ನಾಡ ಹಬ್ಬ ದಸರಾ ಬಹುಭಾಷಾ ಕವಿಗೋಷ್ಠಿ

ನಾಡ ಹಬ್ಬ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಮಡಿಕೇರಿ
ಪ್ರಕಟಣೆಯ ಕೃಪೆಗಾಗಿ,
ಮಡಿಕೇರಿ ನಾಡ ಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಬಹುಭಾಷಾ ಕವಿಗೋಷ್ಠಿಯನ್ನು ಈ ಬಾರಿಯೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಕವನಗಳನ್ನು ಆಹ್ವಾನಿಸಲಾಗಿದೆ. 
ಕನ್ನಡ, ಕೊಡವ, ಅರೆಭಾಷೆ, ತುಳು, ಬ್ಯಾರಿ, ಕೊಂಕಣಿ, ಆಂಗ್ಲ, ಹಿಂದಿ ಸೇರಿದಂತೆ ಬಹುಭಾಷೆಯ ಸ್ವರಚಿತ ಕವನಗಳನ್ನು ಸೆಪ್ಟಂಬರ್ ೮ರೊಳಗಾಗಿ ಕಳುಹಿಸುವಂತೆ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ತಿಳಿಸಿದ್ದಾರೆ. 
ಸ್ವರಚಿತ ಕವನಗಳನ್ನು ಸ್ಪಷ್ಟವಾಗಿ ಬರೆದಿರಬೇಕು ಇಲ್ಲವೇ ಡಿಟಿಪಿ ಮಾಡಿರಬೇಕು. ಕವನ ನಾಲ್ಕು ಪ್ಯಾರಾಗಳಿಗೆ ಮೀರಿರಬಾರದು. ಇವು ಎಲ್ಲಿಯೂ ಪ್ರಕಟವಾಗಿರಬಾರದು ಹಾಗೂ ಎಲ್ಲಿಯೂ ವಾಚನ ಮಾಡಿರಬಾರದು. ತಾವು ರಚಿಸಿದ ಕವನದ ಕೆಳಗೆ ಸಹಿಯೊಂದಿಗೆ ವಿಳಾಸ, ದೂರವಾಣಿ ಸಂಖ್ಯೆಯನ್ನು ಬರೆದಿರಬೇಕು. ಜಾತಿ, ಧರ್ಮ ಸೇರಿದಂತೆ ಪ್ರಚೋದನೆ ಅಥವಾ ಸಮಾಜಕ್ಕೆ ತಪ್ಪು ಸಂದೇಶ ನೀಡುವ ರೀತಿಯಲ್ಲಿ ಕವನ ಇರಬಾರದು.
ಇಂತಹ ಕವನಗಳನ್ನು ಸೆಪ್ಟಂಬರ್ ೮ ರೊಳಗೆ ‘ಐತಿಚಂಡ ರಮೇಶ್ ಉತ್ತಪ್ಪ, ಅಧ್ಯಕ್ಷರು, ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಕ್ಯಾರಾಫ್ ಪತ್ರಿಕಾ ಭವನ, ರೇಸ್‌ಕೋರ್ಸ್ ರೋಡ್, ಮಡಿಕೇರಿ’ ಈ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ. ಅಂತಿಮ ದಿನಾಂಕದ ನಂತರ ಬಂದವುಗಳನ್ನು ಹಾಗೂ ಬಹುಭಾಷಾ ಕವಿಗೋಷ್ಠಿಯ ನೀತಿಗೆ ವಿರುದ್ಧವಾಗಿರುವ ಕವನಗಳನ್ನು ಪರಿಗಣಿಸುವುದಿಲ್ಲ. ಆಯಾಯ ಭಾಷೆಯಲ್ಲಿ ಬಂದ ಕವನಗಳು ಸಂಖ್ಯೆ, ಅವುಗಳ ಗುಣಮಟ್ಟ, ಹೊಸಬರಿಗೆ ಆದ್ಯತೆ ಸೇರಿದಂತೆ ಹಲವು ಮಾನದಂಡಗಳಲ್ಲಿ ಆಯ್ಕೆಯಾದವುಗಳನ್ನು ಕವಿಗಳಿಗೆ ನಂತರ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ತಮ್ಮ ವಿಶ್ವಾಸಿ
ಐತಿಚಂಡ ರಮೇಶ್ ಉತ್ತಪ್ಪ, ಮಡಿಕೇರಿ

