KDK Gowda Samaja UAE - Kail Mahurtha - 2017

Other News

ಚೆರಿಯಮನೆ ಕಪ್ - 2018

Youth Mela - YuvaTaranga - 2017

YuvaTaranga - Kodagu & Dakshina Kannada Gowda Samaja Bangalore - 29th Oct 2017

 

ದೀಪಾವಳಿ ಹಬ್ಬದ ಪ್ರಯುಕ್ತ ಹಗ್ಗಜಗ್ಗಾಟ ಪಂದ್ಯಾಟ

ನಾಳೆಯಿಂದ ಪೈಕೆರ ಕಪ್‌ ಕ್ರಿಕೆಟ್‌ ಜಂಬರ

210 ತಂಡಗಳಿಂದ ಸೆಣಸಾಟ: ಮೇ 7 ರಂದು ಫೈನಲ್ಸ್‌

ಹಲವು ವಿಶೇಷತೆಗಳೊಂದಿಗೆ ಕೊಡಗು ಗೌಡ ಕುಟುಂಬಗಳ ನಡುವಿನ ಕ್ರಿಕೆಟ್‌ ಪಂದ್ಯಾವಳಿ ''ಪೈಕೇರ ಕಪ್‌-2017'' ಏ.21ರಂದು ಆರಂಭವಾಗಲಿದ್ದು, 210 ತಂಡಗಳು ಸ್ಪರ್ಧಿಸಲಿವೆ.

ಕಳೆದ ವರ್ಷ ನಡೆದ ಕುಟ್ಟನ ಕಪ್‌ನಲ್ಲಿ 180 ತಂಡಗಳು ಭಾಗವಹಿಸಿದ್ದವು. ಈ ಬಾರಿ ಪೈಕೆರ ಕಪ್‌ ಈ ದಾಖಲೆಯನ್ನು ಮುರಿದಿದೆ. ನಗರದ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ಈ ಕ್ರೀಡಾಂಗಣದಲ್ಲಿ 2 ಮೈದಾನ ಸಿದ್ಧಪಡಿಸಲಾಗುತ್ತಿದೆ. ಬುಧವಾರ ಬೆಳಗ್ಗೆ ಈ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಕೊಡಗು ಗೌಡ ಯುವ ವೇದಿಕೆಯ ಆಶ್ರಯದಲ್ಲಿ ಕೊಡಗು ಗೌಡ ಕುಟುಂಬಗಳ ನಡುವೆ ಕ್ರಿಕೆಟ್‌ ಪಂದ್ಯ ನಡೆಯಲಿದೆ. ಈ ಬಾರಿ ಹಲವು ವಿಶೇಷತೆಗಳನ್ನು ಪಂದ್ಯಾವಳಿ ಒಳಗೊಂಡಿದ್ದು, ಪೈಕೇರ ಕುಟುಂಬದವರು ಯುವ ವೇದಿಕೆಯ ಪದಾಧಿಕಾರಿಗಳೊಂದಿಗೆ ಪಂದ್ಯಾವಳಿ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.

ಏ.21ರಂದು ಬೆಳಗ್ಗೆ ನಗರದ ಓಂಕಾರೇಶ್ವರ ದೇವಸ್ಥಾನದಲ್ಲಿ ಕ್ರೀಡಾ ಜ್ಯೋತಿ ಬೆಳಗಿ, ನಂತರ ಗುಡ್ಡಮನೆ ಅಪ್ಪಯ್ಯ ಪ್ರತಿಮೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದವರೆಗೆ ಕೊಂಡೊಯ್ಯಲಾಗುವುದು. ಈ ಸಂದರ್ಭ ರಾಷ್ಟ್ರೀಯ, ಅಂತಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ ಗೌಡ ಜನಾಂಗದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಏ. 21ರಿಂದಲೇ ಎರಡೂ ಮೈದಾನಗಳಲ್ಲಿ ಪಂದ್ಯಾವಳಿ ಆರಂಭವಾಗಲಿದೆ. ಒಟ್ಟು ನಾಲ್ಕು ಸುತ್ತಿನಲ್ಲಿ ಪಂದ್ಯ ನಡೆಯಲಿದೆ. ಮೇ 5ರಂದು ಫ್ರೀ ಕ್ವಾರ್ಟರ್‌ ಪಂದ್ಯ ಹಾಗೂ 2 ಕ್ವಾರ್ಟರ್‌ ಪಂದ್ಯ ನಡೆಯಲಿದೆ. ಮೇ 6 ರಂದು 2 ಕ್ವಾರ್ಟರ್‌ ಫೈನಲ್ಸ್‌ ಹಾಗೂ ಸೆಮಿಫೈನಲ್ಸ್‌ ನಡೆಯಲಿದೆ. ಮೇ 7ರಂದು ಬೆಳಗ್ಗೆ 10.30ಕ್ಕೆ ಅಂತಿಮ ಹಣಾಹಣಿ ನಡೆಯಲಿದೆ. ಬಳಿಕ ಸಮಾರೋಪ ಕಾರ್ಯಕ್ರಮ, ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ಕ್ರಿಕೆಟ್‌ ಪಂದ್ಯಾವಳಿಗೆ ಸುಮಾರು 74 ಲಕ್ಷ ರೂ. ವೆಚ್ಚವಾಗುವ ಅಂದಾಜು ಮಾಡಲಾಗಿದೆ.

