Ganesh visarjan 650 091316051521

Jana Marulo? Jaatre marulo?

Here I lie on my bed, recollecting on how, one peaceful Sunday I’ve nearly spent. Then! as though I’ve jinxed my own thought process, I hear, “ aaj blue hai pani pani” on full bass on the streets of my house. This followed by more such similar songs, ”Moore mooru peg-ige” , “yare neenu roja hoove”, “puchiku”, “color color”, along with DJ and trance music at mind numbing decibels.

 

I run out to see what all the jangle is about, to witness a crowd of (? tripping) youth, dancing for drum beats by a desi band who were following them. The band music had amazing dance notes I agree. As I wonder what the occasion is, I see a towering record deck on a tractor that was emanating those songs in super bass move past my house. It still doesn’t click to me what the occasion is, because in my head i’ m done with Vinayaka Chaturthi 2 days back. What made me realize it was Ganapathi visarjan was the Ganesha idol on another tractor behind the record deck with hardly any people on that vehicle.

 

I’m sure anybody viewing the procession from the opposite end will see any of the Ganesha idol behind all the accessories for visarjan.

 

Whatever happened to the old cultural traditional concept of ganapathi visarjan I wonder exasperated, after it took the whole procession 20 mins to cover the street. Where is the sanctity in the ritual? What on earth were they dancing for? Was there even a single song that was devotional? Why so much noise pollution?

 

I haven’t yet mulled on my own questions, and here comes another procession with the same state of affairs. Now, my only thought, why do so many people have to install Ganesha idols in every nook and corner of the neighborhood? Can’t we have one single Ganesha installed and do visarjan meaningfully?

Comments

Img 20170710 175025
vikram Yes ur point is legit. But please go through the history of Ganesh utsav, Bal Gangadharnath Tilak who started these public gathering and procession to gather people to fight against British. The time has been changed but its still difficult to gather a like minded people in one place. But Ganesh utsav making this possible by gathering all guys from all section of society. The beauty of our religion is we can troll,criticize or we can yell at anything. It might hurt or not no one cares. That's the freedom we got from our religion. When comes to DJ and hard beats its always cheerfulness and freedom we got in front of the god. In our place even girls steps for beat. And its not easy to conduct a procession it requires money manpower and good leaders too. Jai Ganesha....
almost 2 years ago
Fb img 1503734840619
Lokesha ಅಂದ್ ಹುಟ್ಟಿದ ಗಣಪ ಇಂದ್ ಹಂಗಿಲ್ಲೆ, ಕಾಲ ಬದಲಾವುಟು, ಜನ ಬದಲಾಗೊಳೊ, ಗಣಪತಿ ಇಂದ್ ಇನ್ನೊಂದ್ ಧರ್ಮನ ಬೈಯೊಕೆ ವೇದಿಕೆಯಾವುಟು ಕಾರಣ. ಜನಮರುಳೊ ಜಾತ್ರೆ ಮರುಳೊ.........
almost 2 years ago
Download 20170910 005809
PUJITH KURUNJI The day isn't far when Ganesh Chaturthi will be celebrated in Sun Burn and it will be a blessed DJ festival :P
almost 2 years ago

Other articles

Images %289%29

ಅಮ್ಮಾ...

09 Dec 2017

ಪ್ರೀತಿ ಪೋರ್ಲುನ ಅಕ್ಷಯ ನಿಧಿ...  

ನಿಂಗೆ ಕೋಟಿ ಕೋಟಿ ವಂದನೆ

ಓ ಸ್ನೇಹದ ಪ್ರೇಮ ರೂಪವೆ 

ನಿಂಗೆ ಕೋಟಿ ಕೋಟಿವಂದನೆ........

 

    ಇರ್ಳ್ , ಹೊತಾರೆ  ಇಡಿ ಅತ್ತರು,  ಕಿರ್ಚಿರೂ

    ಎದೆ ಹಾಲ್ನ ಬಾಯ್ಗೆ ಕೊಟ್ಟ್  

    ನನ್ನ ಹಠಕ್ಕೆಲ್ಲ  ತಲೆಬಾಗಿ  ನಿತ್ತ್

    ಅಳ್ಕಾಕನ ಕೋಳಿ , ಹಕ್ಕಿ, ಮರಗಳ್ನ ತೋರ್ಸಿ

     ಬೆಳ್ಸಿತ್ ನನ್ನ ಅಮ್ಮ.....

 

ತೆವಳಿ ಹರಿಯ್ಕನ  ಕೈ ಬೆರಳ್  ಕೊಟ್ಟ್

ತೊದ್ಲು ಮಾತಾಡ್ಕನ  ತಿದ್ದಿ ಹೇಳಿ...

ಬಾನಂಗಳಲಿ ನಿತ್ತ್ ಆಕಾಶ ತೋರ್ಸಿ...

ಕೈ ತುತ್ತು ಕೊಟ್ಟ್ ಹಸಿವ್ ನೀಗ್ಸಿ

ಬೆಳ್ಸಿತ್ ನನ್ನ ಅಮ್ಮ....

 

    ನಿನ್ನ ಇಷ್ಟ , ಕಷ್ಟನ ಬದಿಗೀಟ್ಟ್ 

    ನನ್ನ ಸಂತೋಷಲಿ , ನೀ ನಗೆನ ಕಂಡ್

    ಗೆಲುವಿಗೆ ಸ್ಪೂರ್ತಿಯಾತ್ ಈ ಅಮ್ಮ...

     ಬದ್ಕ್ ಗೆ ದಾರೀ ದೀಪ ಈ ಅಮ್ಮ...

 

ನಿನ್ನ ಎಷ್ಟ್ ಹೊಗಳಿರು ಸಾಕಾಕಿಲೇ

0೯ ತಿಂಗ ಹೊತ್ತು  ಹೆತ್ತ್  ಸಾಕಿದ  

ಈ ಜೀವದ ಒಡತಿ ನೀ ಅಮ್ಮ

ನಿಂಗೆ ಕೋಟಿ ಕೋಟಿ ವಂದನೆ......

