಳು 'ಮತ್ತೆಂತಕೆ ಅದ್ ನಿಮ್ಮ ಹಿಂದೆಕಂಡೇ ಬರ್ತುಟ್ಟು??!!' . ತಿರ್ಗಿ ನೋಡ್ರೆ ... ಹೌದು... ಆ ಗೂಡೆ ನನ್ನ ಹಿಂದೆಕಂಡೇ ಉಟ್ಟು. ನಾನೂ ಒಮ್ಮೆ ಬ್ರೇಕ್ ಹಾಕಿ ನಿತ್ತೆ. ಪುನಃ ಅದೇ ಸ್ಮೈಲ್. ನೀ ಯಾರೂಂತ ಕೇಳಿಕೆ ಬಾಯಿ ತೆಗ್ಯಕೆ ಮೊದ್ಲೇ ಆ ಗೂಡೆನ ಪ್ರಶ್ನೆ ನಂಗೆ ಹಾರಿ ಬಾತ್. ಅದೇ ಪ್ರಶ್ನೆಲಿ ನನ್ನ ಹೆಣ್ಣ್ ನ ಡೌಟೂ ಹಾರಿ ಹೋತ್. " ಅಣ್ಣಾ... ನಿಮ್ಮೊಟ್ಟಿಗೆ 2000 ದ ನೋಟುಗೆ ಚಿಲ್ಲರೆ ಉಟ್ಟಾ??"

 

ಇತರೆ ಅರೆಭಾಷೆ ಬರಹಗಳಿಗೆ ಇಲ್ಲಿ ಹುಡ್ಕಿ - https://arebhasheminpuli.blogspot.in/


ಡಾ. ಪುನೀತ್ ರಾಘವೇಂದ್ರ

Read More
Blore

ಬೆಂಗ್ಳೂರೆಂಬ 'ಮಿಣ್ಪುಳಿ'!!!

16 Jul 2017

    "ಅಣ್ಣೂ… ಗಂಟೆ ಏಳಾತ್… ಎದ್ರ್… ಕಾಲೇಜ್ ಗೆ ಹೊತ್ತಾದೆ… ಕುಂಞ ಮಾವನ ದೊಡ್ಡ ಮಂಙ ಕುಟ್ಟನ ನೋಡು..  ಇಂಜಿನಿಯರಿಂಗ್ ಮುಗ್ಸಿ ಬೆಂಗ್ಳೂರ್ಲಿ ಒಳದ್ ಗೊತ್ಲೇನಾ ನಿಂಗೆ? ತಿಂಗಳಿಗೆ ಲಕ್ಷ ಲಕ್ಷ ದುಡ್ದದೆ…  ನೀನೂ ಹಂಗೆ ಆದು ಬೇಡನಾ?"  ಬೊಡ್ರೊಟ್ಟಿ ಹೊಯ್ತಾ  ಬೇಬಿಯಕ್ಕ ಮಂಙನ ಮೇಲೆ ಪರ್ರ್ಂಚಿಕೆ ಸುರು ಮಾಡ್ದೊ. ಅಮ್ಮನ ಮಾತ್  ಕೇಳ್ದ ಅಣ್ಣು 'ನಾನೂ ಒಂದಿನ ಹಂಗೇ ಆವೇಂತಾ' ಗೊಣ್ಗ್ಯಂಡ್ ಹಲ್ಲುಜ್ಜಿಕೆ ನೀರಡಿಗೆ ಓಡ್ತ್. ನಮ್ಮ ಕೆ.ವಿ.ಜಿ. ಗೌಡ್ರ್ ಒಂದ್ ಇಂಜಿನಿಯರಿಂಗ್ ಕಾಲೇಜ್ ಕಟ್ಟ್ ಸಿದರ್ರ್ಂದ ಇಂದ್ ನಮ್ಮ ಸುಳ್ಯದ ಮೂಲೆ ಮೂಲೆನ ಹೈದ/ ಗೂಡೆಗ  B.E.  ಮಾಡ್ತೊಳೊ. ಇಲ್ಲರೆ  ಡಿಗ್ರಿನೋ ಬೇರೇನೋ    ಮಾಡಿ ಕೆಲ್ಸ ಹುಡ್ಕ್ಯಂಡ್ ಹೊರ್ಡಕಾಗಿತ್ತೇನೋ!!! ಹಂಗೇ  ನಮ್ಮ ಅಣ್ಣುನೂ..  B.E. ಕಲಿತಾ ಲಾಷ್ಟ್ ಸೆಮ್ ಲಿ Project Work ಮಾಡಿಕೆ ಬೆಂಗ್ಳೂರ್ಗೆ ಬಂದ್ ಎತ್ತಿದ ಹೈದನ ಖುಷಿಗೆ ಲೆಕ್ಕನೇ ಇಲ್ಲೆ. ಸುಳ್ಯಲಿ ಇಂಜಿನಿಯರಿಂಗ್ ಕಾಲೇಜೇ ಎತ್ತರದ ಕಟ್ಟಡ ನೋಡಿದ್ದ ಅವಂಗೆ ಬೆಂಗ್ಳೂರ್ಲಿ ಬಿಲ್ಡಿಂಗ್ ಗಳ ನೋಡಿ ಒಮ್ಮೆ ತಲೆ ತಿರ್ಗಿರೆ,  KFC ಚಿಕನ್, McD ಬರ್ಗರ್ ನಾಲಿಗೆಗೆ  ಹೊಸ ರುಚಿನೇ ತೋರ್ಸಿತ್. ಅಲ್ಲಿ ಎಂ.ಜಿ. ರೋಡ್ / ಬ್ರಿಗೇಡ್ ರೋಡ್ ಲಿ ತೊಳ್ದ ಮೊಟ್ಟೆನಾಂಗಿರುವ ಗೂಡೆಗಳ ನೋಡಿ  ' ನಾ ಜಾಬ್ ಮಾಡ್ರೆ ಬೆಂಗ್ಳೂರ್ಲೇ' ಹೇಳಿಕಂಡ್ ಊರ್ ಕಡೆ ಹೊರ್ಟತ್ ನಮ್ಮ ಹೈದ!!