ಪೈಕೆರ ಕುಟುಂಬ ರೆಡಿ: ಕೊಡಗು ಗೌಡ ಯುವ ವೇದಿಕೆ ಪ್ರತಿವರ್ಷ ಯಾವುದಾದರೊಂದು ಕುಟುಂಬದ ಸಹಯೋಗದಲ್ಲಿ ಕ್ರಿಕೆಟ್‌ ಪಂದ್ಯಾಟ ನಡೆಸುತ್ತದೆ. ಈ ಬಾರಿ ಮಡಿಕೇರಿ ತಾಲೂಕು ಬಿಳಿಗೇರಿಯ ಮೂಲವನ್ನು ಹೊಂದಿರುವ ಪೈಕೆರ ಕುಟುಂಬ ಕೈಜೋಡಿಸಿದೆ. ಪೈಕರೆ ಕುಟುಂಬದಲ್ಲಿ ಸುಮಾರು 16 ಮನೆಗಳಿದ್ದು, 68 ರಿಂದ 70 ಸದಸ್ಯರಿದ್ದಾರೆ. ಈ ಕುಟುಂಬದ ಸದಸ್ಯರು ಪಾಲಿಬೆಟ್ಟ ಹಾಗೂ ಗೋಣಿಕೊಪ್ಪಲು ಸೇರಿದಂತೆ ಕೊಡಗಿನ ಹಲವು ಭಾಗಗಳಲ್ಲಿ ನೆಲೆಸಿದ್ದಾರೆ.

ಲಿಂಗರಾಜೇಂದ್ರ ಒಡೆಯನ ಕಾಲದಲ್ಲಿ ಅಂದರೆ ಸುಮಾರು 1,815ರಲ್ಲಿ ಪೈಕೆರ ಕುಟುಂಬದ ಮೂಲ ಪುರುಷ ಕರಿಯಣ್ಣ ಗೌಡ ಜಿಲ್ಲೆಗೆ ಆಗಮಿಸಿ ಬಿಳಿಗೇರಿಯಲ್ಲಿ ನೆಲೆಸಿದರು. ಬಳಿಕ ಮುದ್ದಯ್ಯ, ಜೋಯಪ್ಪ, ಬೆಳ್ಳಿಯಪ್ಪ ಹಾಗೂ ಕುಶಾಲಪ್ಪ ಅವರ ಮೂಲಕ ಈ ವಂಶ ಬೆಳೆಯಿತು. ಈ ಕುಟುಂಬದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ನಂಜುಂಡ ಅವರು ಈ ಕುಟುಂಬದ ಪಟ್ಟೆದಾರರಾಗಿದ್ದಾರೆ.

ಗಮನ ಸೆಳೆಯಲಿರುವ ಕಬಡ್ಡಿ: ಕ್ರಿಕೆಟ್‌ ಪಂದ್ಯಾವಳಿ ಸಂದರ್ಭ ಕಬಡ್ಡಿ ಪಂದ್ಯ ವಿಶೇಷ ಆಕರ್ಷಣೆಯಾಗಿದೆ. ಕಳೆದ ವರ್ಷ ಪುರುಷರ ಕಬಡ್ಡಿ ಆರಂಭವಾದರೆ, ಈ ಬಾರಿ ಮಹಿಳಾ ತಂಡಗಳ ನಡುವೆಯೂ ಕಬಡ್ಡಿ ಏರ್ಪಡಿಸಲಾಗಿದೆ. 8 ತಂಡಗಳು ಸೆಣಸಲಿವೆ. ಪುರುಷರ ವಿಭಾಗದಲ್ಲಿ 32 ಕುಟುಂಬ ತಂಡಗಳು ಪೈಪೋಟಿ ನಡೆಸಲಿವೆ.

ಕೊಡಗು ಗೌಡ ಯುವ ವೇದಿಕೆ ಕಳೆದ ಹಲವು ವರ್ಷಗಳಿಂದ ಗೌಡ ಕುಟುಂಬಗಳ ನಡುವೆ ಕ್ರಿಕೆಟ್‌ ಪಂದ್ಯಾವಳಿ ಏರ್ಪಡಿಸುತ್ತಿದೆ. ಈ ಬಾರಿ ಪೈಕೆರ ಕಪ್‌ನಲ್ಲಿ ಹಲವು ವಿಶೇಷತೆಗಳಿರುತ್ತವೆ. ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ.

-ಪೈಕೇರ ಮನಹೋರ್‌ ಮಾದಪ್ಪ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷರು

ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭೂಮಿ ಪೂಜೆ ಬಳಿಕ ಮೈದಾನ ಸಿದ್ಧಪಡಿಸಲಾಗುತ್ತಿದೆ. ಎರಡು ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಬಹುತೇಕ ಎಲ್ಲಾ ತಯಾರಿ ಮುಗಿದಿದೆ. ಒಟ್ಟು 210 ತಂಡಗಳು ಸೆಣಸಲಿವೆ.

-ಕುಡೆಕಲ್‌ ಸಂತೋಷ್‌, ಪ್ರಚಾರ ಸಮಿತಿ ಅಧ್ಯಕ್ಷರು

ಕರ್ನಾಟಕ ಅರೆಬಾಷೆ ಅಕಾಡೆಮಿ 2016-17 ಪ್ರಶಸ್ತಿ ಪ್ರಕಟ