Read More
Mqdefault

ತುಳುನಾಡಿನ ಮಾರ್ನೆಮಿ

21 Sep 2017

ಪಿಲಿ, ಕೊರಗೆ, ಕರಡಿ, ಸಿಂಹ ನಲಿತೋಂತಲ್ಲಗೆ, 

ಪುರಿ ಬಾಲೆ, ಜೆತ್ತಿ ಅಜ್ಜೆರ್ ಲಕ್ಕುತ್ ನಡತ್ತೆರ್ಗೆ,

ಊರುಗೂರೇ ಲಕ್ಕಂಡ್ ದೂಳು, ಚೆಂಡೆತ ಗದ್ದಾವುಗೂ

ಬತ್ತಂಡ್ ಮಾರ್ನೆಮಿ ನಡತ್ತೊಂದು, ನಲಿತೊಂದು.....

 

ತುಳುನಾಡಿನಲ್ಲಿ ನವರಾತ್ರಿ, ದಸರಾಕ್ಕಿಂತ ಚಿರಪರಿಚಿತವಾಗಿ ಮಾರ್ನೆಮಿಯೆಂಬ ಹೆಸರಿನಿಂದ ದುರ್ಗೆಯರನ್ನು ಪೂಜಿಸಲಾಗುತ್ತದೆ. ಮಾರ್ನೆಮಿ ಅಂದ ಕೂಡಲೇ ಈ ಭಾಗದ ಅಬಾಲರಿಂದ ವೃದ್ಧ ಜನರ ಮೈ ಪುಳಕಗೊಳ್ಳುತ್ತದೆ ಮನ ಆರಳುತ್ತದೆ. 9ದಿನಗಳ ಕಾಲ ಭರಪೂರ ಮನರಂಜನೆ. ದೇವರು, ಪ್ರಾಣಿ, ಜನಾಂಗಗಳಿಗೆ ವೇಷದ ಮೂಲಕ ಅರ್ವಿಭಾವಗೊಳಿಸಿ ಆ ತೆರದಲ್ಲಿ ನಟನೆ, ಹಾಸ್ಯ, ಮಾತಿನ ರಂಗು ನೀಡಿ ದುರ್ಗೆಯರ ಅರಾಧನೆ ಶುರುವಿಡುತ್ತದೆ, ದಕ್ಷಿಣದ ಜಿಲ್ಲೆಗಳ ಪ್ರಸಿದ್ಧ ದೇವಾಲಯಗಳಾದ ಮಂಗಳಾದೇವಿ, ಕಟೀಲು, ಬಪ್ಪನಾಡು, ಮಂದಾರ್ತಿ, ಕೊಲ್ಲೂರು, ಬೆಳ್ಳಾರೆಯ ಜಲದುರ್ಗೆ, ಭಗವತಿ ಹೀಗೆ ಹಲವಾರು ಹಳ್ಳಿಗೊಂದರಂತೆ, ಸೀಮೆಗೊಂದರಂತೆ ದುರ್ಗೆಯರ ದೇವಾಲಯಗಳು ಕಂಡುಬರುತ್ತದೆ, ಈ ದಿನಗಳಲ್ಲಿ ಮನೆ ಮನೆಗಳಲ್ಲಿ ಪೂಜೆ ನಡೆಯದಿದ್ದರೂ ದೇವಿಯ ಅರಾಧನೆ ಮಾಡುವ ಮನೆಗಳಲ್ಲಿ, ಸಿರಿ ದರ್ಶನವಿರುವ ಮನೆಗಳಲ್ಲಿ ಮಾರ್ನೆಮಿಯ ವಿಶೇಷ ಪೂಜೆ ನಡೆಸುತ್ತಾರೆ. ತುಳುನಾಡಿನ ಯಕ್ಷಗಾನ ಪ್ರಸಂಗಗಳಲ್ಲಿ ದುರ್ಗೆಯರ ಲೀಲೆಗಳನ್ನು ಮನೋಜ್ಞವಾಗಿ ವರ್ಣಿಸುತ್ತಾರೆ ಹಲವಾರು ಕ್ಷೇತ್ರ ಮಹಾತ್ಮೆಗಳು ದೇವಿಯರ ಮಹಿಮೆಯನ್ನು ಕಣ್ಣಿಗೆ ಕಟ್ಟಿಕೊ

                                                            

ಇಲ್ಲಿ ನವರಾತ್ರಿ ದಿನಗಳಲ್ಲಿ ದೇವರ ಹರಕೆ ರೂಪದಲ್ಲಿ ವೇಷs ಧರಿಸುವುದು ಸಾಮಾನ್ಯ ಇದು ಒಂದು ಪವಿತ್ರ ಕಾರ್ಯವೆಂದು 1ದಿನ, 3ದಿನ, 5 ದಿನ, 7 ದಿನ ವೇಷ ಧರಿಸಿ ಸೇವೆ ಮಾಡುವ ಹರಕೆ ಹೇಳಿಕೊಂಡು ವೇಷ ಧರಿಸಿ ಬೀದಿಗಿಳಿಯುತ್ತಾರೆ ಜನರ ಮನ ರಂಜಿಸುತ್ತಾರೆ ವೇಷ ಕಟ್ಟುವ ಮೊದಲು ಸ್ಥಳೀಯ ಗ್ರಾಮ ದೇವಾಸ್ಥಾನಕ್ಕೆ ಹೋಗಿ ವೃತ, ಶಾಸ್ತ್ರ ನಿಯಮ ಪಾಲಿಸಿ ವೇಷ ಕಟ್ಟಿ ಮನೆ ಮನೆಗೆ ತೆರಳಿ ಅದರ ಪಾವಿತ್ರ್ಯ ಕಾಪಾಡಿಕೊಂಡು ಮತ್ತೆ ವೇಷ ಕಳಚಿ ದೈವ-ದೇವರುಗಳಿಗೆ ಕಾಣಿಕೆಯನ್ನು ಹರಕೆ ರೂಪದಲ್ಲಿ ಹಾಕಿ ಧಾರ್ಮಿಕತೆಯ ಗಟ್ಟಿತನ, ಆಚರಣೆಯ ಭದ್ರತೆ, ಭಕ್ತಿಯ ಬದ್ಧತೆಯ 

