ಸುಳ್ಯ ಸೀಮೆಯ ತೊಡಿಕಾನ ಗ್ರಾಮದಿಂದ ಕೊಡಗು ಜಿಲ್ಲೆಯ ಪೆರಾಜೆ ಗ್ರಾಮಕ್ಕೆ ಪ್ರವೇಶಿಸುವಾಗ ಗಡಿಭಾಗದಲ್ಲಿ ದೊರೆಯುವುದೇ "ಕುಂಟುಕಾಡು ಮನೆ". ಸರಿ ಸುಮಾರು 500 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಕುಟುಂಬ. ಎರಡೂ ಕಡೆ ಗುಡ್ದ ಪ್ರದೇಶವಿದ್ದು, ಮಧ್ಯಭಾಗದಲ್ಲಿ ಕಣಿವೆಯಂತಿದ್ದು ಪಶ್ಚಿಮದಲ್ಲಿ ಹುಟ್ಟಿ ಪೂರ್ವದೆಡೆಗೆ ನೀರು ಹರಿದು ಹೋಗುವ ಪವಿತ್ರ ಭೂಮಿ ತೊಡಿಕಾನ ಗ್ರಾಮದಲ್ಲಿ ಬೇರೊಂದಿಲ್ಲ. ಹಾಗಾಗಿ ಇಲ್ಲಿ ಯಾವುದೇ ರೀತಿಯ ಅಧರ್ಮದ ಕಾರ್ಯಗಳಿಗೆ ಜಯವಿಲ್ಲವೆಂಬುದು ಐತಿಹ್ಯ.
Family Info
ಕುಂಟುಕಾಡು ಮನೆ
Bali/Gothra
ನಂದರ ಗೋತ್ರ
Family population
150+
Kutumbada Yajamana
ಕುಂಟುಕಾಡು ಸೋಮಪ್ಪ ಗೌಡ
Ainmane/Tharavadu Location
ತೊಡಿಕಾನ ಗ್ರಾಮ
Ainmane/Tharavadu Address
ಕುಂಟುಕಾಡು ಮನೆ, ತೊಡಿಕಾನ ಗ್ರಾಮ ಮತ್ತು ಅಂಚೆ, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ - 574314
Rituals and programs at Ainmane/Tharavadu
ಸಂಕ್ರಮಣಗಳಂದು ದೈವದ ಚಾವಡಿಯಲ್ಲಿ ದೀಪವಿಡುವುದು. ಸೋಣ ತಿಂಗಳಲ್ಲಿ ಪ್ರತೀ ಮಂಗಳವಾರಗಳಂದು ದೀಪವಿಡುವುದು.
ವರ್ಷಕ್ಕೊಮ್ಮೆ ಮುಡಿಪು ಶುದ್ಧ
ಕಾರ್ತಿಂಗಳ 10ರಂದು ದೈವಗಳಿಗೆ ಅಗೆಲು ಸೇವೆ ಹಾಗೂ ಬಿಂದು ತರ್ಪಣ. ಕೊನೆಯಲ್ಲಿ ಒಂದು ಹೇಂಟೆ ಕೋಳಿಯ ಜುಟ್ಟು ಕೊಯಿದು ಬಿಡುವ ವಿಶೇಷ ಕ್ರಮ!! ನಂತರ ಮುಂದಿನ ದಿನದಲ್ಲಿ ಗುಳಿಗನಿಗೆ ಬಡಿಸುವುದು. ಅಲ್ಲೂ ಕೂಡ ಹೇಂಟೆ ಕೋಳಿ ಮಾತ್ರ ಬಳಕೆ.
ಡಿಸೆಂಬರ್ ತಿಂಗಳ ಒಂದು ಸೂಕ್ತ ದಿನದಂದು ನಾಗನಿಗೆ ತಂಬಿಲ.
ಪ್ರತೀ 5 ವರ್ಷಗಳಿಗೊಮ್ಮೆ "ಧರ್ಮ ನಡಾವಳಿ". ವೆಂಕಟ್ರಮಣ ದೇವರ ಹರಿಸೇವೆ, ಉಪದೈವಗಳಾದ ಗುರು ಕಾರ್ನೂರು,ವರ್ಣಾರ ಪಂಜುರ್ಲಿ, ಜಾವತೆ, ಕುಪ್ಪೆಪಂಜುರ್ಲಿ, ಪಾಷಾಣಮೂರ್ತಿ, ಭೂಮಿ ಗುಳಿಗ ಇವುಗಳ ಕೋಲ ಕಳೆದು ಮರುದಿನ ಧರ್ಮ ದೈವ ರುದ್ರಚಾಮುಂಡಿ ಹಾಗೂ ಹಿತ್ತಿಲ್ ಚಾಮುಂಡಿ ನೇಮ.
