Images %2820%29

Aroma of Coorg

Sometimes when you visit a distant place..It's not the place that matters..It's the people you go with that makes it special.. But when you come back home you don't need anyone to bestow that touch of joy in your time and space.. Coorg becomes your companion.. It's like your first crush..sweet, fresh and beautiful forever.. When you come home she embraces you with the fragrance of coffee blossoms..and then there's the aroma of the actual coffee brewing..that gushes in with your childhood memories of coffee, pork, roti, bamboo shoots, mushroom, rain, flying umbrellas, warm fire, blankets, late night power cuts, ghost stories, the trance like dance to the olaga, the thunder, the lightening, monsoon holidays, the festivals, the birds and the green.. 

This is for all those who are far away.. come home..experience the joy of being home..

Comments

Img 20180414 wa0027
Bharath Waw
about 1 year ago
Fb img 1503734840619
Lokesha ಹು
about 1 year ago

Other articles

%28jun 30  2017 02 13 pm%29canon canon eos 750d%283984x2656%29

ಕೊಡಗು - ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಅರಬ್ ಸಂಯುಕ್ತ ಸಂಸ್ಥಾನ ವತಿಯಿಂದ ರಕ್ತದಾನ

03 Jul 2017

ದುಬೈ: ಯು.ಎ.ಇ ಯಲ್ಲಿ ನಡೆಯುತ್ತಿರುವ ರಕ್ತದಾನ ಅಭಿಯಾನದಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಅರಬ್ ಸಂಯುಕ್ತ ಸಂಸ್ಥಾನದ ವತಿಯಿಂದ ವರ್ಷಂಪ್ರತಿ ನಡೆಸಲ್ಪಡುವ ರಕ್ತದಾನ ಶಿಬಿರವು ದುಬೈ ಲತೀಫಾ ಆಸ್ಪತ್ರೆಯಲ್ಲಿ ದಿನಾಂಕ 30 ಜೂನ್ 2017 ಶುಕ್ರವಾರ ಬೆಳಿಗ್ಗೆ ಸಮಯ 10:00 ರಿಂದ ಮಧ್ಯಾಹ್ನ 3:00 ರ ವರಗೆ ನಿರಂತರವಾಗಿ ನೆರವೇರಿತು. ರಮದಾನ್ ಮಾಸದಲ್ಲಿ ಹೆಚ್ಚು ರಕ್ತದ ಅವಶ್ಯಕತೆ ಇರುವುದರಿಂದ ಹೆಚ್ಚು ರಕ್ತದಾನಿಗಳು ಈ ಸಮಾಜ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಜ್ಮಾನ್, ಶಾರ್ಜಾ, ದುಬೈ ಹಾಗೂ ಅಬುಧಾಬಿಯ ಕೊಡಗು-ದಕ್ಷಿಣ ಕನ್ನಡ ಗೌಡ ಸಮುದಾಯದ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಎಪ್ಪತ್ತಕ್ಕೂ ಹೆಚ್ಚಿನ ಜನರು ರಕ್ತದಾನ ಮಾಡಿದರು. ಹತ್ತಕ್ಕೂ ಹೆಚ್ಚಿನ ಜನರು ಪ್ಲೇಟ್ಲೆಟ್ಸ್ (ಕೆಂಪು ರಕ್ತ ಕಣ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಂಶ - ಕಿರುಬಿಲ್ಲೆಗಳು) ದಾನ ಮಾಡಿದರು. 
ಈ ಸಮಾಜ ಸೇವಾ ಕಾರ್ಯಕ್ರಮದಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಸಂಸ್ಥೆ ಅರಬ್ ಸಂಯುಕ್ತ ಸಂಸ್ಥಾನದ ಸ್ಥಾಪಕಾಧ್ಯಕ್ಷರಾದ ಅಶೋಕ ಉಲುವಾರನ, ನಿಕಟ ಪೂರ್ವ ಅಧ್ಯಕ್ಷರಾದ ಗಣೇಶ ಅಚ್ಚಂದಿರ, ಪ್ರಸಕ್ತ ಸಾಲಿನ ಅಧ್ಯಕ್ಷರಾದ ಹರೀಶ್ ಕೋಡಿ, ಉಪಾಧ್ಯಕ್ಷರಾದ ಸುನೀಲ್ ಮೊಟ್ಟೆಮನೆ, ಪ್ರಧಾನಕಾರ್ಯದರ್ಶಿ ಕರ್ಣೇಯನ ಸುನೀಲ್ ಕುಮಾರ್, ಖಜಾಂಚಿ ದಿಲೀಪ್ ಉಲುವಾರು ಉಪಸ್ಥಿತರಿದ್ದರು. ಗೌರವಾನ್ವಿತ ಅತಿಥಿಗಳಾಗಿ ಒಕ್ಕಲಿಗರ ಸಂಘದ ನವೀನ್ ಗೌಡ,ರೀವಾ ಲೇಸರ್ ಬ್ಯೂಟೀ ಮತ್ತು ಸ್ಪಾ ದುಬೈಯ ಡಾಕ್ಟರ್ ನಂದ ಕಿಶೋರ್, ಡಾಕ್ಟರ್ ರಶ್ಮೀ ನಂದ ಕಿಶೋರ್ ಹಾಗೂ ಅಬುಧಾಬಿಯ ಮೆಡಿಕ್ಲೀನಿಕ್ ಆಸ್ಪತ್ರೆಯ ಡಾಕ್ಟರ್ ತ್ರಿಲೋಕ್ ಚಂದ್ರಶೇಖರ್ ಅವರು ಆಗಮಿಸಿ ರಕ್ತದಾನ ಮಾಡಿ ತಮ್ಮ ವೈದ್ಯಕೀಯ ವ್ರತ್ತಿಯ ಔದಾರ್ಯತೆಯನ್ನು ಮೆರೆದರು.
ಕಾರ್ಯಕ್ರಮದ ಮಾಹಿತಿ ಕೇಂದ್ರದಲ್ಲಿ ಸಂಘ ಸಂಸ್ಥೆಯ ಉದಯೋನ್ಮುಖ ಪ್ರತಿಭೆಗಳಾದ ರಾಹುಲ್ ಬಿದ್ದಪ್ಪ ಕರ್ಣೇಯನ, ಆಶಿಷ್ ಕೋಡಿ ಮತ್ತು ಆಯುಷ್ ಕೋಡಿ ಸಹಕರಿಸಿದರೆ ಅವರಿಗೆ ಮೀನ ಹರೀಶ್ ಕೋಡಿ ಹಾಗೂ ಜಗದೀಶ್ ಕುಶಾಲಪ್ಪ ಸಬ್ಬಾಂಡ್ರ ಮಾರ್ಗದರ್ಶನ ಮಾಡಿದರು. ರಕ್ತದಾನ ಶಿಬಿರಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಬೆಳಗಿನ ಉಪಾಹಾರ, ಚಹಾ, ಕಾಫಿ, ಹಣ್ಣು ಹಂಪಲು ಹಾಗೂ ಕಾರ್ಯಕ್ರಮದ ಕೊನೆಯವರೆಗೂ ತಂಪು ಪಾನೀಯದ ವ್ಯವಸ್ಥೆಗೆ ಕುಸುಮಾಧರ ಕೋಡಿ,ಅಶೋಕ್ ಉಲುವಾರನ, ಚಂದ್ರಕಾಂತ್ ಕುದ್ಪಾಜೆ, ಸುರೇಶ್ ಕುಂಪಲ, ಸುಬ್ರಹ್ಮಣ್ಯ ಕದಿಕಡ್ಕ ,ಯತೀಶ್ ಗೌಡ, ದಿಲೀಪ್ ಉಲುವಾರು, ಸಮರ್ಥ್ ಬಂಟ್ವಾಳ ಹಾಗೂ ವಿನೋದ್ ರಾಮಚಂದ್ರ ಅವರು ಪ್ರಾಯೋಜಕರಾಗಿದ್ದರು. ರಕ್ತದಾನ ಮಾಡಲು ಬಯಸುವ ಹಲವರಿಗೆ ರೋಷನ್ ಕಂಪ ಮತ್ತು ಪ್ರವೀಣ್ ಕಲ್ಲಗದ್ದೆ ಅವಕಾಶ ಕಲ್ಪಿಸಿ ಕೊಟ್ಟರು ಹಾಗೂ ಕಾರ್ಯಕ್ರಮದ ಜವಾಬ್ದಾರಿಯನ್ನು ಬಾಲು ಸಾಲಿಯಾನ್ ವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ಛಾಯಾಗ್ರಹಣವನ್ನು ರತೀಶ್ ಬಗ್ಗನ, ಸುರೇಶ್ ಕುಂಪಲ ಮತ್ತು ಚರಣ್ ರಾಮಕಜೆ ವಹಿಸಿದರು.

