Coorg coffee 750x500

ಸ್ಮಾರ್ಟ್ ಲ್ಯಾಂಡ್....

ಸ್ಕಾರ್ಟ್ ಲ್ಯಾಂಡ್ ಸ್ಮಾರ್ಟ್ ಲ್ಯಾಂಡ್

ಕೊಡಗು ಲ್ಯಾಂಡ್ ಕಾಫಿ ಬಾಂಡ್

ಎಲ್ಲಿ ನೋಡ್ರು ಕಂಡದೆ ಕಾಫಿ

ಬಿಸಿ ಬಿಸಿ ಕುಡ್ದರೆ ಕಾಫಿ...Be happy

ಹಚ್ಚ ಹಸ್ರ್ ಲಿ ಮನೆನ ಹಿಂಬದಿ ಮುಂಬದಿಲಿ ಪೊರ್ಲುಲಿ ಹಾಕೊಳೋ ಹತ್ತಾರ್ ಕಾಫಿ ಗಿಡ ಇಲ್ಲಿ..

ಬೊಳ್ಪುನ ಗಾಳಿಲಿ ಪೊರ್ಲುನ ರಾಗಲಿ ನೂರಾರ್ ಹಕ್ಕಿಗ ಹಾಡ್ವೆ ಚಿಲಿಪಿಲಿ...

ಗಿಡಲಿ ಇದ್ದ ಎಲೆಗ ಸೇರಿ ಎಲೆನ ನಡುಲಿ ಕಾಫಿ ..ಹಸ್ರ್ , ಕೆಂಪು ಹಣ್ಣ್ ಗಜೋಡಿ.. ಎಲ್ಲವೂಕ್ಕೂ ಕಂಡದೆ ಬಲು ಮೋಡಿ

ಬಿಸ್ಲೆ ಇರ್ಲಿ ಮಳೆನೆ ಬರ್ಲಿ educated ಇರ್ಲಿ uneducated ಆಗಿರ್ಲಿ ಎಲ್ಲವೂಕ್ಕೂ ಯಾವುದೆ recommendation ಇರ್ದೆ ಕೆಲ್ಸ ಸಿಕ್ಕಿದೆ ಇಲ್ಲಿ...

ಸ್ಕಾರ್ಟ್ ಲ್ಯಾಂಡ್ ಸ್ಮಾರ್ಟ್ ಲ್ಯಾಂಡ್

ಕೊಡಗು ಲ್ಯಾಂಡ್ ಕಾಫಿ ಬಾಂಡ್....

 

✍ಕೊಕ್ಕಲೆ ಮಾಲಿನಿ ಮುತ್ತಪ್ಪ

Comments

Male
Rakshith ranju Spr
8 months ago
1536675160087
Malini Muthappa Tq... Kiran sir....
9 months ago
470
Kiran Kumbalacheri ಸೂಪರ್,,,,,, ಬರವಣಿಗೆ ಲಾಯಿಕ್ ಆಗುಟು,,,,
9 months ago
1536675160087
Malini Muthappa Tq Hemashri...
9 months ago
Img 20180317 223413 938
Hemashri k l Nyc
9 months ago

Other articles

Yourstory indianmobilewallet

ಕರೆನ್ಸಿ

06 Aug 2017

ಅಂದು ಕಂಡೆ ನಾ ಒಂದು ಸುಂದರಿ||

ಹೊಗಳಲಿ ಅವಳ ಯಾವ ಪರಿ||

    ಗೊಣಗುತ್ತಾ ಹೋಗುತ್ತಿರಲು ನಾ ಒಂದು ಸುಂದರ ಗೀತೆ||

    ಅವಳು ಮಾತ್ರ ಮಾತಾನಾಡುತ್ತಿದ್ದಳು ಯಾರದೋ ಜೊತೆ||

ಅವಳ ಮೊಬೈಲ್ ಕೆನ್ನೆಗೆ ಮುತ್ತಿಕ್ಕುತಿರಲು||

ನಾನಾದರೂ ಆಗಬಾರದಿತ್ತೇ ಆ ಮೊಬೈಲು||

      ಮಾತಾನಾಡುತ್ತಾ ಮಾತಾನಾಡುತ್ತಾ ಯಾಕೋ ನೋಡಿದಳು ನನ್ನ||

ನನಗೆ ಅನಿಸಿತು ಹಾಕಿದಳು ನನ್ನ ಹೃದಯಕ್ಕೆ ಕನ್ನ||

ಮೊಬೈಲ್‌ ಬದಿಗಿಟ್ಟು ಬಂದಳು ನನ್ನ ಬಳಿ||

ನನಗೆ ಮಾತ್ರ ಕೂತಿತ್ತು ಚಳಿ||

     ಬಂದು ಕೇಳಿದಳು ಒಮ್ಮೆ ಮೊಬೈಲ್ ಕೊಡುವಿರಾ||

   ಅವಳ ನೋಡಿ ತಕ್ಷಣ ಕೊಟ್ಟೆ, ಏನು ಆತುರ||

ಆಮೇಲೆ ಹೇಳಿದಳು ಅಣ್ಣಾ ಕರೆನ್ಸಿ ಖಾಲಿ ಆಗಿದೆ||

ಹೇಗೆ ಹೇಳಲಿ ನನ್ನ ಹೃದಯ ಖಾಲಿ ಇದೆ||

 

Read More
458245 429995 exams cheating

ಚೀಟಿ ಪುರಾಣ...!!!

