*ಅತ್ತೆ ಮನೆ ಬಿರಿಯಾನಿ*
ಸಣ್ಣದಿರಿಕನ ರಜೆ ಬಾತ್ ಹೇಳ್ರೆ ನೆಂಟ್ರ ಮನೆಗೆ ಹೋಕೆ ಒಂದು ವಾರಕ್ಕೆ ಮುಂಚೆನೇ ತಯಾರಿ ನಡೆತ್ತಿತ್. ಕಾಲ ಹೋದಂಗೆ ನೆಂಟ್ರ ಮನೆಗೆ ಹೋದು ಬುಡಿ ನೆಂಟ್ರ ನೆನ್ಸಿಕೂ ಪುರ್ಸೊತ್ತಿಲ್ಲೆ. ಸುಮಾರ್ 7-8 ವರ್ಷ ಆದ ಮೇಲೆ ಅತ್ತೆ ಮನೆಗೆ ಹೋಗುವ ಸುಯೋಗ ಬಾತ್. ಬಾವನು ಕಾಲೇಜ್ ಮುಗ್ಸಿ ಮನೇಲಿ ಇತ್. ಅಂತೂ ನಾ,ತಂಗೇ, ಅಮ್ಮ ಬಾವನಲ್ಲಿಗೆ ಹೋದ ಅಪರೂಪಕ್ಕೆ ನಮ್ಮ ನೋಡಿ ಖುಷಿ ಅತ್. ಕಷ್ಟ-ಸುಖ ಮಾತಾಡಿ ಅದ ಮೇಲೆ ನಾ, ತಂಗೇ, ಬಾವ ಪಟ್ಟಾಂಗ ಹಾಕಿಕೊಂಡು ಕುದ್ದೊ ಅಷ್ಟಾಕನ ಬಾವ ಹೇಳ್ತ್, "ನಾಳೆ ಬಿರಿಯಾನಿ ಮಾಡೂಮು ನೀವ್ ಮಾಡೊಕು ಏನ್ ಮಾಡ್ರೆ ಗೊತ್ಲೇ" ತ ಹೇಳ್ತ್. ಮಾರನೇ ದಿನ ಬಿರಿಯಾನಿ ಮಾಡಿಕೆ ಏನೆಲ್ಲಾ ಬೇಕು ಅದ್ರ ಬರ್ದ್ ಕೊಟ್ಟೊ. ಭಾವ ಅಂಗಡಿಗೆ ಹೋಗಿ ತಕಂಡ್ ಬಾತ್.ಇದ್ರ ಮಾವ ನೋಡಿ ಸೊಸೆಕ ಬಿರಿಯಾನಿ ಮಾಡ್ವೆತ ಭಾರಿ ಖುಷಿಲಿ ಹಕ್ಕಲೆ ಮನೆಯವರ ಪೂರ ಕತ್ತಲೆಗೆ ನಮ್ಮಲ್ಲಿಗೆ ಊಟಕ್ಕೆ ಬರೋಕುತ ಕರ್ದೇ ಬುಟ್ಟೊ. ನಾವ್ ಇಷ್ಟರವರೆಗೆ ಬಿರಿಯಾನಿ ಮಾಡ್ದವ್ ಅಲ್ಲ. ನಂಗೂ ತಂಗೇಗು ಚೂರು ಮಂಡೆ ಬೆಚ್ಚ ಸುರಾತ್. ಆಗ ನಾ ಹೇಳ್ದೆ "ಮೊನ್ನೆ ಚಂದ್ರ ಮಾವನಲ್ಲಿ ಅತ್ತೆ ಬಿರಿಯಾನಿ ಮಾಡಿದ್ದೋ ಭಾರೀ ಲಾಯ್ಕ್ ಆಗಿತ್ ತ, ಅಷ್ಟಾಕನ ತಂಗೇ ಆ ಅತ್ತೆನ ಮಾರ್ಗದರ್ಶನ ತಕನೋಮುತ ರಪ್ಪ ಪೋನ್ ಮಾಡ್ತ್ ಅತ್ತೆ ಪಟ ಪಟತ ಹೇಳ್ದ ಇವ್ಳು ಹ್ಮ್.. ಹ್ಮ್..ತ ತಲೆಯಾಡಿಸಿತ್. ಸರಿ ಇನ್ನೆಂತಕೆ ಕಾಯೋದುತ ನಾವ್ ಇಬ್ಬೊರೆ ಸೇರಿ ಬಿರಿಯಾನಿ ಮಾಡಿಕೆ ಸುರು ಮಾಡ್ಡೋ.