    ಇಂಜಿನಿಯರಿಂಗ್ ಮುಗ್ದಾಂಗೆ ಒಳ್ಳ ಕಂಪೆನಿಲಿ ಕೆಲ್ಸನೂ ಸಿಕ್ಕಿತ್ ನಮ್ಮ ಅಣ್ಣು ಹೈದಂಗೆ. ಬೇಬಿಯಕ್ಕಂಗಂತೂ ಖುಷಿಲಿ ಕಾಲ್ ನೆಲಲೇ ನಿಲ್ತಿಲ್ಲೆ. ಎಲ್ಲವ್ಕೂ ಫೋನ್ ಮಾಡಿ ಒಂದ್ ರೌಂಡ್ ಹೇಳಿನೂ ಆತ್ 'ನಮ್ಮ ಅಣ್ಣು ಬೆಂಗ್ಳೂರ್ಗೆ ಹೊರ್ಟುತೂಂತ!!'. ಸಿಟಿಗೆ ಬಂದ ಅಣ್ಣು ನಾಕ್ ಹೈದಂಗಳೊಟ್ಟಿಗೆ ಸೇರಿ ಒಂದ್ ರೂಮ್ ನೂ ಮಾಡ್ತ್. ಊಟ, ತಿಂಡಿ ಹೋಟ್ಲ್/ ಇಲ್ಲರೆ ಕಂಪನಿ ಫುಡ್ ಕೋರ್ಟ್!! ಬೊಳ್ಪಿಗೆ ಬರ್ಗರ್, ಮಧ್ಯಾಹ್ನ ಪಾಸ್ತಾ, ಕತ್ತಲೆಗೆ " ಅಂಬೂರ್ ಧಮ್ ಬಿರಿಯಾನಿ"!! ವೀಕೆಂಡ್ ಪಾರ್ಟಿ ಮತ್ತೆ ಸುತ್ತಿಕೆ ಮಂತ್ರಿ ಮಾಲ್/ ಸೆಂಟ್ರಲ್ ಮಾಲ್!! ಕಲರ್ ಕಲರ್ ಪಬ್ ಗಳ ಮುಂದೆ ಊರ್ಲಿ ಆತಿದ್ದ "ಹೊನಲು ಬೆಳಕಿನ ಕಬಡ್ಡಿ" ಯಾವ ಲೆಕ್ಕ. ಇದ್ ಸ್ವರ್ಗ!!! ನಂಗೆ ಇಲ್ಲಿ ಜಾಬ್ ಸಿಕ್ಕಿಕೆ ಪುಣ್ಯಮಾಡಿರೊಕೂಂತ ನೆನ್ಸಿಕಂಬತಿದ್ದ ಅಣ್ಣುಗೆ ಊರ್ ನ ನೆನ್ಪೇ ಇಲ್ಲೆ!!