18 Sep 2017

        ಹೌದು ಶಾಲೆಯೆಂದರೆ ಅಲ್ಲಿ ಮದುವೆಗೆ ಬಣ್ಣದ ಕಾಗದದ ತೋರಣ ಕಟ್ಟಿದಂತೆ ಸಾಲು ಸಾಲು ಪರೀಕ್ಷೆಗಳು,ಕಿರು ಪರೀಕ್ಷೆ, ಮಧ್ಯ ವಾರ್ಷಿಕ, ವಾರ್ಷಿಕ, ಸೆಮಿಸ್ಟರ್, ಮರುಪರೀಕ್ಷೆ, ಸಿದ್ದತಾ ಪರೀಕ್ಷೆ , ಗಣಿತದ ಸಾಧನೆಗಳು, ರಾಸಾಯನ ಶಾಸ್ತ್ರದ ಸೂತ್ರಗಳು, ಜೀವ ಶಾಸ್ತ್ರದ ವೈಜ್ಞಾನಿಕ ಹೆಸರುಗಳು, ವಾರದಲ್ಲೊಂದು ಪರೀಕ್ಷೆ, ಒಂದು ಪಾಠ ಅದ ಮೇಲೊಂದು ಪರೀಕ್ಷೆ ಅದು, ಇದು ಒಂದೇ , ಎರಡೇ ,..  ಒಂದು ತರಗತಿಯಲ್ಲಿ ಕನಿಷ್ಠ 6 ಪಠ್ಯಗಳು, 8 ಪರೀಕ್ಷೆಗಳೆಂದು ಗುಣಿಸಿದ್ರೂ ಡಿಗ್ರಿ ಮುಗಿಯುವ ಹಂತಕ್ಕೆ 800 ಪರೀಕ್ಷೆಗಳನ್ನು ಗಡದ್ದಾಗಿ ಬರೆದಿರುತ್ತೇವೆ. ಇನ್ನೂ ಪೊಡಿ, ಪೊಡಿ ಪರೀಕ್ಷೆಗಳನ್ನು ಸಂಕಲನ ಮಾಡಿದರೆ 1400 ಗಡಿ ದಾಟಬಹುದು. ಇಷ್ಟೊಂದು ಪರೀಕ್ಷೆಗಳಿಗೆ ತಯಾರಿ ಹೇಗಿರಬೇಡ ಹ್ಹಹ್ಹಹ್ಹ ಅಷ್ಟೊಂದು ಕಕ್ಕುಬೇಕಾದರೆ ಎಷ್ಟು ತಿನ್ನಬೇಡ !!! 

           ಮನೆಯಲ್ಲಿ ಅಮ್ಮನ ಕಣ್ಣು ಕಟ್ಟಲು, ಪುಸ್ತಕ ಬಿಡಿಸಿ ಓದಿದಂತೆ ನಟಿಸಿ, ಮತ್ತೆ ಪರೀಕ್ಷೆಗೆ ತಯಾರಿ ನಡೆಸುವ ಪರಿಯೋ ಬ್ರಹ್ಮನಿಗೆ ಪ್ರೀತಿ, ಹೌದು ಅದೆಷ್ಟು ಚೀಟಿಗಳು, ಪೆನ್ಸಿಲ್ ಕೆತ್ತನೆಗಳು, ಗೋಡೆ ಬರಹ, ಅಂಗಿ ಅಕ್ಷರಗಳು, ಡೆಸ್ಕು ಸಾಹಿತ್ಯ, ಮಣಿಗಂಟು ಲೇಖನ, ಹಲವು ಬಗೆ , ಯಾರು ತರಗತಿಯಲ್ಲಿ ಓದುತ್ತಾನೆಯೋ ಅವನ ತಲೆಗೆ ದಂಡ ಪಾವತಿಸಿ  ಇಪಾರ್ಟಂಟ್ ಕ್ವೇಶನ್ ಕೇಳಿ ಗೆರೆ ಹಾಕಿಯೋ, ಅಲ್ಲಿ ಇಲ್ಲಿ ಬರೆದೋ, ಯುದ್ಧಕ್ಕೆ ಶಸ್ತ್ರಾಭ್ಯಾಸಕ್ಕೆ ಸಿದ್ಧ ಅಂಗೈ ಅಗಲದ ಸಾಮಾನು ಚೀಟಿ ಎತ್ತಿ ಭೂತಕನ್ನಡಿಯಿಟ್ಟು ನೋಡುವಸಷ್ಟು ಪುಟ್ಟ ಅಕ್ಷರಗಳಾದರೂ ಸ್ಪುಟ, ಸ್ಪಷ್ಟತೆಯಿಂದ ಎದ್ದು ಕಾಣುವಂತೆ ಬರೆದು ಸೋಲ್ಡಿ (ಲಕ್ಕಿಡಿಪ್ ಡ್ರಾ) ಹಾಕುವಂತೆ ಮಡಚಿ, ಉದ್ದ ತೋಳಿನ ಅಂಗಿಯ ಕೈಯಲ್ಲೋ, ಬೆಲ್ಟ್ ನ ಸೆರೆಯಲ್ಲೋ, ಡೆಸ್ಕಿನ ಎಡೆಯಲ್ಲೋ, ಕಿಟಕಿಯ ಮೂಲೆಯಲ್ಲೋ, ಪೆನ್ನಿನೊಳಗೋ, ಕಂಪಾಸ್ ಡಬ್ಬದೊಳಗೋ, ಲಾಗ್ ಪುಸ್ತಕದ ಮಧ್ಯದಲ್ಲೋ, ಖಾಸಗಿ ಜಾಗಗಳಲ್ಲೋ ಸುಲಭವಾಗಿ ಸಿಗುವಂತಹ, ಸುರಕ್ಷಾ ಸ್ಥಳಗಳಲ್ಲಿ ಇಟ್ಟು ಸಿದ್ಧಗೊಳ್ಳುವ ಪರಿಯೇ ಅಬ್ಬಾಬ್ಬಾ ಸೈನಿಕರನ್ನು ಮಿರಿಸುವ ಕರಾಮತ್ತು , ಚೀಟಿ ಬರೆದು ಸಿದ್ಧಪಡಿಸಿದರೆ ಸಾಕೇ... ಪರಿಕ್ಷೇಯಲ್ಲಿ ಬರುವ ಅಪರಿಚಿತ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲಾ ಅದಕ್ಕೂ ಪಂಚವಾರ್ಷಿಕ ಯೋಜನೆಯಂತೆ, ಯಾವ ಪಾಠಕ್ಕೆ ಯಾವ ಚೀಟಿಯೆಂದು ಸಾಲು ಸಾಲು ಕ್ರಮಸಂಖ್ಯೆಗಳು, ಯಾವ ಪ್ರಶ್ನೆಗೆ ಯಾವ ಉತ್ತರ.