ವರದಿ: ಯಶ್ ಪುತ್ತೂರು, ಅಬುಧಾಬಿ.

More details: http://gulfkannadiga.com/?p=6627

Read More
Akki pundi

ನಾನೂ ಪುಂಡಿ ಬೇಸಿದೆ!!!

07 Jul 2017

  ಅದ್ಯಾಕೋ ಬೆಂಗ್ಳೂರ್ ಗೆ ಬಂದಮೇಲೆ ಊರುನ ಚಾಯ/ ಹಿಟ್ಟ್ ಗ ಭಯಂಕರತೇಳುವಾಂಗೆ ನೆನ್ಪಾದೆ. ಬೊಡ್ರೊಟ್ಟಿ, ಕಲ್ತಪ್ಪ, ಓಡಿಟ್ಟ್, ಉರ್ಳಿಟ್ಟ್, ನೀರ್ ದೋಸೆ, ಪುಂಡಿ... ಹಿಂಗೆ.. ಬಗೆ ಬಗೆ. ಯಾಗೋಳು ಯೋಗ/ ರಿಸರ್ಚ್ ಲಿ ಮುಳ್ಗಿರುವ ಈ ಸೈಂಟಿಸ್ಟ್ ತಲೆಗೆ 'ನಾನೇ ಒಮ್ಮೆ ಯಾಕೆ ಹಿಟ್ಟ್ ಮಾಡಿ ನೋಡಿಕೆ ಬೊತ್ತ್?' ಅಂತ ಹಂಗೇ ಫ್ಲಾಶ್ ಆತ್. ಆದ್ರೆ ಯಾವುದರಾಂತ ಮಾಡ್ದು. ಬೊಡ್ರೊಟ್ಟಿಗೆ ಕಾವ್ಲಿ ಇಲ್ಲೆ - ನೀರ್ ದೋಸೆ ಹೊಯ್ಯಕೆ ಗೊತ್ಲೆ!! ಕಲ್ತಪ್ಪ ಮಾಡಿಕೆ ಮೇಲೆ ಕೆಳಗೆ ಕಿಚ್ಚಿ ಹಾಕಿರೆ ಹೊಗೆ ನೋಡಿ ಅಪಾರ್ಟ್ಮ್ ಮೆಂಟ್ ನವು ಅಗ್ನಿಶಾಮಕಕ್ಕೆ ಫೋನ್ ಮಾಡ್ರೆ ನಾ ಮತ್ತೆ ಪೋಲೀಸ್ ಸ್ಟೇಶನ್ ಲಿ ಇರಕಾದುತ ನೆನ್ಸಿ ನನ್ನ ಐಡಿಯಾನ 'ಪುಂಡಿ' ಗೆ ತಂದು ನಿಲ್ಸಿದೆ.

