ಪ್ರತೀ ದಿವಸ ತಳಮನೆಯಲ್ಲಿ ದೀಪ ಇಡುವುದು.
ಪ್ರತೀ ಸಂಕ್ರಮಣದಂದು ಚಾವಡಿಗೆ ದೀಪ ಇಡುವ ಪದ್ದತಿ.
ಪ್ರತೀ ವರ್ಷ ದೀಪಾವಳಿ ದಿನದಂದು ಕುಲದೇವರ ಮುಡಿಪು ತಂಬಿಲ ಮತ್ತು ಗೋತ್ರ ದೇವರಾದ ಮುನಿಸ್ವಾಮಿ ದೇವರ ಪೂಜೆ ಮತ್ತು ಧರ್ಮದೈವದ ತಂಬಿಲ.
ಪ್ರತೀ ವರ್ಷ ಮಾರ್ಚ್ 29 ಮತ್ತು 30ಕ್ಕೆ ಶ್ರೀ ಮಹಾ ವಿಷ್ಣುಮೂರ್ತಿ ದೈವದ ಬಯಲು ಕೋಲ.
5 ವರ್ಷಕ್ಕೆ ಒಮ್ಮೆ ಕುಟುಂಬದ ಧರ್ಮ ನಡಾವಳಿ ಮತ್ತು ಹರಿಸೇವೆ ಮತ್ತು ಕಂಚಿರಾಯನ ಪೂಜೆ.
ಪ್ರತೀ ವರ್ಷ ಚೌತಿ ದಿನ ಬೆಳಗ್ಗೆ ತೆನೆ ಪೂಜೆ ರಾತ್ರಿ ಹೊಸಕ್ಕಿ ಊಟ
ತೊಡಿಕಾನ ಕ್ಷೇತ್ರದ ಆಡಳಿತವನ್ನು ಪೂರ್ವ ಬಲ್ಲಾಳರಿಗೆ ಪುತ್ರ ಸಂತಾನ ಇಲ್ಲದ ಕಾರಣ ಉಳುವಾರು ಮನೆತನಕೆ ಧಾರೆ ಎರೆದು ಕೊಟ್ಟ ಕಾರಣ “ಪ್ರತಿ ಬಲ್ಲಾಳು” ಎಂದು ಕರೆಯುತ್ತಾರೆ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾದ ಅಮರ ಸುಳ್ಯದ ಸ್ವಾತಂತ್ರ್ಯ ದಂಗೆಯಲ್ಲಿ ಕೆದಂಬಾಡಿ ರಾಮ ಗೌಡ ಅನುಯಾಯಿ ಆಗಿದ್ದ ಕೃಷ್ಣಯ್ಯ ಗೌಡ ರನ್ನು ಬ್ರಿಟಿಷರು ಬಂದಿಸಿ ಗಲ್ಲಿಗೇರಿಸುತ್ತಾರೆ
ಸುಳ್ಯ ಸೀಮೆಯ ಯಾವುದೇ ಧೈವ ದೇವರ ಕಾರ್ಯಕ್ರಮಕ್ಕೆ ಹೋದರೆ ಜೋಡು ಎಳನೀರು ನೀಡಿ ಸತ್ಕಾರಿಸುತ್ತಾರೆ