Other News

ಕೊಡಗಿನಲ್ಲಿ ಭಾರೀ ಮಳೆ: ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ

ಮಡಿಕೇರಿ: ಕೊಡಗಿನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕಾವೇರಿ, ಲಕ್ಷ್ಮಣತೀರ್ಥ ನದಿಗಳು ತುಂಬಿ ಹರಿಯುತ್ತಿದೆ.

ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಪ್ರವಾಹ ಏರ್ಪಡುವ ಸಾಧ್ಯತೆಗಳಿದೆ. ಕಾವೇರಿಯ ಉಗಮ ಸ್ಥಾನವಾದ ಕಾವೇರಿ ಮತ್ತು ಭಾಗಮಂಡಲ ಕ್ಷೇತ್ರದಲ್ಲಿ ಭಾರೀ ವರ್ಷಾಧಾರೆಯಿಂದ ತ್ರಿವೇಣಿ ಸಂಗಮ ಭರ್ತಿಯಾಗಿದೆ.

ಗಣನೀಯ ಪ್ರಮಾಣದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಕಾವೇರಿಯ ನೀರು ಸ್ನಾನ ಘಟ್ಟದ ಮೆಟ್ಟಿಲುಗಳನ್ನು ಮೀರಿದೆ. ನಾಪೋಕ್ಲು, ಭಾಗಮಂಡಲ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ.

ಮಡಿಕೇರಿ ತಾಲೂಕಿನ ಸಂಪಾಜೆ, ಚೆಂಬು, ಕರಿಕೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ.

ಚೆರಿಯಮನೆ ಕಪ್ - 2018

ತಳೂರು ತಂಡಕ್ಕೆ ಪೈಕೇರ ಕಪ್‌

ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಪರ್ಲಕೋಟಿ ತಂಡಕ್ಕೆ ನಿರಾಸೆ: 16 ರನ್‌ನಿಂದ ಸೋಲು

  ಪೈಕೇರ್‌ ಕ್ರಿಕೆಟ್‌ ಕಪ್‌ನ ಅಂತಿಮ ಹಣಾಹಣಿಯಲ್ಲಿ ತಳೂರು ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

  ಕೊಡಗು ಗೌಡ ಯುವ ವೇದಿಕೆ ವತಿಯಿಂದ, ಪೈಕೇರ ಕುಟುಂಬಸ್ಥರ ಆಶ್ರಯದಲ್ಲಿ ನಗರದ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯ ಫೈನಲ್‌ನಲ್ಲಿ ನಾಲ್ಕನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಪರ್ಲಕೋಟಿ ತಂಡದ ಆಸೆಯನ್ನು ತಳೂರು ತಂಡ ಭಗ್ನಗೊಳಿ ಚಾಂಪಿಯನ್‌ ಎನಿಸಿಕೊಂಡಿತು.