        ಇನ್ನೂ ಚೀಟಿ ಬಿಡಿಸಿ ನೋಡುವ ಕ್ರಮವೋ ವರ್ಣಿಸ ಹೊರಟರೆ ಪುಟಗಳು ಸಾಲದು..!! ನಮ್ಮ ಮನೆಬಿರುಕು ಮಾಡುವ ಧಾರಾವಾಹಿಯ ಸೊಸೆ, ಅತ್ತೆಯನ್ನು ಬಾಗಿಲ ಸಣ್ಣ ಸಂದಿನಿಂದ ನೋಡುವಂತೆ, ಕಣ್ಣಿನ ರೆಪ್ಪೆಗಳಿಗೆ ಕೋನ ನೀಡಿ, ಪಂಚೇಂದ್ರಿಯಗಳು ಸೈನಿಕನಂತೆ ಸೆಟೆದು ನಿಂತು ಜತನದಿಂದ ಶಿಕ್ಷಕರ ಧ್ವನಿ, ಶಿಕ್ಷಕಿಯ ಕಾಜಿಯ ಸಂಗೀತ, ಹೊಸ ಮದುವೆಯಾದ ಟೀಚರಿನ ಕಾಲಿನ ಗೆಜ್ಜೆನಾದ, ತಲೆಗೆ ಮೂಡಿದ ಹೂವಿನ ಪರಿಮಳ, ನಿದ್ದೆ ಮಾಡಿದಂತೆ ನಟಿಸುವ ಮಾಸ್ತ್ರರ ದೃಷ್ಠಿ, ಅಲ್ಲಾಡುವ ನೆರಳು,   ಗಾಳಿಯ ಒತ್ತಡವೆಲ್ಲವನ್ನು ಗ್ರಹಿಸಿಕೊಂಡು  ಕಾಪಾಡಿಕೊಳ್ಳಬೇಕು. ಮೊದಲ ದಿನದ ಪರೀಕ್ಷೆಯಲ್ಲಿ ಮೊಹರು ಹಾಕಿದ ಉತ್ತರಪತ್ರಿಕೆಯನ್ನು ತೆಗೆದುಕೊಂಡು ಪುಟ ತುಂಬಾ ಬರೆದು ಮರುದಿನದ ಪರೀಕ್ಷೆಯಲ್ಲಿ ಹಗ್ಗ ಕಟ್ಟುವುದು ಇದೆ, ಮತ್ತೆ ಪ್ರಶ್ನೆ ಪತ್ರಿಕೆಯ ಕೆಳಗೆ, ಕಾಂಪಾಸು ಡಬ್ಬದ ಒಳಗೆ, ಕ್ಯಾಲ್ಕುಲೇಟರ್ ನ ಮೇಲೆ, ಆಡಿಕೋಲುಗಳ ಅಡಿ ಭಾಗ, ಲಂಗದ ನಡುವೆ, ಹಳೆಯ ಪ್ರಶ್ನೆ ಪತ್ರಿಕೆಗಳಲ್ಲೇ ಇನ್ನೂ ಹಲವಾರು....ಇಷ್ಟು ಮಾಡಿ ಪರೀಕ್ಷೆಯಲ್ಲಿ ಅದೇ ಪ್ರಶ್ನೆ ಬಂದು ಬರೆದೆ ಅಂದ್ರೆ ಅಮ್ಮನ ಮೊದಲ ಪ್ರಸವದಷ್ಟು ಖುಷಿ... 


             ಬರೀ ನಾವೇ ಬರೆದರಾಯಿತೆ !! ದಾನಶೂರರಲ್ಲವೇ, ನಾವು ಬರೆಯುವುದ್ದಕ್ಕೂ ಸೈ ಮತ್ತೊಬ್ಬರನ್ನು ಪ್ರೋತ್ಸಾಹಿಸಲು ಜೈ ಯೆಂಬಂತೆ ಈ ಚೀಟಿಗಳನ್ನು ವರ್ಗಾಹಿಸುವುದೋ ಅದೊಂದು ಕಷ್ಟದ ಸನ್ನಿವೇಷ "ನನಗೆ ಬರೆದಾಗಲಿಲ್ಲ ಅವನದು ಕಿರಿಕಿರಿ" ಸಿಟ್ಟೋ ಸಿಟ್ಟು ಅದರು ಗೆಳೆಯನಲ್ಲವೇ ಕೊಡಬೇಕಲ್ವಾ !!  ನಾಳೆ ಅವನೇ ಬೇಕಲ್ಲಾ .. ಅದಕ್ಕಾಗಿ ಕಣ್ಸನ್ನೆಗಳೆನು?, ಪೆನ್ನಿನ ಕಡೆಯಲ್ಲಿ ಕುಟ್ಟುವುದೇನು?, ಕಾಲು ಗುದ್ದುವುದೇನು?, ಕೈ  ಮೇಲೆತ್ತುವುದೇನು?, ರಬ್ಬರ್ ಗೆ ಕಟ್ಟಿ ಬಿಸಾಡುವುದೇನು? ಮತ್ತೆ ಅಪರೂಪಕ್ಕೆ ಮಾಸ್ಟ್ರು ನೋಡಿದರೆಂದರೆ ಮೆಲ್ಲಗೆ ಕಿಟಕಿಯಿಂದ ಹಾರಿಸುವುದೇನು, ಚಡ್ಡಿಯೊಳಗೆ ಹಾಕುವುದೇನು, ಕುಪ್ಪಸದೊಳಗೆ ತುರುಕಿಸುವುದೇನು, ಕಾಲುಚೀಲದೊಳಗೆ ನುಗ್ಗಿಸುವುದೇನು. ಬಾಯಲ್ಲಿ ಹಾಕಿ ಜಗಿಯುವುದೇನು? ಅಬ್ಬಾ ನಗೋದು ಬೇಡ.. ಓದುತಿರುವ ನೀವು ಅಪ್ಪ ಅಮ್ಮನಾಗಿದ್ದರೆ  ಮಗನಿಗೋ, ಮಗಳಿಗೋ ಹೇಳಿ ಕೊಡಿ ಅವರು ಕಲಿಯಲಿ, ಶಾಲೆ- ಕಾಲೇಜಿಗೆ ಹೋಗುವವರಾಗಿದ್ದರೆ ಒಮ್ಮೆ ಪ್ರಯತ್ನಿಸಿ ನೋಡಿ ಒಳ್ಳೆ ಫಲಿತಾಂಶ ಬರಬಹುದು.... ಸಮಾಜಕ್ಕೆ , ನೌಕರಿಗೆ, ಬೇಕಾಗಿರೊದು ನೀವು ಗಳಿಸಿದ ಅಂಕ, ಹೇಗೆ ಗಳಿಸಿದನೆ/ಳೆಂಬುವುದು ಮುಖ್ಯ ಅಲ್ಲ ಅಲ್ಲವೇ...ಶುಭವಾಗಲಿ