    ಬೆಂಗ್ಳೂರ್ ಗೆ ಬಂದ ತಿಂಗ ಮೂರ್ ಕಳ್ದಾಂಗೆ ಈ ಮಾಯಾನಗರಿನ ನಿಜ  ಅನುಭವ ಆಕೆ ಸುರಾತ್ ನೋಡಿ.ಸಂಬಳ ಎಷ್ಟೇ ಬಂದರೂ ತಿಂಗಳ ಕಡೆಗೆ ಕೈಲಿ ಒಳಿದು ಕೆಲವೇ ಸಾವಿರ (ಅದೂ ಗ್ಯಾರಂಟಿ ಇಲ್ಲೆ!!). ಕೇವಲ ನಾವು ಉಸ್ರಾಡುವ ಗಾಳಿ ಮಾತ್ರ ಫ್ರೀ. ಆದರೆ ಅದೂ ಹೊಗೆ, ಧೂಳು ತುಂಬಿ ಹಿಂಬತಾಕನ ಮೂಂಕುಲಿ ಕಪ್ಪು ಕಪ್ಪು ಹೊಡಿ! ಮನೆಲಿ ಕೋಳಿ ಗೈಪು ಮಾಡ್ಕಾಕನ ಮಂಙಂಗೇಂತ  ಕರಿಯಡ/ ಪಟ್ಟಕಾಯಿ ತೆಗ್ದಿಸ್ತಿದ್ದೊ  ಅಮ್ಮ, ಇಲ್ಲಿ ಉಂಡರೂ ಉಣದಿದ್ದರೂ ಕೇಳಂವ ಇಲ್ಲೆ. ರೂಮ್ ಮೇಟ್ ಬಾದೇ 12 ಘಂಟೆ ಮೇಲೆ!! ಎಲ್ಲಿ ಹೋದರೂ ಬೆಂಳ್ತೆಕ್ಕಿನೇ ಹೊರ್ತು ಕೊಸ್ಲಕ್ಕಿ ಅನ್ನ/ ಕುಡು ಪೊಜ್ಜಿ/ ಒಣ್ಗಿಲ್ ಮೀನ್ ನ ಪೊರ್ಮಳನೇ ಇಲ್ಲೆ!! ಒಮ್ಮೆ ಊರ್ಗೆ ಹೋಗಿ ಬಾಕೆ ಆಗುವ ಖರ್ಚ್ ಊರುಲಿ ಕಾಲೇಜ್ ಗೆ ಹೋಕಾಕನ ಇಡೀ ತಿಂಗಳಿಗೇ ಸಾಕಾತಿತ್ತ್. ಫೋನ್ಲಿ ಹಳೆ ದೋಸ್ತಿಗಳೊಟ್ಟಿಗೆ  ಮಾತಾಡಿ ಮಾತಾಡಿ ಫೋನ್ ಬಿಸಿ ಆತಷ್ಟೇ ಹೊರ್ತ್ ಮನ್ಸ್ ತಂಪಾತ್ಲೆ(ಕಾರಣ ಎಲ್ಲರ ಕತೆನೂ ಅದೇ!!)  ಎಲ್ಯಾರ್ ಹೊರಗೆ ಹೋಗಿ ಬರೊನಾಂತ ರೂಮ್ ಮೇಟ್ ನೊಟ್ಟಿಗೆ ಕೇಳ್ರೆ "ಟ್ರಾಫಿಕ್ ಲೇ ಅರ್ಧದಿನ ಕಳೆದು ಬೇಡ" ಅಂತ ಉತ್ತರ. ಮನೆಲಿರ್ಕಾಕನ ಶಾಲೆಮಾವನ ಮನೆ , ಬಂಗಾರ್ಕೊಡಿ ದೊಡ್ದತ್ತೆ ಮನೆ, ಊರು ಬೈಲ್ ಉಗ್ಗಪ್ಪನ ಮನೆ ಎಲ್ಲಾ ಸುತ್ತಿಕಂಡ್ ಬಾಕೆ ಆತಿತ್ತ್. ಇಲ್ಲಿ? ಊರ್ ಗೆ ಬಂದಿರ್ಕಾಕನ  'ಬೆಂಗ್ಳೂರ್ಗೆ ಬಾಕನ ಮನೆಗೆ ಬಂದೇ ಬರೊಕು' ಹೇಳ್ದವೆಲ್ಲಾ ಫೋನ್ ಮಾಡ್ರೆ 'ನಾವು ಈವಾರ ಇಲ್ಲೆಯಾ.. ಒಂದ್ ಫಂಕ್ಷನ್ಗೆ ಹೋಕುಟ್ಟು' ಹೇಳ್ತೊಳೊ. ಈ ಬೆಂಗ್ಳೂರೇ ಹೀಂಗೆ.. "ಮಿಣ್ಪುಳಿ"ನಾಂಗೆ..ನೋಡಿಕೆ ಭಾರೀ ಲಾಯಿಕ್.. ಮಿಣ್ಪುಳಿ ಅಮಾಸೆ ಕತ್ತಲೆಲಿ ಮಿಣ್ಕಿ ಚೂರ್ ಬೆಳ್ಕ್ ತೋರ್ಸಿದೇ ಬುಟ್ಟ್ ಚಂದ್ರನಾಂಗೆ ಪೂರ್ತಿ ಬೆಳ್ಕಲ್ಲ!! ಹಂಗೇ ಬೆಂಗ್ಳೂರ್.. ಉಂಬಕೆ ಗಂಜಿ ಕೊಟ್ಟ್ , ಬೊದ್ಕಿಕೆ ದಾರಿ ತೋರ್ಸಿದೇ  ಹೊರ್ತ್ "ಕೊಡ್ದು ಬೊದ್ಕಲ್ಲ!!"  ಆದರೂ ಊರ್ ಲಿ B.E. ಮುಗ್ಸಿ ಬೆಂಗ್ಳೂರ್ಲಿ ಇನ್ನೂ ಕೆಲ್ಸಕ್ಕೆ ಪರ್ದಾಡಿಕಂಡ್ ಇರವ್ಕಿಂತ ನನ್ನ ಕಥೆ ಎಷ್ಟೋ ಮೇಲ್.  'ಕುರ್ಡ್ ಗಿಂತ ಕೋಸ್ ಮೇಲೂಂತ' ನೆನ್ಸಿಕಂಡ್ , ಮಾರ್ನೆ ದಿನದ ಡ್ಯೂಟಿಗೆ ಹೊರ್ಡುವ ಚಿಂತೆಲೇ ಮಲ್ಗಿಗೆ ಹೊರ್ಟತ್  ಅಣ್ಣು !!
ನಿಮ್ಮ ಹೈದ