  ಫೈನಲ್‌ ಪಂದ್ಯಕ್ಕೆ ದಾನಿಗಳಾದ ಕೋಚನ ಪ್ರವೀಣ್‌ ಚೆಂಡನ್ನು ಬಾರಿಸುವ ಮೂಲಕ ಚಾಲನೆ ನೀಡಿದರು. ಟಾಸ್‌ ಗೆದ್ದ ಪರ್ಲಕೋಟಿ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ತಳೂರು ತಂಡದ ವಿಕ್ಕಿ ಹಾಗೂ ಜಿತು ಆರಂಭಿಕರಾಗಿ ಕಣಕ್ಕಿಳಿದರು. ಆದರೆ, ಮೊದಲ ಒವರ್‌ನಲ್ಲಿಯೇ ಜಿತು ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ 4ನೇ ಓವರ್‌ವರೆಗೂ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ತಂಡ 5ನೇ ಓವರ್‌ನಲ್ಲಿ ಆಕ್ರಮಣ ಆಟಕ್ಕಿಳಿಯಿತು. ವಿಕ್ಕಿ ಬಿರುಸಿನ ಆಟ ಪ್ರದರ್ಶಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. 5ನೇ ಓವರ್‌ನ ಮೊದಲ ಎಸೆತವನ್ನು ಬಾನಂಗಳದಲ್ಲಿ ತೇಲಿಸಿ ಸಿಕ್ಸ್‌ರ್‌ ಬಾರಿಸಿದ ವಿಕ್ಕಿ, ಎರಡನೇ ಎಸೆತದಲ್ಲಿ ಜೀವದಾನ ಪಡೆದು ಎರಡು ರನ್‌ ಗಳಿಸಿದರು. ನಂತರ ಸತತ ಮೂರು ಸಿಕ್ಸರ್‌ ಹಾಗೂ 1 ಬೌಂಡರಿ ಮೂಲಕ 30 ರನ್‌ ಕಲೆ ಹಾಕಿ ಉತ್ತಮ ರನ್‌ ಕಲೆ ಹಾಕುವಲ್ಲಿ ಯಶಸ್ವಿಯಾದರು. ಅಂತಿಮವಾಗಿ 17 ಬಾಲ್‌ನಲ್ಲಿ 42 ರನ್‌ ಚಚ್ಚಿ ಲಕ್ಷಿತ್‌ ಎಸೆತದಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಬಿರುಸಿನ ಆಟವಾಡಲು ವಿಫಲರಾದರು. ಆದರೆ ಮಧ್ಯಮ ಕ್ರಮಂಕದ ಬ್ಯಾಟ್ಸ್‌ಮನ್‌ ವಿಜು ತಾಳ್ಮೆ ಆಟವಾಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಫಲರಾದರು. ಮನೋಜ್‌ 1, ಅಣ್ಣಯ್ಯ 2, ಪ್ರಸಾದ್‌ 1, ಪವನ್‌ 4, ಗಗನ್‌ 2 ರನ್‌ ಗಳಿಸಿದರು. ನಿಗದಿತ 10 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 89 ರನ್‌ ಕಲೆಹಾಕಿತು.

  ಗೆಲುವಿಗಾಗಿ 90 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ ಪರ್ಲಕೋಟಿ ತಂಡ 16 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಸಜನ್‌ ಹಾಗೂ ದರ್ಶನ್‌ರ ಬಿರುಸಿನ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ಪಡೆಯಿತಾದರೂ (ಸಜನ್‌ 17, ದರ್ಶನ್‌ 11) ಗೆಲ್ಲುವ ಕನಸು ನನಸಾಗಲಿಲ್ಲ. ಸನತ್‌ 14 ಗಳಿಸಿ ಔಟಾದರೆ, ಬಳಿಕ ಬಂದ ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನೂ ದಾಟಲಿಲ್ಲ. ಸತ್ಯ 8, ರಜಿತ್‌ 1, ದಿಜಿತ್‌ 7, ಕೀರ್ತನ್‌ 0, ದಯಾ 6 ರನ್‌ಗಳಿಸಿದರು. ಅಂತಿಮವಾಗಿ ಪರ್ಲಕೋಟಿ ತಂಡ 16 ರನ್‌ಗಳಿಂದ ಪರಾಭವಗೊಂಡಿತು.

ಕುಣಿದು ಕುಪ್ಪಳಿಸಿದರು...