-- ಭರತೇಶ ಅಲಸಂಡೆಮಜಲು 

Read More
356853 thumb

ಇನ್ನೂ ಅದೆಷ್ಟು ದೂರ …!

14 Feb 2018

ಮನದಲಿ ಚದುರಿ ಬಿದ್ದ
ನೆನಪುಗಳ ನಿಶ್ಶಬ್ದ
ಸಂಗೀತ…
ನಷ್ಟಗಳ ಲೆಕ್ಕಾಚಾರ
ಮತ್ತೆ,
ಉಮ್ಮಳಿಸಿ ಬರುವ
ನೋವು …
ಕೊನೆಗೆ ಎಲ್ಲವನ್ನು ಒಂದು
ಮಂದಹಾಸದಲ್ಲಿ
ಮೊಗೆದು
ನಗುವ
ನಾಳೆಗಳಿಗೆ ದೃಷ್ಟಿ ನೆಟ್ಟು
ನಾವು ಈ ದಾರಿಯಲ್ಲಿ
ಇನ್ನೂ ಅದೆಷ್ಟು ದೂರ …!

Read More
54545240

ಪುಂಡುನ ಗೂಡೆ ಪದ್ರಡ್ ಗಡ!!!

03 Dec 2017

    ಕೆಲವೊಮ್ಮೆ ಏನೋ ಮಾಡಿಕೆ ಹೋಗಿ ಏನೇನೋ ಆದೆ. ಗಣಪತಿನ ಮಾಡಿಕೆ ಹೋಗಿ ಅವನ ಅಪ್ಪನ  ಮಾಡ್ದ ಹಾಂಗೆ!! ಪೂರ್ತಿ ಮೊರ್ಲರ ಬೇಕರೂ ಒಂದ್ ನಮೂನೆಗೆ ಸರಿ ಮಾಡಕ್.. ಆದರೆ ಈ ಅರೆಮೊರ್ಲರ ಸರಿ ಮಾಡ್ದು ಭಾರೀ ಭಂಗ!!! ಹಂಗೇ ಇಲ್ಲೊಬ್ಬ ಅರೆಮೊರ್ಲನೇ ನಮ್ಮ "ಪುಂಡು". ಪುಂಡಿಮನೆ ನಾರ್ಣಣ್ಣನ ಕಡೇ ಮಂಙ. ಮೇಲೆಂದ ಮೇಲೆ ಸಾಲಾಗಿ ಐದ್ ಹೆಣ್ಣ್ ಮಕ್ಕಳೇ ಆದದರ ಕಂಡ್ ನಾರ್ಣಣ್ಣಂಗೆ ಭಾರೀ ಬೆಚ್ಚಲಿತ್ತ್. ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲಾ ಸುತ್ತಿ, ಕಂಡ ಕಂಡ ದೇವ್ರುಗಳಿಗೆಲ್ಲಾ ಹರ್ಕೆಹೊತ್ತ್ ಕಡೆಗೆ ದೇವ್ರ್ ಗಳಿಗೇ ಇವನ ಉಪದ್ರ ತಡೆಯಕೆ ಬೊತ್ತದಾಗಿಯೋ ಏನೋ ಕೊಟ್ಟ ಒಂದ್ ಕಿಳೆ ಮೊರಿ ಕೊಳ್ಳಿ ಕುಬೇರನೇ ಈ ಪುಂಡು. ಅದರ್ಂದಾಗಿಯೋ ಗೊತ್ಲೆ ಹೈದನ ಕಣ್ಣ್ ಚೂರ್ ಕೋಸ್, ತಿರ್ರ್ಂಟೆಲ್ ಕೆಬಿ ಒಟ್ಟಿಗೆ ಎಡ್ದ ಕಾಲ್ ಚೂರ್ ಚೊಟ್ಟೆ. ನಡ್ಯಕಾಕನ ಚೂರ್ ಏಂಟಿಕಂಡೇ ನಡಿದು. ಇನ್ನ್ ಮಾತ್ ಮಾತ್ರ..... ಆಹಾ...ಸೂಪರ್...ಕೊಂಞೆ.. ಕೊಂಞೆ.. ಕೊಂಞ್ಞೇ!!!  ಒಬ್ಬನೇ  ಮಂಙಾಂತ ಮನೆಯವೆಲ್ಲಾ ಮೋಕೆಲೇ ಸಾಂಕಿದೊ. ತಿಂಬಕೆ ಕುಡಿಯಕೆ ಬಿಣ್ಣರ ಬಿಕ್ಕರ ಬೇಕಾದಾಂಗೆ  ಬಗೆ ಬಗೆ ಮಾಡಿ ಅಯ್ಯೆ ಇಕ್ಕಿರೆ, ಅಕ್ಕಂದ್ರ್ ಇವಂಗೆ ಕುಂಡೆ ಪೊಕ್ಕ್ ಸಿ ಒಂದೂ ಕೆಲ್ಸ ಮಾಡಿಕೆ ಬುಡಿಕಿಲೆ. ಹಂಗಾಗಿ ಪುಂಡುನ ಪ್ರಾಯದೊಟ್ಟಿಗೆ ದೇಹ ಬೆಳ್ತಷ್ಟೇ ಹೊರ್ತ್ ಬುದ್ಧಿ ಮಾತ್ರ ಬೆಳ್ತೇಲೆ!!!