 

ಪ್ರಮುಖವಾಗಿ ಕೊರಗ, ಹುಲಿ, ಸಿಂಹ, ಕರಡಿ, ಕೆಲಸ ಬಿಂಬಿಸುವ ವೇಷ, ಬೇಟೆಗಾರ ಇತ್ಯಾದಿ.... ದುಷ್ಟರ ಸಂಹಾರಕ್ಕೆ ಬಹುರೂಪಗಳ ತಳೆದು ಧರೆಗಿಳಿದ ದುರ್ಗೆಯರಂತೆ ಈ ನಾಡಿಗೆ ಬಂದ ಮಾರಿಯನ್ನು, ದುಷ್ಟಶಕ್ತಿಗಳನ್ನು ಬಹುವೇಷಗಳ ಅದುಮಿದ ಶಕ್ತಿಗೆ ಹೆದರಿ ತೊಲಗಲಿ ಎಂಬುವುದೆ ಮುಖ್ಯ ಉ

 

 ಹೌದು ಮಕ್ಕಳು ಹುಲಿ ಬಂದರೆ ಅದರ ಹಿಂದೆ ಒಂದಷ್ಟು ಹೆಜ್ಜೆ ನಡೆದು ಪಿಲಿನಲಿಕೆಯನ್ನು ಹೆದರಿಕೆಯಿಂದಲೆ ನೋಡುವುದು, ಮತ್ತೆ ದುಡ್ಡು ತೆಗೆದುಕೊಳ್ಳುವಾಗ ಪಿಲಿ ಮಂಡೆ ತೆಗೆದು ನಿಜ ಸ್ವರೂಪ ನೋಡಿ " ಉಂದು ನಮನ ಸುಂದರೆ" (ಇದು ನಮ್ಮ ಸುಂದರ) ಯಾವಗಲೂ ನೋಡುವ ಮುಖ ಪರಿಚಯವಾದಾಗ ಹೆದರಿಕೆ ಘಟ್ಟ ಹತ್ತಿರುತ್ತದೆ.

 

 

 ಮತ್ತೆ ಕರಡಿ ಬ್ಯಾಂಡ್ ಸದ್ದು ಕೇಳಿದಾಗ ಮನೆಯೊಳಗೆ ಓಡಿ ಏಣಿಯ ಕೆಳಗೆ ಕುಳಿತುಕೊಳ್ಳುವುದು. ಮನೆಯಲ್ಲಿ ಸಿಕ್ಕಾಪಟ್ಟೆ ಹಠ ಮಾಡುವ ಮಕ್ಕಳು, ಸುಮ್ಮನೆ ಅಳುವ ಮಕ್ಕಳಿಗೆ ಈ ಮಾರ್ನೆಮಿ ರಜೆಯಲ್ಲಿ ವಿಶ್ರಾಂತಿ ಕಾರಣ ಜೋರು ಅತ್ತಾರೆ ಕೊರಗನಿಗೆ ಹಿಡಿದು ಕೊಡುತ್ತೆನೆಂದು ಮನೆಯ ಹಿರಿಯರು ಗದರಿಸುವುದು ಸಾಮಾನ್ಯ. ಕೊರಗನೆಂದರೆ ಸುಮಾರು ಹರೆಯದ ಮಕ್ಕಳವರೆಗೂ ಭಯ ಆ ಕಪ್ಪು ಮಸಿಯಿಂದ ಬಳಿದ ದೇಹ, ತಲೆಗೊಂದು ಮುಟ್ಟಾಲೆ, ಕಿವಿಯಲ್ಲೊಂದು ಅಲ್ಲಾಡುವ ಚಕ್ಕುಲಿ, ಕುತ್ತಿಗೆಯಲ್ಲಿ ಹೂವಿನ ಮಾಲೆ, ಕೈಗೆ ಕಡಗ, ಸೊಂಟಕ್ಕೊಂದು ಹಳೆಯ ಛತ್ರಿಯ ತುಂಡು, ಕಾಲಿಗೆ ಕಿಣಿ ಕಿಣಿ ಗೆಜ್ಜೆ, ಬೆನ್ನಲ್ಲೊಂದು ಜೋಲಿಗೆ, ಕೈಯಲ್ಲಿ ಉಪ್ಪಳಿಂಗೆ ಕೋಲು ಮನೆಯ ನಾಯಿಗಳನ್ನು ಹೆದರಿಸಲು ಈ ರೂಪ ಕಂಡಾಗ ಅಳುವ ಮಗು ಮೆಲ್ಲಗೆ ಅಜ್ಜಿ ಕೊಂಡಾಟದ ಜಕ್ಕೆಲಿನಲ್ಲಿ ಕೂತು ಕೊರಗನ ಕೊಳಲಿನ ಧ್ವನಿಗೆ ಕಿವಿಯಾಗುತ್ತದೆ ಮತ್ತೆ ಕೊರಗ ಹೊರಡುವಾಗ ಹೆದರಿಕೆ ತೆಗೆಯಲು ಮುಂಡಕ್ಕೆ ಕರಿ ಬೊಟ್ಟು ಹಾಕಿ, ಮನೆಯವರೊಂದಿಗೆ ಹರಟಿ, ತಾಂಬೂಲ ತಿಂದು ಎದ್ದಾಗ ಮೆಲ್ಲಗೆ ಮಗು ತಲೆ ಎತ್ತುವುದು ಇವೆಲ್ಲ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ದೃಶ್ಯ. ಇಂದು ಕೊರಗನಂತಹ ಮನಮೋಹಕ ಹಲವಾರು ವೇಷಗಳು ಇಲ್ಲದಂತಾಗಿವೆ, ವೇಷಗಳ ಕೀಟಲೆ, ಕಿರುಚಾಟ ಅಧುನಿಕವಾಗುತ್ತಿದೆ. ಪಾವಿತ್ರ್ಯ ಉಳಿಸಿ ವೇಷ ಧರಿಸುತ್ತಿದ್ದ ಹಿರಿಯರು ಇಲ್ಲವಾಗಿದ್ದಾರೆ. ವರ್ಷದ ವೇಷ ಬಾರದಿದ್ದರೆ ಮಾರ್ನೆಮಿಗೆ ಸಾರ್ಥಕವಲ್ಲ ಯೆಂಬ ಭಾವನೆ ಮೂಡುತ್ತದೆ. ಧಾರ್ಮಿಕತೆ, ನಂಬಿಕೆ, ಮಣ್ಣಿನ ಪರಿಮಳ ಪಸರಿಸುವ ಇಂತಹ ಆಚರಣೆ ಒಂದಷ್ಟು ಅಧುನಿಕತೆಯ ರಂಗು ಪಡೆದು ಸಾಗುತಿರುವುದು ಸಂತಸದ ವಿಚಾರ. ಸರ್ವರಿಗೂ ಮಾರ್ನೆಮಿಯ ಶುಭಾಶಯಗಳು.