ಹಿತ್ತಿಲ್ ಚಾಮುಂಡಿ ಇತರೆಡೆ ಅಷ್ಟಾಗಿ ಕಂಡುಬರದ ದೈವದ ನೇಮ. ಬ್ರಾಹ್ಮಣನೊಬ್ಬ ದೈವಕ್ಕೆ ಇಟ್ಟ ನೈವೇದವನ್ನು ಪಡೆದು ಮೈಲಿಗೆ ಮಾಡಿರುತ್ತಾನೆ. ಅದರಿಂದ ದೈವ ಆ ಬ್ರಾಹ್ಮಣನನ್ನು ಕೊಂದು ತನ್ನ ಸೇರಿಗೆಗೆ ಸೇರಿಸಿಕೊಂಡಿರುತ್ತದೆ. ಕೋಲದ ಸಂದರ್ಭದಲ್ಲಿ ದೈವದ ಜೊತೆ ಬ್ರಾಹ್ಮಣ ವೇಷಧಾರಿಯೂ ದೈವಕ್ಕೆ ಕೊಡುವ ಎಳನೀರನ್ನು ಕಸಿದು ಕುಡಿಯುವ ಪ್ರಸಂಗ ಹಾಸ್ಯದ ಜೊತೆಗೆ ಮನೋಜ್ಞವಾಗಿರುತ್ತದೆ.
Stories
ಕಾರ್ಕಳದ ಭೈರರಸನನ್ನು ಬಗ್ಗುಬಡಿದು, ಅವನ ಮಗಳಿಗೆ ಹುಚ್ಚು ಹಿಡಿಸಿ, ಅವನ ಅರಮನೆಗೆ ಬೆಂಕಿಯಿಟ್ಟ ದೈವ ಕಲ್ಲುರ್ಟಿ ; ಕರಾಯದ ವೈಲಾಯರೊಡನೆ ತೊಡಿಕಾನ ಶ್ರೀ ಮಲ್ಲಿಕಾರ್ಜುನನ ಸನ್ನಿಧಿಗೆ ಬರುತ್ತಿರುತ್ತಾರೆ. ಮಾರ್ಗ ಮಧ್ಯೆ ಪೆರಾಜೆ ಗಡಿಗುಡ್ಡೆ ದಾಟಿ ಕುಂಟುಕಾಡು ಮೂಲಕ ಸಾಗುತ್ತಿದ್ದಾಗ ಅವರಿಗೆ ಬಾಯಾರಿಕೆಯಾಗಿ ನೀರು ಕೇಳುತ್ತಾರೆ. ತಕ್ಷಣ ಕುಂಟುಕಾಡು ಕುಟುಂಬಸ್ಥರು ಅವರಿಗೆ ನೀರಿನ ಬದಲು ಎಳನೀರು ಕೊಟ್ಟು ಸತ್ಕರಿಸುತ್ತಾರೆ. ಇದರಿಂದ ಸಂತುಷ್ಟಗೊಂಡ ಕಾರಣ ತೊಡಿಕಾನ ಶ್ರೀ ಮಲ್ಲಿಕಾರ್ಜುನನ ಸನ್ನಿಧಾನದ ರಕ್ಷಣೆಯಲ್ಲಿ ಪ್ರಧಾನ ಎನಿಸಿರುವ ಕಲ್ಲುರ್ಟಿ ತನ್ನ "ಪೂಜಾರಿ ಪಟ್ಟ"ವನ್ನು ಕುಂಟುಕಾಡು ಕುಟುಂಬಸ್ಥರಿಗೆ ನೀಡುತ್ತಾಳೆ. ಇದು ತಲೆತಲಾಂತರದಿಂದ ಹಾಗೇ ಮುಂದುವರಿಯುತ್ತಿದ್ದು, ಈ ಮಾತು ತೊಡಿಕಾನದ ಕಲ್ಲುರ್ಟಿಯ ಕೋಲದ ಸಮಯದ ಪಾಡ್ದನದಲ್ಲೂ ಉಲ್ಲೇಖಗೊಂಡಿದೆ.
ಪೂರ್ವ ಕಾಲದಲ್ಲಿ ತೊಡಿಕಾನದ ಜಾತ್ರೆ ಸಂದರ್ಭದಲ್ಲಿ ಕೊಡಿಮರ ಏರಿಸುವ ಹಕ್ಕು ಕುಂಟುಕಾಡು ಮನೆತನದವರದ್ದಾಗಿತ್ತಂತೆ. ದೇವಸ್ಥಾನದಿಂದ ಒಂದು ಸೂಡಿ ವೀಳ್ಯಕೊಟ್ಟು ಆ ಜವಾಬ್ಧಾರಿಯನ್ನು ನೀಡಲಾಗುತ್ತಿತ್ತಂತೆ. ಕೇಳಿದ ಮಾತುಗಳಷ್ಟೆ. ಸೂಕ್ತ ಉಲ್ಲೇಖಗಳಿಲ್ಲ!!