          ನಾರ್ಣಣ್ಣಂಗೂ ಪ್ರಾಯ ಆಕಂಡ್ ಬಾತ್. ಮುನ್ನೂರು ಮುಡಿ ಗದ್ದೆ, ಇಪ್ಪತೈದ್ ಖಂಡಿ ಅಡ್ಕೆ, ಕೆಲ್ಸದವರೆಲ್ಲಾ ನೋಡಿಕಂಬೊದು ಇನ್ನ್ ಇನ್ನ್ ಆಕೇಲೇ. ಈ ಪುಂಡುಗೋ ಗದ್ದೆ ಪುಣಿಲಿ ನಡ್ದ್ ಹೋಗಿಯೇ ಗೊತ್ಲೆ. ಇನ್ನ್ ಬೇಸಾಯ ನೋಡಿಕಂಬೊದೆಲ್ಲಿಂದ??!! ಆಗ ಹೊಳ್ದ ಐಡಿಯಾನೇ ಮಂಙಂಗೆ ಮೊದ್ವೆ ಮಾಡ್ದೂಂತ.. ಹುಚ್ಚು ಬುಡದೆ ಮೊದ್ವೆ ಆಕಿಲೆ.. ಮೊದ್ವೆ ಆಗದೆ ಹುಚ್ಚು ಬುಡಿಕಿಲೆ ಎಂಬಾಂಗೆ!! ಹಂಗಾರ್ ಜವಾಬ್ದಾರಿ ಬಾದೂಂತ ಆಸೆ. ಸುಮಾರ್ ಕಡೆ ಹುಡ್ಕಿ ಕಡೆಗೆ ಚಾಳೆಅಡಿ ಸೇಸಪ್ಪನ ಎರಡ್ನೇ ಮಗ್ಳ್ "ಚಾಮುಣಿ" ನೊಟ್ಟಿಗೆ ನೆಂಟಸ್ತಿಕೆ ಗಟ್ಟಿ ಆತ್. ಸೇಸಪ್ಪನೂ ನಾಕ್ ಹೆಣ್ಣ್ ಮಕ್ಕಳ ಅಪ್ಪ. ಮಗಕ್ಕಳಿಗೆ ಗಂಡ್ ಹುಡ್ಕಿ ಹುಡ್ಕಿ ಸಾಕಾಗಿ 'ಹೆಂಗಿದ್ದರೂ ಆಸ್ತಿ ಬೊದ್ಕ್ ಧಾರಾಳ ಉಟ್ಟೂಂತ' ಒಮ್ಮೆ  ಇದ್ ದಾಟ್ರೆ ಸಾಕ್ ತೇಳಿ ಬೊಯಿದ್ ಮಗ್ಳ ಮೊದ್ವೆಗೆ ಒಪ್ಪ್ ಸಿತ್. ಸುತ್ತ ಹತ್ತೂರ್ ಲೇ ಇಲ್ಲದ ಭಾರೀ ಗೌಜಿನ ಮೊದ್ವೆ. ಹತ್ತ್ ಕುಟುಂಬ ಹದಿನೆಂಟ್ ಗೋತ್ರದ ಬಂಧು ಬಾಂಧವರು ನೆಂಟರಿಷ್ಟರು ಮುಂತಾದ ಸ್ವಜಾತಿ ಗೃಹಸ್ಥರು ಸೇರ್ದಲ್ಲಿಂದ ಕೈಯೆತ್ತಿ ಕನ್ಯಾಧಾರೆ ಹೊಯ್ಸಿ ಚಾಮುಣಿ ಎಂಬ ಸೊಸೆನ ಮನೆ ಸೇರ್ಸಿಕಂಡೊ ನಾರ್ಣಣ್ಣ. ಗೂಡೆ ಸುಮಾರಾಗಿ ಲಾಯಿಕ್ಕೇ ಇದ್ದರೂ, ಅದ್ಕೆ ಅಡಿ ಪೊಡಿನೂ ಒಂಬದ ಹೈದ ಪುಂಡು!! ಆದರೂ ಬಂದವೆಲ್ಲಾ 'ದೊಡ್ದವರ ಮೊದ್ವೆ ಅದೆಲ್ಲಾ ನೋಡಿಕುಟ್ಟಾ'ತ ಸಮಾ ಉಂಡ್ ಮೊದ್ ಮಕ್ಕಳಿಗೆ ನೊಮ್ಸ್ಕಾರ ಹಾಕಿ ಹೋದೊ.