Read More
458245 429995 exams cheating

ಚೀಟಿ ಪುರಾಣ...!!!

18 Sep 2017

        ಹೌದು ಶಾಲೆಯೆಂದರೆ ಅಲ್ಲಿ ಮದುವೆಗೆ ಬಣ್ಣದ ಕಾಗದದ ತೋರಣ ಕಟ್ಟಿದಂತೆ ಸಾಲು ಸಾಲು ಪರೀಕ್ಷೆಗಳು,ಕಿರು ಪರೀಕ್ಷೆ, ಮಧ್ಯ ವಾರ್ಷಿಕ, ವಾರ್ಷಿಕ, ಸೆಮಿಸ್ಟರ್, ಮರುಪರೀಕ್ಷೆ, ಸಿದ್ದತಾ ಪರೀಕ್ಷೆ , ಗಣಿತದ ಸಾಧನೆಗಳು, ರಾಸಾಯನ ಶಾಸ್ತ್ರದ ಸೂತ್ರಗಳು, ಜೀವ ಶಾಸ್ತ್ರದ ವೈಜ್ಞಾನಿಕ ಹೆಸರುಗಳು, ವಾರದಲ್ಲೊಂದು ಪರೀಕ್ಷೆ, ಒಂದು ಪಾಠ ಅದ ಮೇಲೊಂದು ಪರೀಕ್ಷೆ ಅದು, ಇದು ಒಂದೇ , ಎರಡೇ ,..  ಒಂದು ತರಗತಿಯಲ್ಲಿ ಕನಿಷ್ಠ 6 ಪಠ್ಯಗಳು, 8 ಪರೀಕ್ಷೆಗಳೆಂದು ಗುಣಿಸಿದ್ರೂ ಡಿಗ್ರಿ ಮುಗಿಯುವ ಹಂತಕ್ಕೆ 800 ಪರೀಕ್ಷೆಗಳನ್ನು ಗಡದ್ದಾಗಿ ಬರೆದಿರುತ್ತೇವೆ. ಇನ್ನೂ ಪೊಡಿ, ಪೊಡಿ ಪರೀಕ್ಷೆಗಳನ್ನು ಸಂಕಲನ ಮಾಡಿದರೆ 1400 ಗಡಿ ದಾಟಬಹುದು. ಇಷ್ಟೊಂದು ಪರೀಕ್ಷೆಗಳಿಗೆ ತಯಾರಿ ಹೇಗಿರಬೇಡ ಹ್ಹಹ್ಹಹ್ಹ ಅಷ್ಟೊಂದು ಕಕ್ಕುಬೇಕಾದರೆ ಎಷ್ಟು ತಿನ್ನಬೇಡ !!! 