  ಶಾಪಿಂಗ್ ಮಾಲ್ ನ ಯಾವುದೋ ಮೂಲೆಲಿ ಬಿದ್ದ್ ಒಟ್ಟಿ ಹೋದ ಇಡ್ಲಿ ಪಾತ್ರೆನ ಹುಡ್ಕಿ ತಂದೆ. ರಿಸರ್ಚ್ ಲಿ ಫಸ್ಟ್ Reference ಅಂದ್ರೆ " ಉಲ್ಲೇಖ" . ಎಲ್ಲಿಂದ? ಕೂಡ್ಲೆ ಪೊಪ್ಪಂಗೆ ಫೋನ್ ಮಾಡ್ದೆ( ಯಾಕೇಂದ್ರೆ ಮನೇಲಿ ಯಾಗೋಳು ಪುಂಡಿ ಮಾಡ್ತಿದ್ದದೇ ಅವು!!!). ಅಕ್ಕಿ ಪದ್ನಿಕೆ ಹಾಕಿ, ಕಡ್ದು, ಕೊದ್ದುಸಿ , ನಾದುಸಿ ಮಾಡಿಕೆ ಕೆಲ್ಸ ಸುಮಾರುಟ್ಟೂಂತ ಕೇಳಿ ಮನ್ಸ್ ಒಮ್ಮೆ ಚುಯಿಂಕ ಆತ್. ಇನ್ನೊಂದು ಉಲ್ಲೇಖ ಇರ್ಲೀಂತ ಅಮ್ಮನ ಕೇಳ್ದೆ. ಸೋ ಸಿಂಪಲ್... ಅಕ್ಕಿ ಹೊಡಿನ ನೀರ್ ಗೆ ಹಾಕಿ ನಾದ್ಸಿರೆ ಇನ್ನೂ ಸುಲಭಾಂತ ಗೊತ್ತಾತ್. ಚೂರ್ ಕಾಯಿ ಹೆರ್ದ್ ಹಾಕಿರೆ ಇನ್ನೂ ರುಚಿ!!!

  ಅಂತೂ ಇಂತೂ ಸಾಕಷ್ಟು Literature Review ಅಂದ್ರೆ ವಿಮರ್ಶೆ ಮಾಡಿ ಅಕ್ಕಿ ಹೊಡಿ ರೆಡಿ ಮಾಡ್ದೆ. ಅಗಾಲದ ತಪಲೆಗೆ ನೀರು, ಎಣ್ಣೆ ಹಾಕಿ ನೀರು ಬಿಸಿ ಆದ ಹಾಂಗೆ ಚೂರು ಚೂರು ಅಕ್ಕಿ ಹೊಡಿ ಹಾಕಿದೆ. ಮೆಲ್ಲ ಮೆಲ್ಲಂಗೆ ಕಲ್ಸಿ ಪುಂಡಿ ಹದಕ್ಕೆ ತಂದೆ. ಒಂದು ಕೈ ನೀರ್ ಪಾಟೆಗೆ ಹಾಕಿಕಂಡ್ ಬಿಸಿ ಬಿಸಿನನೇ ಹೆಂಗೋ ಕಲ್ಸಿ ಇಡ್ಲಿ ಪಾತ್ರೆಲಿ ಇಸಿದೆ. ಒಂದು ಉಂಡೆ ಕೋಳಿಮೊಟ್ಟೆ ನಾಂಗೆ, ಇನ್ನೊಂದು ಕ್ರಿಕೆಟ್ ಬಾಲ್ ನಾಂಗೆ ಆದರೂ ಬೇಯ್ದು ಗ್ಯಾರಂಟೀಂತ ಮುಚ್ಚಳ ಮುಚ್ಚಿ ಗ್ಯಾಸ್ ಸ್ಟವ್ ಹೊತ್ತುಸಿದೆ.

  ಈಗ ನನ್ನ ರಿಸರ್ಚ್ ನ ರಿಸಲ್ಟ್!! 10 ನಿಮಿಷ ಕಳ್ದಾಂಗೆ ಎಲ್ಲಿಂದಲೋ ಏನೋ ಕರ್ಂಚಿದ ವಾಸನೆ. ಹೊರಗೆ ಕಸರಾಶಿಗೆ ಕಿಚ್ಚಿ ಹಾಕ್ಯೊಳೋಂತ ನೆನ್ಸಿದೆ. ಸರೀ 20 ನಿಮಿಷ ಕಳ್ದಾಕನ ಪುಂಡಿ ಬೇತ್. ಸ್ಟವ್ ಆಫ್ ಮಾಡಿ ಇಡ್ಲಿ ಪಾತ್ರ ಮುಚ್ಚಳ ತೆಗ್ದು ನೋಡ್ರೆ.. ಪುಂಡಿ ಕರ್ಂಚಿಟು!! ಕಾರಣ ಪುಂಡಿ ಬೇಯಕೆ ಇಡ್ಲಿ ಪಾತ್ರಕ್ಕೆ ನೀರೇ ಹಾಕಿತ್ಲೆ!!! ಒಟ್ಟಿ ಹೋದ ಇಡ್ಲಿ ಪಾತ್ರೆ ನನ್ನ ರಿಸರ್ಚ್ ನ ನೋಡಿ ಒರುಂಗಿಸಿ ನೆಗಾಡ್ ತಿತ್ತ್!!