  ಫೈನಲ್‌ ಪಂದ್ಯಾವಳಿಗೆಂದು ಕಾರ್ಯಕ್ರಮ ಆಯೋಜಕರು ವಿಶೇಷ ಬ್ಯಾಂಡ್‌ ವ್ಯವಸ್ಥೆ ಮಾಡಿದ್ದರು. ಬ್ಯಾಟ್ಸ್‌ಮನ್‌ಗಳು ಬೌಂಡರಿ, ಸಿಕ್ಸರ್‌ ಬಾರಿಸುತ್ತಿದ್ದಂತೆ ಬ್ಯಾಂಡ್‌ ಬಾರಿಸಿ ಕ್ರೀಡಾಭಿಮಾನಿಗಳ ಹರುಷವನ್ನು ದುಪ್ಪಟ್ಟು ಮಾಡುತ್ತಿದ್ದರು. ತಳೂರು ತಂಡ ಜಯ ಸಾಧಿಸಿದೊಡನೆ ತಂಡದ ಕುಟುಂಬಸ್ಥರು ಹಾಗೂ ಆಟಗಾರರು ಮೈದಾನ ಪ್ರವೇಶಿಸಿ ಕುಣಿದಾಡಿದರು. ಮಹಿಳೆಯರು ಮಕ್ಕಳು ಸೇರಿದಂತೆ ಕುಟುಂಬ ವರ್ಗದವರೆಲ್ಲ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮೂರನೇ ಸ್ಥಾನ-ದಂಬೆಕೋಡಿ ಹಾಗೂ ಊಳುವಾರನ

ಪಂದ್ಯಶ್ರೇಷ್ಠ-ಪರ್ಲಕೋಟಿ ಸಜನ್‌

ಉತ್ತಮ ಬೌಲರ್‌-ಊಳುವಾರನ ಮೋಕ್ಷಿತ್‌

ಉತ್ತಮ ಬ್ಯಾಟ್ಸ್‌ಮನ್‌ -ತಳೂರು ವಿಕ್ಕಿ

ಉತ್ತಮ ಆಲ್‌ ರೌಂಡರ್‌-ತಳೂರು ಜೀತು

ಪಂದ್ಯಾವಳಿಯಲ್ಲಿ ಹೆಚ್ಚು ಸಿಕ್ಸರ್‌ ಗಳಿಸಿದವರು-ಪೈಕೇರ ಗಗನ್‌

ಫೈರ್‌ ಪ್ಲೇ ಟೀಮ್‌-ದಂಬೆಕೋಡಿ

ಕಬ್ಬಡಿ (ಪುರುಷರು) -ಕೊಳಂಬೆ (ಪ್ರ)

ಪೀಚೆಮನೆ (ದ್ವಿ)

ಕಬ್ಬಡಿ ಮಹಿಳೆಯರು-ಹೊಸೋಕ್ಲು (ಪ್ರ)

ಕೂರ್ಗ್‌ ಕ್ವಿನ್ಸ್‌ (ದ್ವಿ)

ಥ್ರೋ ಬಾಲ್‌ (ಮಹಿಳೆಯರು)

ಕಟ್ಟೆಮನೆ (ಪ್ರ)

ಬೈನೆರವನ(ದ್ವಿ)

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

  ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್‌ ಉದ್ಘಾಟಿಸಿದರು. ಅರೆಭಾಷೆ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ಸೆಳೆಯಿತು. ಚೊಕ್ಕಾಡಿ ಪ್ರೇಮ ಮತ್ತು ತಂಡದಿಂದ ನಡೆದ ಸಾಂಸ್ಕೃತಿಕ ನೃತ್ಯ, ಕೂಡಕಂಡಿ ತರುಣ್‌ ಹಾಗೂ ತಂಡದಿಂದ ನಡೆದ ಸಾಂಸ್ಕೃತಿಕ ಉಡುಪು ಪ್ರದರ್ಶನ, ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆದ ಬೆಳಕಾಟ್‌, ಕುಕ್ಕೆರ ಲಕ್ಷ ್ಮಣ ಮಾರ್ಗದರ್ಶನದಲ್ಲಿ ಮೂಡಿಬಂದ ವೀರ ಚರಿತ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಹಾಸ್ಯ ಕಲಾವಿದ ರಾಘವೇಂದ್ರ ಮತ್ತು ತಂಡದಿಂದ ಹಾಸ್ಯ ಲಹರಿ ಹಾಗೂ ರಸಮಂಜರಿ ಕಾರ್ಯಕ್ರಮ ಪ್ರೇಕ್ಷ ಕರಿಂದ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ರಾಯಲ್‌ ಬ್ರದರ್ಸ್‌ ಸಂಸ್ಥೆಯ ಪ್ರಾಯೋಜಕತ್ವದಲ್ಲಿಮೈಸೂರಿನ ಸಾವನ್‌ ತಂಡದಿಂದ ರಾಕ್‌ ಮ್ಯೂಸಿಕ್‌ ಕಾರ್ಯಕ್ರಮ ಪ್ರೇಕ್ಷ ಕರಿಂದ ಚಪ್ಪಾಳೆ ಗಿಟ್ಟಿಸಿತು.