           ಮನೆಯಲ್ಲಿ ಅಮ್ಮನ ಕಣ್ಣು ಕಟ್ಟಲು, ಪುಸ್ತಕ ಬಿಡಿಸಿ ಓದಿದಂತೆ ನಟಿಸಿ, ಮತ್ತೆ ಪರೀಕ್ಷೆಗೆ ತಯಾರಿ ನಡೆಸುವ ಪರಿಯೋ ಬ್ರಹ್ಮನಿಗೆ ಪ್ರೀತಿ, ಹೌದು ಅದೆಷ್ಟು ಚೀಟಿಗಳು, ಪೆನ್ಸಿಲ್ ಕೆತ್ತನೆಗಳು, ಗೋಡೆ ಬರಹ, ಅಂಗಿ ಅಕ್ಷರಗಳು, ಡೆಸ್ಕು ಸಾಹಿತ್ಯ, ಮಣಿಗಂಟು ಲೇಖನ, ಹಲವು ಬಗೆ , ಯಾರು ತರಗತಿಯಲ್ಲಿ ಓದುತ್ತಾನೆಯೋ ಅವನ ತಲೆಗೆ ದಂಡ ಪಾವತಿಸಿ  ಇಪಾರ್ಟಂಟ್ ಕ್ವೇಶನ್ ಕೇಳಿ ಗೆರೆ ಹಾಕಿಯೋ, ಅಲ್ಲಿ ಇಲ್ಲಿ ಬರೆದೋ, ಯುದ್ಧಕ್ಕೆ ಶಸ್ತ್ರಾಭ್ಯಾಸಕ್ಕೆ ಸಿದ್ಧ ಅಂಗೈ ಅಗಲದ ಸಾಮಾನು ಚೀಟಿ ಎತ್ತಿ ಭೂತಕನ್ನಡಿಯಿಟ್ಟು ನೋಡುವಸಷ್ಟು ಪುಟ್ಟ ಅಕ್ಷರಗಳಾದರೂ ಸ್ಪುಟ, ಸ್ಪಷ್ಟತೆಯಿಂದ ಎದ್ದು ಕಾಣುವಂತೆ ಬರೆದು ಸೋಲ್ಡಿ (ಲಕ್ಕಿಡಿಪ್ ಡ್ರಾ) ಹಾಕುವಂತೆ ಮಡಚಿ, ಉದ್ದ ತೋಳಿನ ಅಂಗಿಯ ಕೈಯಲ್ಲೋ, ಬೆಲ್ಟ್ ನ ಸೆರೆಯಲ್ಲೋ, ಡೆಸ್ಕಿನ ಎಡೆಯಲ್ಲೋ, ಕಿಟಕಿಯ ಮೂಲೆಯಲ್ಲೋ, ಪೆನ್ನಿನೊಳಗೋ, ಕಂಪಾಸ್ ಡಬ್ಬದೊಳಗೋ, ಲಾಗ್ ಪುಸ್ತಕದ ಮಧ್ಯದಲ್ಲೋ, ಖಾಸಗಿ ಜಾಗಗಳಲ್ಲೋ ಸುಲಭವಾಗಿ ಸಿಗುವಂತಹ, ಸುರಕ್ಷಾ ಸ್ಥಳಗಳಲ್ಲಿ ಇಟ್ಟು ಸಿದ್ಧಗೊಳ್ಳುವ ಪರಿಯೇ ಅಬ್ಬಾಬ್ಬಾ ಸೈನಿಕರನ್ನು ಮಿರಿಸುವ ಕರಾಮತ್ತು , ಚೀಟಿ ಬರೆದು ಸಿದ್ಧಪಡಿಸಿದರೆ ಸಾಕೇ... ಪರಿಕ್ಷೇಯಲ್ಲಿ ಬರುವ ಅಪರಿಚಿತ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲಾ ಅದಕ್ಕೂ ಪಂಚವಾರ್ಷಿಕ ಯೋಜನೆಯಂತೆ, ಯಾವ ಪಾಠಕ್ಕೆ ಯಾವ ಚೀಟಿಯೆಂದು ಸಾಲು ಸಾಲು ಕ್ರಮಸಂಖ್ಯೆಗಳು, ಯಾವ ಪ್ರಶ್ನೆಗೆ ಯಾವ ಉತ್ತರ.

        ಇನ್ನೂ ಚೀಟಿ ಬಿಡಿಸಿ ನೋಡುವ ಕ್ರಮವೋ ವರ್ಣಿಸ ಹೊರಟರೆ ಪುಟಗಳು ಸಾಲದು..!! ನಮ್ಮ ಮನೆಬಿರುಕು ಮಾಡುವ ಧಾರಾವಾಹಿಯ ಸೊಸೆ, ಅತ್ತೆಯನ್ನು ಬಾಗಿಲ ಸಣ್ಣ ಸಂದಿನಿಂದ ನೋಡುವಂತೆ, ಕಣ್ಣಿನ ರೆಪ್ಪೆಗಳಿಗೆ ಕೋನ ನೀಡಿ, ಪಂಚೇಂದ್ರಿಯಗಳು ಸೈನಿಕನಂತೆ ಸೆಟೆದು ನಿಂತು ಜತನದಿಂದ ಶಿಕ್ಷಕರ ಧ್ವನಿ, ಶಿಕ್ಷಕಿಯ ಕಾಜಿಯ ಸಂಗೀತ, ಹೊಸ ಮದುವೆಯಾದ ಟೀಚರಿನ ಕಾಲಿನ ಗೆಜ್ಜೆನಾದ, ತಲೆಗೆ ಮೂಡಿದ ಹೂವಿನ ಪರಿಮಳ, ನಿದ್ದೆ ಮಾಡಿದಂತೆ ನಟಿಸುವ ಮಾಸ್ತ್ರರ ದೃಷ್ಠಿ, ಅಲ್ಲಾಡುವ ನೆರಳು,   ಗಾಳಿಯ ಒತ್ತಡವೆಲ್ಲವನ್ನು ಗ್ರಹಿಸಿಕೊಂಡು  ಕಾಪಾಡಿಕೊಳ್ಳಬೇಕು. ಮೊದಲ ದಿನದ ಪರೀಕ್ಷೆಯಲ್ಲಿ ಮೊಹರು ಹಾಕಿದ ಉತ್ತರಪತ್ರಿಕೆಯನ್ನು ತೆಗೆದುಕೊಂಡು ಪುಟ ತುಂಬಾ ಬರೆದು ಮರುದಿನದ ಪರೀಕ್ಷೆಯಲ್ಲಿ ಹಗ್ಗ ಕಟ್ಟುವುದು ಇದೆ, ಮತ್ತೆ ಪ್ರಶ್ನೆ ಪತ್ರಿಕೆಯ ಕೆಳಗೆ, ಕಾಂಪಾಸು ಡಬ್ಬದ ಒಳಗೆ, ಕ್ಯಾಲ್ಕುಲೇಟರ್ ನ ಮೇಲೆ, ಆಡಿಕೋಲುಗಳ ಅಡಿ ಭಾಗ, ಲಂಗದ ನಡುವೆ, ಹಳೆಯ ಪ್ರಶ್ನೆ ಪತ್ರಿಕೆಗಳಲ್ಲೇ ಇನ್ನೂ ಹಲವಾರು....ಇಷ್ಟು ಮಾಡಿ ಪರೀಕ್ಷೆಯಲ್ಲಿ ಅದೇ ಪ್ರಶ್ನೆ ಬಂದು ಬರೆದೆ ಅಂದ್ರೆ ಅಮ್ಮನ ಮೊದಲ ಪ್ರಸವದಷ್ಟು ಖುಷಿ... 