Read More
Coorg coffee 750x500

ಸ್ಮಾರ್ಟ್ ಲ್ಯಾಂಡ್....

27 Dec 2017

ಸ್ಕಾರ್ಟ್ ಲ್ಯಾಂಡ್ ಸ್ಮಾರ್ಟ್ ಲ್ಯಾಂಡ್

ಕೊಡಗು ಲ್ಯಾಂಡ್ ಕಾಫಿ ಬಾಂಡ್

ಎಲ್ಲಿ ನೋಡ್ರು ಕಂಡದೆ ಕಾಫಿ

ಬಿಸಿ ಬಿಸಿ ಕುಡ್ದರೆ ಕಾಫಿ...Be happy

ಹಚ್ಚ ಹಸ್ರ್ ಲಿ ಮನೆನ ಹಿಂಬದಿ ಮುಂಬದಿಲಿ ಪೊರ್ಲುಲಿ ಹಾಕೊಳೋ ಹತ್ತಾರ್ ಕಾಫಿ ಗಿಡ ಇಲ್ಲಿ..

ಬೊಳ್ಪುನ ಗಾಳಿಲಿ ಪೊರ್ಲುನ ರಾಗಲಿ ನೂರಾರ್ ಹಕ್ಕಿಗ ಹಾಡ್ವೆ ಚಿಲಿಪಿಲಿ...

