ನಾಡ ಹಬ್ಬ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಮಡಿಕೇರಿ
ಪ್ರಕಟಣೆಯ ಕೃಪೆಗಾಗಿ,
ಮಡಿಕೇರಿ ನಾಡ ಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಬಹುಭಾಷಾ ಕವಿಗೋಷ್ಠಿಯನ್ನು ಈ ಬಾರಿಯೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಕವನಗಳನ್ನು ಆಹ್ವಾನಿಸಲಾಗಿದೆ.
ಕನ್ನಡ, ಕೊಡವ, ಅರೆಭಾಷೆ, ತುಳು, ಬ್ಯಾರಿ, ಕೊಂಕಣಿ, ಆಂಗ್ಲ, ಹಿಂದಿ ಸೇರಿದಂತೆ ಬಹುಭಾಷೆಯ ಸ್ವರಚಿತ ಕವನಗಳನ್ನು ಸೆಪ್ಟಂಬರ್ ೮ರೊಳಗಾಗಿ ಕಳುಹಿಸುವಂತೆ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ತಿಳಿಸಿದ್ದಾರೆ.
ಸ್ವರಚಿತ ಕವನಗಳನ್ನು ಸ್ಪಷ್ಟವಾಗಿ ಬರೆದಿರಬೇಕು ಇಲ್ಲವೇ ಡಿಟಿಪಿ ಮಾಡಿರಬೇಕು. ಕವನ ನಾಲ್ಕು ಪ್ಯಾರಾಗಳಿಗೆ ಮೀರಿರಬಾರದು. ಇವು ಎಲ್ಲಿಯೂ ಪ್ರಕಟವಾಗಿರಬಾರದು ಹಾಗೂ ಎಲ್ಲಿಯೂ ವಾಚನ ಮಾಡಿರಬಾರದು. ತಾವು ರಚಿಸಿದ ಕವನದ ಕೆಳಗೆ ಸಹಿಯೊಂದಿಗೆ ವಿಳಾಸ, ದೂರವಾಣಿ ಸಂಖ್ಯೆಯನ್ನು ಬರೆದಿರಬೇಕು. ಜಾತಿ, ಧರ್ಮ ಸೇರಿದಂತೆ ಪ್ರಚೋದನೆ ಅಥವಾ ಸಮಾಜಕ್ಕೆ ತಪ್ಪು ಸಂದೇಶ ನೀಡುವ ರೀತಿಯಲ್ಲಿ ಕವನ ಇರಬಾರದು.
ಇಂತಹ ಕವನಗಳನ್ನು ಸೆಪ್ಟಂಬರ್ ೮ ರೊಳಗೆ ‘ಐತಿಚಂಡ ರಮೇಶ್ ಉತ್ತಪ್ಪ, ಅಧ್ಯಕ್ಷರು, ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಕ್ಯಾರಾಫ್ ಪತ್ರಿಕಾ ಭವನ, ರೇಸ್ಕೋರ್ಸ್ ರೋಡ್, ಮಡಿಕೇರಿ’ ಈ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ. ಅಂತಿಮ ದಿನಾಂಕದ ನಂತರ ಬಂದವುಗಳನ್ನು ಹಾಗೂ ಬಹುಭಾಷಾ ಕವಿಗೋಷ್ಠಿಯ ನೀತಿಗೆ ವಿರುದ್ಧವಾಗಿರುವ ಕವನಗಳನ್ನು ಪರಿಗಣಿಸುವುದಿಲ್ಲ. ಆಯಾಯ ಭಾಷೆಯಲ್ಲಿ ಬಂದ ಕವನಗಳು ಸಂಖ್ಯೆ, ಅವುಗಳ ಗುಣಮಟ್ಟ, ಹೊಸಬರಿಗೆ ಆದ್ಯತೆ ಸೇರಿದಂತೆ ಹಲವು ಮಾನದಂಡಗಳಲ್ಲಿ ಆಯ್ಕೆಯಾದವುಗಳನ್ನು ಕವಿಗಳಿಗೆ ನಂತರ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ವಿಶ್ವಾಸಿ
ಐತಿಚಂಡ ರಮೇಶ್ ಉತ್ತಪ್ಪ, ಮಡಿಕೇರಿ