             ಬರೀ ನಾವೇ ಬರೆದರಾಯಿತೆ !! ದಾನಶೂರರಲ್ಲವೇ, ನಾವು ಬರೆಯುವುದ್ದಕ್ಕೂ ಸೈ ಮತ್ತೊಬ್ಬರನ್ನು ಪ್ರೋತ್ಸಾಹಿಸಲು ಜೈ ಯೆಂಬಂತೆ ಈ ಚೀಟಿಗಳನ್ನು ವರ್ಗಾಹಿಸುವುದೋ ಅದೊಂದು ಕಷ್ಟದ ಸನ್ನಿವೇಷ "ನನಗೆ ಬರೆದಾಗಲಿಲ್ಲ ಅವನದು ಕಿರಿಕಿರಿ" ಸಿಟ್ಟೋ ಸಿಟ್ಟು ಅದರು ಗೆಳೆಯನಲ್ಲವೇ ಕೊಡಬೇಕಲ್ವಾ !!  ನಾಳೆ ಅವನೇ ಬೇಕಲ್ಲಾ .. ಅದಕ್ಕಾಗಿ ಕಣ್ಸನ್ನೆಗಳೆನು?, ಪೆನ್ನಿನ ಕಡೆಯಲ್ಲಿ ಕುಟ್ಟುವುದೇನು?, ಕಾಲು ಗುದ್ದುವುದೇನು?, ಕೈ  ಮೇಲೆತ್ತುವುದೇನು?, ರಬ್ಬರ್ ಗೆ ಕಟ್ಟಿ ಬಿಸಾಡುವುದೇನು? ಮತ್ತೆ ಅಪರೂಪಕ್ಕೆ ಮಾಸ್ಟ್ರು ನೋಡಿದರೆಂದರೆ ಮೆಲ್ಲಗೆ ಕಿಟಕಿಯಿಂದ ಹಾರಿಸುವುದೇನು, ಚಡ್ಡಿಯೊಳಗೆ ಹಾಕುವುದೇನು, ಕುಪ್ಪಸದೊಳಗೆ ತುರುಕಿಸುವುದೇನು, ಕಾಲುಚೀಲದೊಳಗೆ ನುಗ್ಗಿಸುವುದೇನು. ಬಾಯಲ್ಲಿ ಹಾಕಿ ಜಗಿಯುವುದೇನು? ಅಬ್ಬಾ ನಗೋದು ಬೇಡ.. ಓದುತಿರುವ ನೀವು ಅಪ್ಪ ಅಮ್ಮನಾಗಿದ್ದರೆ  ಮಗನಿಗೋ, ಮಗಳಿಗೋ ಹೇಳಿ ಕೊಡಿ ಅವರು ಕಲಿಯಲಿ, ಶಾಲೆ- ಕಾಲೇಜಿಗೆ ಹೋಗುವವರಾಗಿದ್ದರೆ ಒಮ್ಮೆ ಪ್ರಯತ್ನಿಸಿ ನೋಡಿ ಒಳ್ಳೆ ಫಲಿತಾಂಶ ಬರಬಹುದು.... ಸಮಾಜಕ್ಕೆ , ನೌಕರಿಗೆ, ಬೇಕಾಗಿರೊದು ನೀವು ಗಳಿಸಿದ ಅಂಕ, ಹೇಗೆ ಗಳಿಸಿದನೆ/ಳೆಂಬುವುದು ಮುಖ್ಯ ಅಲ್ಲ ಅಲ್ಲವೇ...ಶುಭವಾಗಲಿ

-- ಭರತೇಶ ಅಲಸಂಡೆಮಜಲು 

Read More
Atte sose

ದ್ಯಾವಂಮಕ್ಕನ ಸೊಸೆ....

05 Feb 2018

ಓಟೆಕಜೆ ದೊಡ್ಡಮನೆಗೆ ನಮ್ಮ ದ್ಯಾವಂಮಕ್ಕ ಸೊಸೆ ಆಗಿ ಬಾಕನ ಅವ್ಕಿನ್ನೂ ಪ್ರಾಯ 16 ನಡಿತಿತ್ತಷ್ಟೇ. ಕಟ್ಟಪುಣಿ ತ್ಯಾಂಪಣ್ಣನ 6 ಮಕ್ಕಳ್ಲಿ ಸುರುನಂವೇ ದೇವಮ್ಮ...ಊರವ್ಕೆಲ್ಲಾ "ದ್ಯಾವಂಮ್ಮ"!! ಆಗಲೇ ಪ್ರಾಯ 40ಕ್ಕೆ ಹಕ್ಕಲೆ ಎತ್ತಿದ್ದ ಓಟೆಕಜೆ ಭೋಜಪ್ಪನ ಮೊದ್ವೆ ಆಕೆ ಏನೇನೂ ಮನ್ಸಿಲ್ಲದ್ದಿದ್ದರೂ ಅವಳ್ಂದ ಮತ್ತೆ ಹುಟ್ಟಿದ 4 ತಂಗೆಕಳ ಮೋರೆ ನೋಡಿ, ಒಟ್ಟಿಗೆ ತ್ಯಾಂಪಣ್ಣನ ಬಡ್ತನನ ಕಂಡ್ ಗಟ್ಟಿ ಮನ್ಸ್ ಲಿ ಓಟೆಕಜೆ ಸೇರ್ದೊ. ಮೊದ್ವೆ ಆಗಿ ಎರ್ಡ್ ವರ್ಷಕ್ಕೆ ಹುಟ್ಟಿದವಂನೇ  ಮನೋಜ್. ಹುಟ್ಟಿದ 6 ತಿಂಗಳಿಗೇ ಅವಂನ ದೆಸೆನೋ ಅಲ್ಲಾ ಭೋಜಪ್ಪಣ್ಣನ ಆಯಸ್ಸೇ ಅಷ್ಟಿದ್ದದೋ ಗೊತ್ಲೆ... ದೊಡ್ಡ ಹಳ್ಳಕ್ಕೆ ಮೀನ್ ಕಡ್ಯಕೆ ಹೋದವ್ ಕಯಲಿ ಕಂತಿ ಸ್ವರ್ಗ ಸೇರ್ದೊ. ಇದ್ದ ಒಬ್ಬನೇ ಮಂಙನ 'ಬೆಸೆಗೆಲಿಸಿರೆ ಮೊಸಿ ಹಿಡಿದು, ನೆಲಲಿ ಬುಟ್ರೆ ಕೇರ್ದ ಸೆಗ್ಣಿ ಅಂಟುದು'ತೇಃಳುವಾಂಗೆ ಅಯ್ಯೆ ಅಪ್ಪ ಎರ್ಡೂ ಆಗಿ ಸಾಂಕಿದೊ ದ್ಯಾವಂಮಕ್ಕ. ಓದುದರ್ಲೂ ಉಶಾರಿದ್ದ ಮನೋಜ ಇಂಜಿನಿಯರೂ ಆತ್. ಕೆಲ್ಸ?? ನಮ್ಮ ಎಲ್ಲಾ ಹೈದ, ಗೂಡೆಗಳಾಂಗೆ ಬೆಂಗ್ಳೂರ್ಗೆ ಎತ್ತದೆ ಕೃಷಿ, ಮನೆಕಡೆ ನೋಡಿಕಂಡಿತ್ತ್. ಅತ್ತೆಗೊಂದು ಕಾಲ ಸೊಸೆಗೊಂದು ಕಾಲದಾಂಗೆ ನಮ್ಮ ದ್ಯಾವಂಮಕ್ಕಂಗೂ ನಾನೂ ಅತ್ತೆ ಆಗಿ ಮೆರೆಯೊಕೂಂತ ಆಸೆ ಚಿಗುರ್ತುಟ್ಟು. ಸುರಾತ್... ಮಂಙಂಗೆ ಹೆಣ್ಣ್ ಹುಡ್ಕಿಕೆ!!!
                                  