ಸನ್ಮಾನ

  ಕಾರ್ಯಕ್ರಮದಲ್ಲಿ ಶಿಕ್ಷ ಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೊಂಪುಳಿರ ಆನಂದ್‌, ಶಿಕ್ಷ ಣ ಕ್ಷೇತ್ರದ ಸಾಧನೆಗಾಗಿ ದೇವಜನ ಮೋಹನ್‌, ಸಾಹಿತ್ಯ ಕ್ಷೇತ್ರದಲ್ಲಿ ಕಟ್ರತನ ಬೆಳ್ಯಪ್ಪ ಮತ್ತು ಪಟ್ಟಡ ಪ್ರಭಾಕರ್‌, ಕ್ರೀಡಾಕ್ಷೇತ್ರದಲ್ಲಿ ಚೆರಿಯಮನೆ ಮೇಘ ಪ್ರಭಾಕರ್‌, ಕುಯ್ಮುಡಿ ಹನಿ, ಚೋಂಡಿರ ತವನ್‌, ಮೇರ್ಕಜೆ ಗಿರೀಶ್‌, ರಾಜ್ಯ ಮಟ್ಟದ ಕರಾಟೆ ಪಟು ಬೈಲೇರ ಪ್ರೊನಿಕ್ಷ , ಸಹಕಾರಿ ಕ್ಷೇತ್ರ ಕಾಂಗೀರ ಸತೀಶ್‌, ಲಾಂಛನ ವಿನ್ಯಾಸ ಪುದಿಯನೆರವನ ರಿಶಿತ್‌ ಮಾದಯ್ಯ ಹಾಗೂ ಕರ್ಣಯ್ಯನ ಅನೂಪ್‌ ಕಾರ್ಯಪ್ಪರವರನ್ನು ಸನ್ಮಾನಿಸಲಾಯಿತು.

ಐನ್‌ಮನೆ ವೇದಿಕೆ

  ಪೈಕೇರ ಕಪ್‌ನ ಸಭಾ ಕಾರ್ಯಕ್ರಮದ ಅಂಗವಾಗಿ ವೇದಿಕೆಯಲ್ಲಿ ಪೈಕೇರ ಕುಟುಂಬಸ್ಥರ ಐನ್‌ಮನೆ ರೀತಿಯ ವೇದಿಕೆ ಸಿದ್ಧಪಡಿಸಿದ್ದು ವಿಶೇಷವಾಗಿತ್ತು. ಆಧುನಿಕ ಯುಗದಲ್ಲಿ ಐನ್‌ಮನೆ ಎಂಬ ಪರಿಕಲ್ಪನೆ ದೂರವಾಗುತ್ತಿದ್ದು, ಮೂಲೆ ಗುಂಪಾಗಿರುವ ಐನ್‌ಮನೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಐನ್‌ ಮನೆ ರೀತಿಯ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು ಕ್ರೀಡಾಭಿಮಾನಿಗಳ ಮನಸೂರೆಗೊಂಡಿತು.

KDK cricket tournament 2017 has been postponed

Due to heavy rain in Bangalore, KDK cricket tournament 2017 has been postponed. The reschedule date will be announced soon.

HMT ground

ನಿಡ್ಯಮಲೆ ಕಪ್ - 2018