ಗಿಡಲಿ ಇದ್ದ ಎಲೆಗ ಸೇರಿ ಎಲೆನ ನಡುಲಿ ಕಾಫಿ ..ಹಸ್ರ್ , ಕೆಂಪು ಹಣ್ಣ್ ಗಜೋಡಿ.. ಎಲ್ಲವೂಕ್ಕೂ ಕಂಡದೆ ಬಲು ಮೋಡಿ

ಬಿಸ್ಲೆ ಇರ್ಲಿ ಮಳೆನೆ ಬರ್ಲಿ educated ಇರ್ಲಿ uneducated ಆಗಿರ್ಲಿ ಎಲ್ಲವೂಕ್ಕೂ ಯಾವುದೆ recommendation ಇರ್ದೆ ಕೆಲ್ಸ ಸಿಕ್ಕಿದೆ ಇಲ್ಲಿ...

ಸ್ಕಾರ್ಟ್ ಲ್ಯಾಂಡ್ ಸ್ಮಾರ್ಟ್ ಲ್ಯಾಂಡ್

ಕೊಡಗು ಲ್ಯಾಂಡ್ ಕಾಫಿ ಬಾಂಡ್....

 

✍ಕೊಕ್ಕಲೆ ಮಾಲಿನಿ ಮುತ್ತಪ್ಪ

Read More
Img 20170615 wa0045

ಪಾಚುನ ಕಟ್ಟ!!!

05 Jul 2017

       "ಕಟ್ಟ" ಹೇಳ್ರೆ ಅರೆಭಾಷೆಲಿ "ಒಟ್ಟಿಗೆ ಸೇರ್ಸಿ ಇಸುದು" ಅಂತ ಅರ್ಥ. ಕನ್ನಡಲಿ ಹೇಳ್ದಾದರೆ "ಕಟ್ಟು".  ಅಂದರೆ ಸೌದೆಹೊರೆ, ಹುಲ್ಲು ಹೊರೆ ಇದ್ಕೆ ಸೌದೆ ಕಟ್ಟ, ಹುಲ್ಲು ಕಟ್ಟ ಅಂತ ಹೇಳುವೆ. ಇನ್ನೊಂದು ನೀರ್ ಹರ್ದ್ ಹೋದರ ತಡೆಯಕೆ ಹಾಕುದು, ಅದೇ ನೀರ್ ಕಟ್ಟ(ಶುದ್ಧ ಕನ್ನಡಲಿ  ಒಡ್ಡು/ ಕಿಂಡಿ ಅಣೆಕಟ್ಟು). ಇನ್ನ್ ಕೋಳಿಕಟ್ಟ ನೀವ್ ಗೆಲ್ಲಾ ಗೊತ್ತೇ ಉಟ್ಟು!!! ನಾ ಈಗ ಹೇಳಿಕೆ ಹೊರ್ಟದ್ "ಪಾಚುನ ನೀರ್ ಕಟ್ಟ". ಊರೊಳಗೆ ಪ್ರಗತಿಪರ ಕೃಷಿಕ ಹೆಸ್ರ್ ಮಾಡ್ದ ನಮ್ಮ ಪಾಚು, ಕೃಷಿಲಿ ಬಗೆ ಬಗೆ ಪ್ರಯೋಗ ಮಾಡ್ತಿತ್ತ್. ಹಡ್ಲ್ ಬಿದ್ದ ಗದ್ದೆಗಳೆಲ್ಲಾ ಟಿಲ್ಲರ್ ಹೊಡ್ಡ್ ವರ್ಷಲಿ ಮೂರು ಬೆಳೆ ತೆಗೆವ ಆಸೆ. ಆದರೆ ಸುಗ್ಗಿ ಬೆಳೆಗೇ ನೀರ್ ಅಲ್ಲಿಂದಲ್ಲಿಗೆ, ಇನ್ನ್ ಏಣೆಲ್ ಗೆಲ್ಲಿಂದ?? ಕಾರಣ ಆಧುನೀಕತೆ!! ಅದೇಂಗೆ?? ಹಿಂದೆಲ್ಲಾ ಚೊಂಟೆಲಿ ನೀರ್ ಗೋಂಚ್ ತಿದ್ದೊ. ಈಗ ಕರೆಂಟ್ ಪಂಪ್ ಬಂದ್ ನೀರ್ ಆರ್ಕಾಕನ ಮುಟ್ಟ ಪಂಪ್ ನಿಲ್ಸುವ ಗೊಡವೆನೇ ಇಲ್ಲೆ ( ಮೆಸ್ಕಾಂನವು ಸಿಂಗಲ್ ಫೇಸ್ ಕೊಟ್ಟರೆ ಮಾತ್ರ ಪಂಪ್ ಆಫ್ ಆದು!!). ಹಂಗಾಗಿ ಹಳ್ಳಗಳ್ಲಿ ಡಿಸೆಂಬರ್ ತಿಂಗಳ್ಲೇ ಪಾರೆ ಕಲ್ಲ್ ಗ ಎದ್ದ್ ಕುದ್ದಿದ್ದವೆ. ಮಾರ್ಚ್ ತಿಂಗಳ್ಲಿ 3 ದಿನ ಮಳೆ ಬಂದರೆ ಸಾಕ್. ಹಳ್ಳಲಿ ನೀರ್ ತುಂಬಿ ಹರ್ದದೆ. ಮಳೆ ನೀರಲ್ಲ!? ಯಾರೂ ಪಂಪ್ ಸ್ಟಾರ್ಟ್ ಮಾಡುದ್ಲೆ. ಅದರ್ರ್ಂದಾಗಿ!! ಆಗ ನಮ್ಮ ಪಾಚುಗೆ ಹೊಳ್ದ ಐಡಿಯಾನೆ ಗದ್ದೆ ಕರೆಲಿದ್ದ ಚೋಡಿಗೆ " ಕಟ್ಟ ಕಟ್ಟುದು".