             ದಿನ ಕಳ್ದಾಂಗೆ ಚಾಮುಣಿಗೆ ಪುಂಡುನ ದಿನಚರಿಗಳೆಲ್ಲಾ ಒಂದೊಂದಾಗಿ ಅರ್ಥ ಆಗ್ತುಟ್ಟು. ಬರೇ ಬೇಜವಾಬ್ಧಾರಿ.. ಉದಾಸೀನದ ಮಾರಿ... ಕತ್ತಲೆ ಆದರೆ ಮಲ್ಗಿ ಗೂರೆಳ್ಯಕೇ ಕಾದ್ ಕಂಡಿರ್ದು!! ಹಾಕ್ಯಂಡ ಕಾಚ ಸಮೇತ ಒಗ್ಕಂಬ್ಬಕ್ಕೆ ಗೊತ್ಲೆ!! ಇನ್ನ್ ಬೇರೆ ವಿಷಯಗೆಲ್ಲಾ ಎಲ್ಲಿಂದ.... ಈ ಚಾಮುಣಿನೋ... ಚೂರು ಉಸಾರ್ ನ ಗೂಡೆ. ಪೇಟೆ ಸುತ್ತಿ ಗೊತ್ತಿದ್ದ ಆಳ್. ಮನೆಲೇ ಇರ್ಕೆ ಸರಿ ಆದುಲೆತ ಅತ್ತೆನ ಹೆಡ್ಡ್ ಮಾಡಿ ಟೈಲರಿಂಗ್ ಕ್ಲಾಸ್ಗೆ ಹೋಕೆ ಸುರು ಮಾಡ್ತ್. ಯಾಗೋಳು ಪೇಟೆ ನೋಡಿ ನೋಡಿ ಅದುವೇ ರುಚಿ ಅನ್ಸ್ತುಟ್ಟು. ಚಾಮುಣಿ ಹಳ್ಳಿ ಗೂಡೆ ಆದರೆ ಏನ್.. ಅದ್ಕೂ ಆಸೆ ಇರ್ದುಲೆನಾ? ಹಿಂಗೇ ಪೇಟೆ ಕಡೆ ಹೋಗಿ ಹೋಗಿ... ಬಸ್ಸ್ ನ ಕಂಡೆಕ್ಟರೊಟ್ಟಿಗೆ ಪರಿಚಯ ಆತ್... ಪರಿಚಯ ಸ್ನೇಹನೂ ಆಗಿ ಒಂದಿನ ಅವನೊಟ್ಟಿಗೇ "ಪಣಾಂದೆ ಪದ್ರಡ್!!". ಪುಂಡುನ ಸರಿ ಮಾಡಿಕೆ ಹೋಗಿ ಮನೆ ಮರ್ಯಾದೆನೇ ಕಳ್ಕಂಡತ್ ನಾರ್ಣಣ್ಣ. ಇನ್ನ್ ಪುಂಡುನೋ "ಕೊಣ್ಯಕೆ ಗೊತ್ತಿಲ್ಲದಂವ ನೆಲ ಡೊಂಕುತ ಹೇಳ್ದಾಂಗೆ", ಆ ಚಾಮುಣಿನ ಗುಣನೇ ಸರಿ ಇಲ್ಲೇಂತ ಊರಿಡೀ ಹೇಳಿಕಂಡ್ ಸುತ್ತಿದೆ.  ಅಲ್ಲಿಂದ ಮೇಲೆ ಒಂದ್ ಹೋಗಿ ಇನ್ನೊಂದ್ ಆಗುವ ಕೆಲ್ಸಗಳಿಗೆ  "ಪುಂಡುನ ಗೂಡೆ ಪದ್ರಡ್ ಹಾಕಿದಾಂಗೆ ಆದು ಬೇಡ ಮಾರಾಯ!!" ಎಂಬ ಮಾತ್ ಬೈಲ್ ನ ಜನಗಳ ಬಾಯಿಗೆ ಬಂದುಟು...


ಡಾ. ಪುನೀತ್ ರಾಘವೇಂದ್ರ ಕುಂಟುಕಾಡು

Read More
Main qimg 9d6a18027c6b0f56ced75b52f80cdad6 c

ಕಾಸ್ಟ್ಲಿ ಗೂಡೆ......

02 Dec 2017

         ನನ್ನ ಹೆಸರ್ ಕುಸುಮಾಧರ, ಒಬ್ಬನೇ ಮಂಞ ನೋಡಿ ಹಂಗೆ ಪ್ರೀತಿಲಿ ಕೂಸ ಅಂಥ ಕರೆಯೋದು. ನಾನ್ ಬೆಂಗ್ಳುರ್ ಲಿ ಒಂದು ಸಣ್ಣ ಕಂಪೆನಿಲಿ ಒಳೆ. ಈಗೆಲ್ಲ ಸಿಂಗಲ್  ಆಗಿರಿಕೆ ಬುಟ್ಟವೆನಾ,ಯಾವ ಕಾರ್ಯಕ್ರಮಕೆ  ಹೋದರೂ ಸಾಕ್ ಮದ್ವೆ ಯಾಗ? ,ಪಾಯಸ ಯಾಗ ಹಾಕ್ಸಿಯ? ಅಂಥ ನೆಂಟ್ರ್ ಗಳ ಕಿರಿ ಕಿರಿ. ಅದೂ ಮನೇವು ಬೇರೆ ಒಟ್ಟಿಗೆ ಇದ್ದರೆ ಅವರ ಉಪ್ಪು ಕಾರ ಬೇರೆ. 
                        ಹಿಂಗೇ ಬೆಂಗ್ಳುರ್ ಲಿ ಆರಾಮಾಗಿ ವೀಕೆಂಡ್ ಎಂಜಾಯ್ ಮಾಡ್ತಾ ಇದ್ದ ನಂಗೆ ಮನೆಂದ  ಫೋನ್ ಬಾತ್ ನಾಳೆ ಹೋಗಿ ಒಂದು ಗೂಡೆನ ಮೀಟ್ ಆಗ್, ಫೋಟೋ ಫೋನ್ ನಂಬ್ರ ವಾಟ್ಸಪ್ಪ್ ಲಿ ಕಳ್ಸಿನೆ ಹೇಳಿ, ಹಣ್ಯ್ ಹೊತ್ತಕಾನ ಗೂಡೆ ಹೇಳ್ದವ್ರ ಫೋನ್ ಒಳ್ಳ ಗೂಡೆ ನಿಂಗೆ ಆದ ಗೂಡೆ ಹೋಗು ನಾಳೆ ಅಂಥ , ವಿಧಿ ಇಲ್ಲೆ ಆದು ಅಂಥ ಒಪ್ಪಿಕಂಡೆ.