-ನಿಮ್ಮ ಹೈದ

Read More
Bali

ವೀಳ್ಯ ಶಾಸ್ತ್ರ

07 Jul 2017

ಗೌಡರ ಮದುವೆಯಲ್ಲಿ ವೀಳ್ಯ ಶಾಸ್ತ್ರಕ್ಕೆ ಬಹಳ ಮಹತ್ವವಿದೆ. ಸಾಮಾನ್ಯವಾಗಿ ಗೌಡರು ಮದುವೆಯ ಸಂದರ್ಭದ ವೀಳ್ಯ ಶಾಸ್ತ್ರ ದಲ್ಲಿ ಹನ್ನೆರಡು ವೀಳ್ಯಹಳನ್ನು ಕಟ್ಟುತ್ತಾರೆ.
ಅವುಗಳೆಂದರೆ
೧. ಚೌಕದ ವೀಳ್ಯ
೨. ದೇವರ ವೀಳ್ಯ
೩. ಗುರು ವೀಳ್ಯ
೪. ದಶಮಾಗಣೆ ವೀಳ್ಯ
೫. ಗೌಡ ವೀಳ್ಯ
೬.ಮಾವನ ವೀಳ್ಯ
೭.ತಾಯಿ ತಂದೆ ವೀಳ್ಯ
೮. ತೆರವು ಮರವಿನ ವೀಳ್ಯ
೯. ಅಚ್ಚಕಟ್ಟು ವೀಳ್ಯ
೧೦.ಬಣ್ಣ ಬಂಗಾರದ ವೀಳ್ಯ

ಉಳಿದಂತೆ ಹೆಣ್ಣು ನಿಶ್ಚಯದ ವೀಳ್ಯ ಮತ್ತು ಲಗ್ನದ ವೀಳ್ಯವನ್ನು ಹೆಣ್ಣು ನಿಶ್ಚಿತಾರ್ಥದ ಸಂದರ್ಭದಲ್ಲಿ ನಡೆಸುತ್ತಾರೆ. ಈ ಎಲ್ಲಾ ವೀಳ್ಯಗಳಲ್ಲಿಯೂ ಸಾಮಾನ್ಯವಾಗಿ ಐದು ಕವಳಿಗೆ ಎಲೆ ಮತ್ತು ಐದು ಅಡಿಕೆಗಳಿರುತ್ತದೆ.

ಮೂಲ:ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿ

Read More
Img 20170902 195252

ಮೊದಲ ನೋಟ

02 Sep 2017

ನಾನು ನಿನ್ನ ನೋಡಿದ್ದು ಬರೀ ಎರಡು ನಿಮಿಷ

ನನ್ನ ಕಣ್ಣುಗಳಿಗೆ ಅದು ಏನೋ ಹರುಷ||

 

               ಆ ನಿನ್ನ ಕೇಶ ರಾಶಿ

              ನೋಡಲು ಏನೋ ಖುಷಿ||

 

ನನ್ನ ನೋಡಿ ಮೂಡಿದ ಆ ಮುಗುಳುನಗು

ಒಂದು ಕ್ಷಣ ನಾನದೆ ಪುಟ್ಟ ಮಗು||

 

          ನೀನು ತಿರುಗಿ ನೋಡಿ ಮಾಡಿದ ಆ ಕಣ್ ಸನ್ನೆ

          ನನಗೆ ಅರ್ಥವಾಗದೇ ಹೋಯಿತು ಅದು ಸೊನ್ನೆ||

 

ಈಗ ನನಗಿರುವುದು ಬರೀ ನಿನ್ನ ನೆನಪು

ಆ ನೆನಪಲ್ಲೇ ಕಾಣುತ್ತಿರುವೆ, ನೀ ಸಿಗುವ ಕನಸು||

Read More
Img 20170729 wa0027

ಕೊಡಗಿನ ಗೌಡ ಜನಾಂಗದ ಸಾಂಸ್ಕೃತಿಕ ಪರಂಪರೆ ಮತ್ತು ವೈಶಿಷ್ಟ್ಯಗಳು

29 Jul 2017

Read the article to know more about your roots 

Read More