     ನೆರೆಕರೆಯವರೊಟ್ಟಿಗೆ ಎಲ್ಲಾ ಕೇಳಿ ಕಟ್ಟ ಹಾಕುವ ದಿನ ನಿಘಂಟ್ ಮಾಡ್ಯಾತ್. ಆಕಿಲೇಂತ ಹೇಳ್ದವು ಯಾರೂ ಇಲ್ಲೆ. ಎಲ್ಲವ್ಕೂ ನೀರ್ ಸಿಕ್ಕಿದಲ್ಲೇಂತ ಕುಸಿನೊಟ್ಟಿಗೆ ಕೆಳಗೆಡೆನ ತೋಟಕ್ಕೆ ನೀರ್ ಚೋಂಪ್ ವ ಕೆಲ್ಸ ಒಳ್ದದೆ ಎಂಬ ಸಮಾಧಾನ. ಸಿಡ್ಲ್ ಹೊಡ್ದ್ ಸತ್ತ, ಮುಂಡ್ ತಿರಿ ಆಗಿ ಕುಬೆ ಚೊಯ್ಯ್ಂಗಲೆ ಆದ ಕೊಮ್ಮ್ ಗಳೆಲ್ಲಾ ಸಿಗ್ದ್ ಗಟ್ಟಿ ಮುಟ್ಟ್ ನ ತಟ್ಟೆ ಮಾಡಿಕಂಡೊ. ಕೆಲ್ಸಕ್ಕೆ ಬಂದವ್ಕೆಲ್ಲ ಕೋಳಿ ಗೈಪುನ ಗಮ್ಮತೂ ಆತ್. ಒಟ್ಟಿಗೆ ಹನೀಸ್ ಹನೀಸ್ ಗ್ಯಾರ್ದಣ್ಣ್ ದೂ!! ಅಂತೂ ಭರ್ಜರಿ ಕಟ್ಟ ಕಟ್ಟಿ ಗದ್ದೆ, ತೋಟಗಳಿಗೆ ನೀರ್ ಬುಟ್ಟೊ. ಅದರೊಟ್ಟಿಗೆ ನಮ್ಮ ಪಾಚುನ ದೆಸೆನೇ ಬದ್ಲಾತ್.. ಕೃಷಿ ಜಾಸ್ತಿ ಆಗೀಂತ ನೆನ್ಸಿದರಿಯಾ... ಖಂಡಿತಾ ಅಲ್ಲ... ನಮ್ಮ ಪಾಚು ಹಾಕಿದ  "ಫೇಸ್ ಬುಕ್ ಫೋಟೋ"ನೇ ಕಾರಣ!!??