            ಫೋಟೋ ಬಾತ್ ನೋಡಿಕೆ ಪೊರ್ಲು ಇತ್ತು ಆದರೂ ಈಗೇನ  ಮೊಬೈಲ್ ಆಪ್ಸ್ ಎಲ್ಲ ಗೂಡೆಗಳಿಗೆ ಸಪೋರ್ಟ್ , ಯಾವುದಕ್ಕೂ ಸರಿ ಆಗಿ ನೋಡೋಮ ಅಂಥ ಹೇಳಿ ನನ್ನ ದೋಸ್ತಿಗಳಿಗೆ ಕಾಲ್ ಮಾಡ್ದೆ. ಅವು ಗೂಡೆ ಫಿಕ್ಸ್ ಆದಂಗೆ  ಹೇಳಿ ಪಾರ್ಟಿ ಕೇಳಿಕೆ ರೆಡಿ ಆದ.ನಾನ್ ಹೇಳ್ದೆ ನಾಳೆ ಹೋಗಿ ಮೀಟ್ ಆಕೆ ಉಟ್ಟು ಎಲ್ಲಿ ಮೀಟ್ ಆದು ಅಂಥ ಕೇಳ್ಕನ ಊರ್ಲಿ ಇದ್ದ ಬಾರ್ ಗಳ ಹೆಸ್ರು ಅಡ್ರೆಸ್  ಹೇಳ್ದ, ಇವ್ರ ಸಹವಾಸ ಆಕಿಲೆ ಹೇಳಿ ನಮ್ಮ ಗೂಡೆ ಫ್ರೆಂಡ್ಸ್ ಗೆ ಕೇಳ್ದೆ ,ಅವು ಸ್ವಲ್ಪ ಬೆಟರ್ ಈ ವಿಶ್ಯಲಿ ,ಕಾಫಿ ಡೇ , ಮಾಲ್  ಹೇಳ್ದ , ಇನ್ನು ಫಸ್ಟ್ ಗೆ ಏನ್ ಮೆಸೇಜ್ ಮಾಡ್ಲಿ ಕೇಳೋಕೂ  ಆಕನ ಹೊಸ ನಂಬರ್ ಇಂದ  ಮೆಸೇಜ್ ಬಾತ್ Hi I am ****** time Location ಎಲ್ಲ ಅವ್ಳೇ ಕಳ್ಸಿತ್ . ಖುಸಿನ್ ಆತ್ ಗೂಡೆ ನನ್ನಂದ ಫಾಸ್ಟ್ ಉಟ್ಟು ಅನ್ಸಿತ್.

    ನಾಳೆ ಹೆಂಗೆ ಹೋದು ಬೇರೆ Tension,  ಯಾವ ಡ್ರೆಸ್ ಯಾವ Hair style   ಹಿಂಗೆ ತಲೆಕೆಡಿಸಕಂಡೆ, ಮತ್ತೆ ಗೂಡೆಗಳಿಗೆ ಕೇಳ್ದೆ ಅದಿಕೆ ಅವು ಇದ್ದ ಫೋಟೋ, dress style ಎಲ್ಲ ಕಳ್ಸಿ ಕೊಟ್ಟ.ಆ ಬಣ್ಣ ಈ ಬಣ್ಣ ಅದು ಇದು ಹೇಳಿ complete ಆಗ ನನ್ನ interview ಗೆ ರೆಡಿ ಮಾಡಿದ.ನಂಗೂ ಅನ್ಸಿತ್ ಇದೂ ಒಂದು ತರಾ interview ಅಲ್ಲ.

    ಮಾರನೇ ದಿನ ಹೊರಟೆ ಲಾಯ್ಕ್ ಡ್ರೆಸ್ ಮಾಡಿಕಂಡ್ ಶಾರ್ಪ್ ಟೈಮ್ ಗೆ ಹೋಕು ಅಂತ ಎಷ್ಟೇ ಟ್ರೈ ಮಾಡಿರೂ ಅರ್ಧ ಗಂಟೆ ಹೊತ್ತಾತ್. ಬೆಂಗ್ಳುರ್ ಟ್ರಾಫಿಕ್ ನೀವಿಗೆ ಗೊತ್ತಲ್ಲ. ಅಂತೂ ಎತ್ತಿದೆ. ಹೊರಗೆ ನಾಲ್ಕು ಗೂಡೆಗ ನಿಂತ್ಕಂಡ್ ನನ್ನೇ ನೋಡ್ತಾ ಮೆಲ್ಲ ಮೆಲ್ಲ ನಗಾಡ್ತಾ ಇದ್ದ. ನಾನ್ ಭಯಲಿ ಜಿಪ್ ಹಾಕೋಳ ಅಂತ ಕನ್ಫರ್ಮ್ ಮಾಡಿಕಂಡ್ ಸೀದಾ ಒಳಗೆ ಹೋದೆ ಮೆಲ್ಲ ಒಂದು ಕಾಲ್ ಮಾಡಿ ಅವ್ಳು ಎಲ್ಲಿ ಉಟ್ಟು ಅಂತ ಹುಡುಕಿ ಸೀದಾ ಅವಳ ಮುಂದೆ ಹೋಗಿ ನಿಂತ್ Hi ಹೇಳ್ದೆ ಅವ್ಳು ಹಲೋ ಹೇಳ್ತ್.
ನಾನಂತ್ ಫುಲ್ ನರ್ವಸ್ ಒಂದು 30 ಹಾಕಾಕತ್ ಅನ್ಸಿತ್.