                  ನಾಕ್ ಕಡೆ ವಿಚಾರ್ಸಿ ಹಳೇ ನೆಂಟ್ರ್ ಗಡಿಕಲ್ಲ್ ಶೇಷಪ್ಪರ ಮಗ್ಳೊಂದಿಗೆ ಕುರುಂಜಿಯವ್ರ ಹಾಲ್ ಲಿ ಭರ್ಜರಿಯಾಗಿ ಮೊದ್ವೆನೂ ಕಳ್ತ್. ತೆಳ್ಳಂಗೆ, ಬೆಳ್ಳಂಗೆ ತೊಳ್ದ ಮೊಟ್ಟೆನಾಂಗಿರುವ ಗೂಡೆ ಓದಿದ್ ಫುಲ್ ಚರ್ಚ್ ಶಾಲೆಲೇ. ಅದೇನೋ ಗೂಡೆ ಮನೆ ಕಡೆ ಇದ್ದವೂ, ಆರಾಮಲಿ ಇರಕ್ ಅಂತ ನೆನ್ಸಿ ಒಪ್ಪಿತ್ತ್. ಆದರೆ ಅತ್ತೆ ಬುಡೊಕಲ್ಲ?? ಕೆಲ್ಸ ಮಾಡ್ದಷ್ಟೂ ಮುಗ್ಯಕಿಲ್ಲೆ.... ದ್ಯಾವಂಮಕ್ಕಂಗೆ ಅದ್ ಮಾಡ್ದ್ ಸಮಾಧಾನನೂ ಆಕಿಲೆ... ಆಚೆ ಮನೆ ಸುನಂದಕ್ಕನೊಟ್ಟಿಗೆ ಬಾಯಿ ಬುಟ್ಟ್ ಹೇಳ್ದೊ ಕೂಡ.."ಅಲ್ಲಯಾ.... ಬಟ್ಟೆ ಒಗ್ದ್ ಹರ್ಗಿ ಹಾಕಿಕೂ ಗೊತ್ಲೆ.. ನೇಕೆಲಿ ಒಣ್ಂಗಿಲ್ ಬೊಳ್ಳಿಕಾರ್ ಮೀನ್ ನೇಲ್ಸಿದಾಂಗಿದ್ದದೆ. ಅದ್ಕೆ ಗೆಣ್ಸ್ ಬೇಸಿಕೂ ಗೊತ್ಲೆ. ಇನ್ನೆಲ್ಲಿಂದ ಹಿಟ್ಟ್ ಮಾಡ್ದು. ಕಲ್ತಪ್ಪ ನಾಯಿ ನಾಲಿಕೆನಾಂಗಾಗಿತ್ತ್. ಗುಡ್ಸಿರೆ ಮೂಲೆ ಮೂಲೆಲಿ ಕಾಡ್ ಹಂಗೇ ಹಾರಿಕಂಡಿದ್ದದೆ!! ಎಂಥ ಮಾಡ್ದು... ಮೇಲೆ ನೋಡಿ ಉಗ್ದರೆ ನಮ್ಮ ಮೋರೆಗೇ ರೆಟ್ಟುದೂಂತ ಸುಮ್ಮನೆ ಒಳೆ.. ಅಷ್ಟೇ." ಆದರೂ  ಸೊಸೆ ದೀಪಿಕಾ ಸಮಾಧಾನದ ಗೂಡೆ. ಅತ್ತೆನ ಪಿರಿಪಿರಿ ಕಂಡರೂ ಕಾಣದಾಂಗೆ ಸುಮ್ಮನೆ ಇರ್ತಿತ್ತ್. ಎಷ್ಟಾದರೂ ಹಿರಿಯವ್.. ಇದಲ್ಲನಾ "ಜೆನರೇಶನ್ ಗ್ಯಾಪ್".