       ಫೇಸ್ ಬುಕ್ ಲಿ ಬಂದ ಫೋಟೋ ನೋಡಿ ಪಾಚುನ ಕಟ್ಟಕ್ಕೆ ಸುಮಾರ್ 'ಲೈಕ್'ಗ ಒಟ್ಟಿಗೆ ಒಂದಷ್ಟ್ ಶುಭಹಾರೈಕಗ ಬಾತ್. ಅದರೊಟ್ಟಿಗೆ ಒಂದ್ ಗೂಡೆನ "ಫ್ರೆಂಡ್ ರಿಕ್ವೆಷ್ಟ್" ಕೂಡ!! ಗೂಡೆ ಹಂಚಿಮನೆ ಲಚ್ಚಣ್ಣನ ಎರಡ್ಣೇ ಮಗ್ಳ್ ಅಮ್ಮುಣಿ. ಆ ಗೂಡೆ ಎಂಎಸ್ ಡಬ್ಲ್ಯೂ ಓದಿ ಸಮಾಜ ಕಾರ್ಯಲಿ ಇರವ್ಳು. ಪಾಚುನ ಸಮಾಜಮುಖಿ ಕಾರ್ಯನೋಡಿ ಅಮ್ಮುಣಿಗೂ ಅವನ ಬಗ್ಗೆ ಒಳ್ಳೆ ಮನ್ಸ್ ಅಷ್ಟೆ. ಫೇಸ್ ಬುಕ್ ಪರಿಚಯ ದಿನ ಆದಷ್ಟ್ ಗಟ್ಟಿ ಆಕಂಡ್ ಬಾತ್. ಮನೆಯವ್ಕೂ ಹೇಳಿ ಹೊಸ ನೆಂಟಸ್ತಿಕೆ ಶುರ್ ಮಾಡೋಣೋಂತ ನೆನ್ಸಿದೊ. ಆದರೆ ಭೇಟಿ ಆಕೊಲ್ಲಾ??  ಅಂತೂ ಪಾಚುನ "ಫಸ್ಟ್ ಡೇಟಿಂಗ್" ಫಿಕ್ಸ್ ಆತ್. ಎಲ್ಲರಾಂಗೆ ಚೆನ್ನಕೇಶವ ದೇವಸ್ಥಾನಲೋ, ಆಲ್ ಸೀಸನ್ ಹೋಟೆಲ್ಲೋ ಅಲ್ಲ. ಪರಿಚಯಕ್ಕೆ ಕಾರಣ ಆದ "ನೀರ್ ಕಟ್ಟದ ಕರೆಲಿ"!!! ಸರಿ... ನಮ್ಮ ಪಾಚುನೂ, ಅಮ್ಮುಣಿನೂ ಕಟ್ಟದ ಹಕ್ಕಲೆ ಎತ್ತಿದೊ. ಅಲ್ಲಿಗೆತ್ತಿ ನೋಡ್ರೆ ಎಂತ? ಕತ್ತಲೆನೆ ರಣ ಮಳೆಗೆ ನೀರ್ ತುಂಬಿ, ಕಟ್ಟ ಒಡ್ದ್, ಹಾಕಿದ್ದ ಕೊಮ್ಮ್ ನ ತಟ್ಟೆ ಎಲ್ಲಾ ಬೊಳ್ಳಲಿ ಹೋಗುಟು!! ಅಲ್ಲಿದ್ದ ಎರ್ಡ್ ಎಸ್ಂಡ್ ಗ ಕೊಂಬಲಿ ಒರ್ಂಗಿಸಿ ಮೋಟೆ ಸೇರ್ದೊ. ಪಾಪ ಪಾಚು... ಮನ ಮೆಚ್ಚಿದ ಗೂಡೆಗೆ ತನ್ನ ಕಾರ್ಯನ ತೋರ್ಸಿಕೆ ಹೋಗಿ ಹೊಗ್ಳಿ ಹೊಗ್ಳಿ ಅಗ್ಳ್ ಹರ್ಂಡಿದಾಂಗಾತ್!! ಆದರೂ ಪರ್ವಾಗಿಲ್ಲೆ... ಹೈದ,ಗೂಡೆಗ ಹೊಸ ಜೀವನ ಕಟ್ಟುವ ಬಗ್ಗೆ ಮಾತಾಡಿಕಣ್ತಾ ದೊಡ್ಡವ್ಕೆ ತಿಳ್ಸಿಕೆ ಹೊರ್ಟೊ. 

- ನಿಮ್ಮ ಹೈದ 

Read More