     ನಾನ್ ಏನಾದ್ರು ಆರ್ಡರ್ ಮಾಡಕಾತ್ ಹೇಳ್ದೆ , ಅವ್ಳು 2 ಎಂಥದೋ ಕಾಫಿ ಹೇಳ್ತ್. ನೆಕ್ಸ್ಟ್ ಅವಳ ಪ್ರಶ್ನೆ ನಿನ್ ಬಗ್ಗೆ ಹೇಳು. ನನ್ ಬಗೆ ಎಂಥ ಉಟ್ಟು ಹೇಳಿಕೆ, ನಾನೇನು ಸಾದನೆ ಮಾಡಿದವ ಅಲ್ಲ , ಅಂತೂ  ಇದ್ದ ವಿಷಯ ಎಲ್ಲ ಹೇಳಿ ಬುಟ್ಟೆ. ಅಷ್ಟೊತ್ತಿಗೆ ಒಂದು Phone ಬಾತ್ ನಾನ್ ಮಾತಡಿಕಂಡ್ ಇರ್ ಕನ ಅವಳು ಮೆಲ್ಲ ಅವಳ IPhone ತೆಗ್ತ್. ಅದರ ನೋಡಿ ನನ್ನ ಪಾಟೆ ಫೋನ್ ನ ಮೆಲ್ಲ ಒಳಗೆ ಇಸಿದೆ.  ಇನ್ನು ಅವಳ ಬಗ್ಗೆ ಕೇಳ್ದೆ , ಕೇಳ್ತಾ ಕೇಳ್ತಾ ಕೋಲ್ಡ್ ಕಾಫಿ ಬಿಸಿ ಆತ್.ಏನಿದ್ದರೂ ಬೆಂಗ್ಳುರ್ ಲೈಫ್ 10 ವರ್ಷ ಅಷ್ಟೇ ಆಮೇಲೆ ನಮ್ಮ ಕೃಷಿನೇ  ನಾವುಗೆ ಹೀಂಗಿರ್ಕನ ಇವಳ ಮಾತ್ ಕೇಳಿ ನಮ್ಮ ಅಡಿಕೆ ಕಾಫಿ ರಬ್ಬರ್ ದುಡ್ಡು ಮಾಲ್ ಲಿ  ಕಾಫಿಡೇ ಲಿ ಹಾಳಾದ್ ಕಂಡತ್. ಅರ್ಧ ಗಂಟೇಲಿ ಮಾತ್ ಮುಗ್ದ್ ಬೈ ಹೇಳಿ ಹೊರಟತ್. waiter ಬಂದ್ ಬಿಲ್ ಕೊಟ್ಟತ್, ಅದರ ನೋಡಿ ಶಾಕ್ ಆತ್ 2 ಕಾಫಿ ಗೆ 2000₹ ಕಾಫಿ ಬೆಳೆವ ನಾವಾಗೇ ಚೊಂಬು ಇಸಿತಲ್ಲ ಇಂವ. ಯಾಕಣ್ಣ ಇಸ್ಟ್ ರೇಟ್ ಕೇಳ್ದೆ. ನಿಮ್ಮದ್ 500₹ ಪಕ್ಕದ ಟೇಬಲ್ ದ್ 1500₹ ನಾನ್ ಕೇಳ್ದೆ ಪಕ್ಕದ ಟೇಬಲ್ ನಾನೇಕೆ ಕೊಡೋಕು. ಅದಿಕೆ ಅಂವ ಹೇಳ್ತ್ ಅವು ಅವಳ ಫ್ರೆಂಡ್ಸ್ . ಓಹೋ ಮನೆ ಹಾಳ್ ಫ್ರೆಂಡ್ಸ್ ಅಂತ ಹೇಳಿ ಬ್ಯಾಂಕ್ ನವು ಇಂಥ ಟೈಮ್ ಗಾಗಿ ಕೊಟ್ಟ  Credit Card ನ  ಉಜ್ಜಿದೆ . ಇನ್ನೊಮ್ಮೆ ಬಾಕನ ಕಾಫಿ ಪುಡಿ ನಾನೇ ತನ್ನೆ ಹೇಳಿ ಅವಂಗೆ ಒಂದು ದೊಡ್ಡ ನಮಸ್ಕಾರ ಹಾಕಿದೆ.


       ಹಿಂಗೆ ಎಲ್ಲ ಮುಗ್ಸಿ ರೂಮ್ ಬಾಕನ ನಮ್ಮ ಹೈದಂಗ ಪಾರ್ಟಿ ಗೆ ರೆಡಿ ಮಾಡಿಳ. ಗೂಡೆ ಹೆಂಗೆ ಮದುವೆ ಯಾಗ ತಲೆ ತಿಂಬಕೆ ಸುರು ಮಾಡಿದ. ಗೂಡೆ ತುಂಬಾ ಕಾಸ್ಟ್ಲಿ (costly) ಮಾರಯ ನಾವುಗೆ ಕೂಡಿ ಬಾಕಿಲೆ ಹೇಳಿ ಬುಟ್ಟೆ. ಇನ್ನು ಮನೆವುಕೆ ಎಂಥಾ ಉತ್ತರ ಕೊಡ್ದು ಹೇಳಕನ ಅವಳ Message ಬಾತ್  ಅದರ ನೋಡಿ ಬಾರಿ ಕುಸಿ ಆತ್. ನಾನ್ ಹೆಳಕಾದರ ಅವಳೇ ಹೇಳಿ ಬುಟ್ಟತ್. ಎನೇ ಆಗಲಿ ಗೂಡೆ ಸಕತ್ Fast ಅನಕಂಡ್ ನಾನ್ ಪಾರ್ಟಿ ನ ಗಮ್ಮತ್ ಮಾಡಿದೆ‌‌.

                                           ಕುಡ್ಲದ ಹೈದ...

Read More