ಅತ್ತೆ ಹೆಳ್ದ್ಂಗೆ ಎಲ್ಲ ಮಾಡಿ ಕುಕ್ಕರ್ ಲಿ ಬೇಯಕೆ ಇಸಿದೊ. ಬಾವ ಆಗಾಗ ಬಂದ್ ಆತ ? ಆತ? ಕೇಳ್ತ್ತಿತ್. ಕಡೆಗೂ ವಿಶಿಲ್ ಆಗಿ ಗ್ಯಾಸ್ ಹೋದ ಮೇಲೆ ಇದ್ದ ದೇವರ ಪೂರ ನೆನ್ಸಿಕಂಡ್ ಪರೀಕ್ಷೆನ ರಿಸಲ್ಟ್ ನೋಡುವಷ್ಟು ಹೆದ್ರಿಕೆಲೇ ಮುಚ್ಚಳ ತೆಗ್ದೂ ನೋಡ್ರೆ ನೀರ್ ಹನೀಸ್ ಜಾಸ್ತಿ ಆಗಿತ್. ಇನ್ ಎಂತ ಮಾಡಿಕಾದ್ಲೆ ಚಣಿಯಕನ ಸರಿ ಆದುತ ಮುಚ್ಚಿ ತೆಗ್ದ್ ಇಸಿದೊ. ಆಗಲೇ ಸುಮಾರ್ 8-30 ಆಗಿತ್ ನೆಂಟ್ರ ಸುದ್ದಿ ಇತ್ಲೇ ಇನ್ ಯಾರ್ ಬಾಕಿಲೆ ನಾವೇಲತ ಸಮಾಧಾನ ಮಾಡಿಕಂಡ. ಅಷ್ಟಾಕನ ಹಕ್ಕಲೆ ಮನೆಯವ್ ಪೂರ ಮರಿ-ಮಕ್ಕಳ ಕರ್ಕಂಡ್ ಬಂದೇ ಬುಟ್ಟೊ. ನಾ ಬಾವನ ಒಳಗೆ ಕರ್ದ್ ಹೇಳ್ದೆ " ಎಂತ ಮಾರಾಯಾ ಈ ಸರ್ತಿ ಮರ್ಯಾದೆ ಹೋದೆನಾತ ?? ". ಅವಹೇಳ್ತ್ ಏನಾಕಿಲೆ ನೀ ಹೆದ್ರ್ ಬೇಡ ಅದ್ರನೆ ಇಕ್ಕೊಮು ಅಂತ. ನೆಂಟ್ರು ಊಟಕ್ಕೆ ಕುದ್ದೋ ಬಾವ ಅವನೇ ಹೋಗಿ ಇಕ್ಕಿತ್ .
ನಾ ಕೋಣೆಲಿ ಹೋಗಿ ಕುದ್ದೆ ಈ ಸಲ ಮರ್ಯಾದಿ ಹೋದೆ ಅಂತ ಅವು ಕೇಳ್ದ ಯಾರ್ ಬಿರಿಯಾನಿ ಮಾಡ್ದ್ ಲಾಯ್ಕ್ ಆವ್ಟ್ ತ. ಆಗ ಚೂರು ನೆಮ್ಮದಿ ಆತ್ ಮರ್ಯಾದೆ ಒಳ್ತ್ ಅಂತ. ಕೊನೆಗೂ ಬಾವ ವಾಟ್ಸಾಪ್ ಸ್ಟೋರಿ ಲಿ, ಫೋಟೋ ಸಮೇತ " cousin's made yummy " ತ ಹಾಕಿನೇ ಬುಟ್ಟತ್ . ✏ತ್ರಯೀ ಪರಮಲೆ.
Comments