ಕೊಡಗಿನ ಹಲವೆಡೆ ಮುಂಗಾರು ಚುರುಕು.. 

ಕೊಡಗಿನ ಹಲವೆಡೆ ಮುಂಗಾರು ಚುರುಕು. ರೈತಾಪಿ ವರ್ಗದಲ್ಲಿ ಮೂಡಿದ ಮಂದಹಾಸ. ಬಿರುಸಾದ ಕೃಷಿ ಕಾರ್ಯ. ನದಿ, ತೊರೆಗಳಲಿ ಏರಿದ ನೀರಿನ ಮಟ್ಟ.

Other News

Family Insights Campaign!

Family page has been upgraded by few new features. We kindly request you all to send relevant information about your family to our email id contact@kdkgowdas.com or whatsapp it to 8971239792. Please visit to Kumbalacheri, kuntukadu, Kudekallu family as a refference.

Informations required:

  1. Ainmane/Taravadu image.
  2. Family info like alternative names, age etc.
  3. Family description: a brief note about family
  4. Bali/Gothra
  5. Family population
  6. Kutumbada yajamana's name
  7. Ainmane/Tharavadu Location
  8. Ainmane/Tharavadu Address
  9. Rituals and programs held at Ainmane/Tharavadu
  10. Stories : if any achievements or major contribution to the society
  11. Info collectors name
  12. Relevant photos if any

Please support this campaign and make it successful

ನಾಡ ಹಬ್ಬ ದಸರಾ ಬಹುಭಾಷಾ ಕವಿಗೋಷ್ಠಿ

ನಾಡ ಹಬ್ಬ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಮಡಿಕೇರಿ
ಪ್ರಕಟಣೆಯ ಕೃಪೆಗಾಗಿ,
ಮಡಿಕೇರಿ ನಾಡ ಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಬಹುಭಾಷಾ ಕವಿಗೋಷ್ಠಿಯನ್ನು ಈ ಬಾರಿಯೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಕವನಗಳನ್ನು ಆಹ್ವಾನಿಸಲಾಗಿದೆ. 
ಕನ್ನಡ, ಕೊಡವ, ಅರೆಭಾಷೆ, ತುಳು, ಬ್ಯಾರಿ, ಕೊಂಕಣಿ, ಆಂಗ್ಲ, ಹಿಂದಿ ಸೇರಿದಂತೆ ಬಹುಭಾಷೆಯ ಸ್ವರಚಿತ ಕವನಗಳನ್ನು ಸೆಪ್ಟಂಬರ್ ೮ರೊಳಗಾಗಿ ಕಳುಹಿಸುವಂತೆ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ತಿಳಿಸಿದ್ದಾರೆ. 
ಸ್ವರಚಿತ ಕವನಗಳನ್ನು ಸ್ಪಷ್ಟವಾಗಿ ಬರೆದಿರಬೇಕು ಇಲ್ಲವೇ ಡಿಟಿಪಿ ಮಾಡಿರಬೇಕು. ಕವನ ನಾಲ್ಕು ಪ್ಯಾರಾಗಳಿಗೆ ಮೀರಿರಬಾರದು. ಇವು ಎಲ್ಲಿಯೂ ಪ್ರಕಟವಾಗಿರಬಾರದು ಹಾಗೂ ಎಲ್ಲಿಯೂ ವಾಚನ ಮಾಡಿರಬಾರದು. ತಾವು ರಚಿಸಿದ ಕವನದ ಕೆಳಗೆ ಸಹಿಯೊಂದಿಗೆ ವಿಳಾಸ, ದೂರವಾಣಿ ಸಂಖ್ಯೆಯನ್ನು ಬರೆದಿರಬೇಕು. ಜಾತಿ, ಧರ್ಮ ಸೇರಿದಂತೆ ಪ್ರಚೋದನೆ ಅಥವಾ ಸಮಾಜಕ್ಕೆ ತಪ್ಪು ಸಂದೇಶ ನೀಡುವ ರೀತಿಯಲ್ಲಿ ಕವನ ಇರಬಾರದು.
ಇಂತಹ ಕವನಗಳನ್ನು ಸೆಪ್ಟಂಬರ್ ೮ ರೊಳಗೆ ‘ಐತಿಚಂಡ ರಮೇಶ್ ಉತ್ತಪ್ಪ, ಅಧ್ಯಕ್ಷರು, ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಕ್ಯಾರಾಫ್ ಪತ್ರಿಕಾ ಭವನ, ರೇಸ್‌ಕೋರ್ಸ್ ರೋಡ್, ಮಡಿಕೇರಿ’ ಈ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ. ಅಂತಿಮ ದಿನಾಂಕದ ನಂತರ ಬಂದವುಗಳನ್ನು ಹಾಗೂ ಬಹುಭಾಷಾ ಕವಿಗೋಷ್ಠಿಯ ನೀತಿಗೆ ವಿರುದ್ಧವಾಗಿರುವ ಕವನಗಳನ್ನು ಪರಿಗಣಿಸುವುದಿಲ್ಲ. ಆಯಾಯ ಭಾಷೆಯಲ್ಲಿ ಬಂದ ಕವನಗಳು ಸಂಖ್ಯೆ, ಅವುಗಳ ಗುಣಮಟ್ಟ, ಹೊಸಬರಿಗೆ ಆದ್ಯತೆ ಸೇರಿದಂತೆ ಹಲವು ಮಾನದಂಡಗಳಲ್ಲಿ ಆಯ್ಕೆಯಾದವುಗಳನ್ನು ಕವಿಗಳಿಗೆ ನಂತರ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ತಮ್ಮ ವಿಶ್ವಾಸಿ
ಐತಿಚಂಡ ರಮೇಶ್ ಉತ್ತಪ್ಪ, ಮಡಿಕೇರಿ

ಕೊಡಗು ಗೌಡ ವಿದ್ಯಾ ಸಂಘ ಪ್ರತಿಭಾ ಪುರಸ್ಕಾರ

ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯು ಎಸ್.ಎಸ್.ಎಲ್.ಸಿ ಯಲ್ಲಿ ಗ್ರಾಮೀಣ 85% ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗು ನಗರದ 90% ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪಿ.ಯು.ಸಿ ಮತ್ತು ಪದವಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ಮತ್ತು ಸಿ.ಇ.ಟಿ ಮತ್ತು ಎನ್.ಇ.ಇ.ಟಿ ಯಲ್ಲಿ 1000 ರಾಂಕ್ ಒಳಗೆ ಪಡೆದುಕೊಂಡಿರುವ ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ವೇತನ ನೀಡಲಾಗುವುದು. ವಿವರಗಳಿಗೆ ಕೆಳಗಿನ ನೋಟೀಸ್ ನೋಡಿ..

YuvaTaranga - 2017

ಕರ್ನಾಟಕ ಅರೆಬಾಷೆ ಅಕಾಡೆಮಿ 2016-17 ಪ್ರಶಸ್ತಿ ಪ್ರಕಟ