                   ದಿನ ಕಳ್ದಾಂಗೆ ದೀಪಿಕಾಂಗೆ ಮನೆಲೇ ಇರ್ದು ಭಂಗ ಆಗ್ತುಟ್ಟು. ಓದಿದ ಗೂಡೆ. ಸಮಾಜದ ಪರಿಚಯ ಇರುವವ್ಳ್. ಅದ್ಕೇ ನೆರೆಕರೆನ ಹೆಣ್ಣ್ ಮಕ್ಕಳ ಸೇರ್ಸಿಕಂಡ್ "ಬಫೆ" ಮಾಡುವ ಕಾರ್ಯ ಸುರುಮಾಡಿಟು. ಇದರ್ದಾಂಗಿ ನಾಕ್ ಜನರ ಪರ್ಚಯದೊಟ್ಟಿಗೆ ಆ ಬಡಹೆಣ್ಣ್ ಮಕ್ಕಳಿಗೆ ಜೀವನಕ್ಕೂ ಸಹಾಯ ಆತ್. ಆದರೆ ದ್ಯಾವಂಮಕ್ಕ? ಅವರ ಚಾಳಿ ಇನ್ನೂ ಬುಟ್ಟೋತ್ಲೆ. ದೀಪಿಕಾನೂ ಮಹಿಳಾ ಮಂಡಲ, ಸ್ತ್ರೀ ಶಕ್ತೀಂತ ಸುಮಾರ್ ಕಡೆ ಸೇರಿಕಂಡ್ ಸರಕಾರಂದ ಸಿಗುವ "ವಿಶೇಷ ವ್ಯಕ್ತಿ" ಪುರಸ್ಕಾರಕ್ಕೆ ಆಯ್ಕೆ ಆತ್. ಆದಿನ ಸಮಾರಂಭಕ್ಕೆ ಮನ್ಸಿಲ್ಲದ ಮನ್ಸ್ಂದ ಹೊರ್ಟೋ ದ್ಯಾವಂಮಕ್ಕ. ಸೇರ್ದ ಸಭೆಲಿ ದೀಪಿಕಾನ ಅಭಿಪ್ರಾಯ ತಿಳ್ಸಿಕೆ ವೇದಿಕೆಗೆ ಕರ್ದೊ. ಅವ್ಳ್ ಹೇಳ್ದ ಮಾತ್ ಗಳ ಕೇಳಿ ದ್ಯಾವಂಮಕ್ಕನ ತಲೆಗೆ ಮರ ಬಿದ್ದಂಗಾತ್. "ನನ್ನ ಸಾಧನೆಗೆ ಸ್ಪೂರ್ತಿ ನನ್ನತ್ತೆ ದೇವಮ್ಮ. ಸಣ್ಣದರ್ಲಿ ಗಂಡನ ಕಳ್ಕಂಡರೂ ಜೀವನ ಕಳ್ಕಂಡತ್ಲೆ. ಹೆಣ್ಣೊಂದು ಗಂಡಾಗಿ ಮಂಙನ ಬೆಳ್ಸಿದೊ. ಅಷ್ಟ್ ಮಾತ್ರ ಅಲ್ಲ... ಅಷ್ಟ್ ಕಲ್ತ ಮಂಙನ ಬೆಂಗ್ಳೂರ್, ಹೊರದೇಶಕ್ಕೆ ಬೆರ್ಸದೆ ಒಬ್ಬ ಉತ್ತಮ ಕೃಷಿಕ ಆಗಿ ಮಾಡ್ದೊ. ಈಕೆನೇ ನಿಜವಾದ ತಾಯಿ. ಅದ್ಕೇ ಹೇಳ್ದು 'ಹೆಣ್ಣು ಸಮಾಜದ ಕಣ್ಣು'. ನಾ ಇಂಥವರ ಸೊಸೇಂತೇಃಳಿಕೆ ಹೆಮ್ಮೆ ಆದೆ." ಇತ್ತ ದ್ಯಾವಂಮಕ್ಕ ಕೊನೆಗೂ ಗುಡ್ಸಿಟ್ಟ ಕುಂಟುಮಾಯಿಪುನೇ ಗತೀಂತ, ನಾಚಿಕೆ ಆದರೂ ತೋರ್ಸಿಕಣದೆ ಸೊಸೆನ ಹೊಗ್ಳಿಕಂಡ್ ಮನೆ ಕಡೆ ಹೊರ್ಟೊ.
(Arebhashe Article of Gowdas)

-ಡಾ.ಪುನೀತ್ ರಾಘವೇಂದ್ರ ಕುಂಟುಕಾಡು

Read More
Img 20171008 100724 048

ನಾ ನಿಂಗಾಗಿ........

08 Oct 2017

ನನ್ನಾಸೆನ ಗುಲಾಬಿ ಹೂ ನೀತೇಳೀ 

ನನ್ನದೆನ ನಿಂಗಾಗಿ ಮೀಸಲಿಟ್ಟೆ......

 

ನೀ ನನ್ನ ಮನ್ಸ್ ನ  ಕನ್ಸ್ ನ  

ಉಯ್ಯಾಲೆನ , ಸಂತೆಲಿ ಅಡವಿಟ್ಟೆ.....

 

ಅಂದರೂ ನೀ ಬರ್ವ ದಾರಿಲಿ 

ಪೋರ್ಲುಲಿ ಅರಳ್ದ  ಹೂವಾಗೀ ನೆಲಕುರುಳಿ ಬುಟ್ಟೆ...

 

ಗೊತ್ತಿದ್ದೋ ಗೋತ್ತಿಲ್ಲದೆನೋ ನಾ ನಿನ್ನ ಪ್ರೀತೀಲಿ 

ಕನ್ಸ್ ನ ಮಂಟಪನ ಕಟ್ಟಿಬುಟ್ಟೆ.......

 

ಎಷ್ಟೋಂದು ಆಸೆ ಇಟ್ಟ್ , ಮನ್ಸ್ ನ 

ಸದ್ದಿಲ್ಲದೆನೆ ಬೀಸ್ವ ಗಾಳಿಲಿ ತೇಲಿಬುಟ್ಟೆ....

 

ತೇಲಿಬುಟ್ಟರೂ , ಸರೀತೇಳಿ  ನಾ ನಿಂಗಾಗಿ

ಈ  ಜೀವನಲಿ ನಿನ್ನ ನೆನ್ಪುಲಿ ಕಳಿಯಕೆ ಕುದ್ದುಬುಟ್ಟೆ.....

Read More